
'ಶಂಕರ್‌ನಾಗ್‌ಗೆ ಅಷ್ಟು ಚಿಕ್ಕ ವಯಸ್ಸಲ್ಲೇ ಸಕ್ಸಸ್ ಸಿಕ್ಕಿತ್ತಲ್ಲಾ, ಆದ್ರೆ ಒಂದು ಸಂಗತಿ ಮಾತ್ರ ನಾನು ನೋಟೀಸ್ ಮಾಡಿದ್ದೆ, ಯಶಸ್ಸು ಅವನ ತಲೆಗೆ ಹೋಗಿರಲಿಲ್ಲ. ಅವ್ನು ಆಯ್ತು, ಅವ್ನ ಕೆಲಸ ಆಯ್ತು, ಅವ್ನ ಒಂದು ಪೈಜಾಮ, ಒಂದು ಕುರ್ತಾ, ಹರಕಲು ಚಪ್ಪಲಿ, ಅಷ್ಟೇ.. ಇನ್ನೇನೂ ಬೇಕಾಗಿರ್ಲಿಲ್ಲ. ಕೆಲಸ ಮಾಡ್ಬೇಕು, ಕೆಲ್ಸ ಮಾಡ್ಬೇಕು, ಅಷ್ಟೇ.. ಬೇಸಿಕ್ ಹ್ಯುಮಿಲಿಟಿ ತುಂಬಾ ಇತ್ತು, ಏರ್‌ಪೋರ್ಟಿಗೆ ಹೋದ್ರೆ ವಯಸ್ಸಾಗಿರೋರು ಯಾರಾದ್ರೂ ಇದ್ರೆ, ಶಂಕರ್ (Shankar Nag)ಹೋಗಿ ಅವ್ರ ಕೈನಲ್ಲಿ ಇದ್ದ ಬ್ಯಾಗ್ ಕಿತ್ಕೊಂಡು ಬಿಡೋವ್ರು, ನಾನು ತಂದುಕೊಡ್ತೀನಿ ಅಂತ.
ಬೇಸಿಕ್ ಹ್ಯೂಮನ್ ಕ್ವಾಲಿಟಿನಾ ಅವ್ರು ಯಾವತ್ತೂ ಬಿಟ್ಟಿರಲಿಲ್ಲ' ಎಂದಿದ್ದಾರೆ ದಿವಂಗತ ಶಂಕರ್‌ನಾಗ್ ಪತ್ನಿ ಅರುಂಧತಿ ನಾಗ್ (Arundathi Nag). ಏರ್‌ಪೋರ್ಟಿನಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕಿದ ಶಂಕರ್‌ನಾಗ್ ಪತ್ನಿ ಅರುಂಧತಿ ನಾಗ್, ಶಂಕರ್‌ನಾಗ್ ಅವರಲ್ಲಿದ್ದ ಮಾನವೀಯತೆ ಗುಣವನ್ನು ಅನಾವರಣ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಮೇರು ನಟ-ನಿರ್ದೇಶಕ ಶಂಕರ್‌ನಾಗ್ ಅವರು ಬದುಕಿದ್ದು ಕೇವಲ 35 ವರ್ಷಗಳು. ಆದರೆ ಅಷ್ಟರಲ್ಲಿ ಅವರು ಸಾಧಿಸಿದ್ದು ಮಾತ್ರ ಗಮನಾರ್ಹವಾದುದು.
ಅಷ್ಟು ಚೆನ್ನಾಗಿ ಹಾಡುವ ಡಾ ರಾಜ್ ಇಷ್ಟು ದಿನ ಆ ಅವಕಾಶವನ್ನು ನಂಗೆ ಬಿಟ್ಟಿದ್ದರಲ್ಲಾ; ಪಿಬಿ ಶ್ರೀನಿವಾಸ್!
ಡಾ ರಾಜ್‌ಕುಮಾರ್ ನಟನೆಯ 'ಒಂದು ಮುತ್ತಿನ ಕಥೆ' ಸಿನಿಮಾ ನಿರ್ದೇಶನವನ್ನು ಮಾಡಿದ್ದರು ನಟ ಶಂಕರ್‌ನಾಗ್. 'ಮಿಂಚಿನ ಓಟ, ಆಕಸ್ಮಿಕ, ಜೀವನ ಚಕ್ರ, ನೋಡಿ ಸ್ವಾಮಿ ನಾವಿರೋದೆ, ತಾಳಿಯ ಭಾಗ್ಯ ಹೀಗೆ ಹತ್ತು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಲ್ಲದೇ ಟಿವಿ ಸೀರಿಯಲ್‌ಗಳಲ್ಲಿ ನಟಿಸಿ, ನಿರ್ದೇಶನವನ್ನೂ ಮಾಡಿದ್ದರು. ಆ ಕಾಲದಲ್ಲಿಯೇ ಅಂಡರ್ ವಾಟರ್ ಕ್ಯಾಮರಾ ಬಳಿಸಿ 'ಒಂದು ಮುತ್ತಿನ ಕಥೆ'ಯಲ್ಲಿ ಶೂಟಿಂಗ್ ಮಾಡಿ ದಾಖಲೆ ನಿರ್ಮಿಸಿದ್ದಾರೆ ಶಂಕರ್‌ನಾಗ್. 35 ವರ್ಷ ಬದುಕಿದ್ದ ನಟ ಶಂಕರ್‌ನಾಗ್ ಅಷ್ಟರಲ್ಲೇ ಸಾಕಷ್ಟು ವಿದೇಶಗಳಲ್ಲಿ ಕೂಡ ತಮ್ಮ ನಿರ್ದೇಶನದ ಸಿನಿಮಾಗಳ ಶೂಟಿಂಗ್ ಸಹ ಮಾಡಿದ್ದರು.
ಹೊಟೆಲ್ ರೂಮಿನಲ್ಲಿ ಕುಂಕುಮ ಹಚ್ಚಿದೆ, ಅಲ್ಲೇ ಫಸ್ಟ್ ನೈಟ್ ಆಯ್ತು; ಲಕ್ಷ್ಮೀ ಮಾಜಿ ಪತಿ ಶಾಕಿಂಗ್ ಹೇಳಿಕೆ!
ದಾವಣಗೆರೆ ಬಳಿ ನಡೆದ ರಸ್ತೆ ಅಪಘಾತದಲ್ಲಿ 30 ಸೆಪ್ಟೆಂಬರ್ 1990ರಲ್ಲಿ ಇಹಲೋಕ ತ್ಯಜಿಸಿದ ನಟ ಶಂಕರ್‌ನಾಗ್ ಕನ್ನಡಿಗರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದ್ದಾರೆ. 35 ವರ್ಷಗಳು ಮಾತ್ರ ಬದುಕಿದ್ದ ನಟ-ನಿರ್ದೇಶಕ ಶಂಕರ್‌ನಾಗ್ ತೀರಿಕೊಂಡು 35 ವರ್ಷ ವರ್ಷಗಳಾದ ಈ ಸಮಯದಲ್ಲಿ, ಅವರ ಹೆಂಡತಿ ಅರುಂಧತಿ ನಾಗ್ ಮಾತನಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಾನವೀಯತೆಯ ಮೂರ್ತಿಯಂತಿರುವ ಶಂಕರ್‌ನಾಗ್ ಅವರನ್ನು ಕರುನಾಡು ಎಂದಿಗೂ ಮರೆಯಲಾಗದು.
ಸದ್ಯದಲ್ಲೇ ತೆರೆಗೆ ಸತೀಶ್-ರಚಿತಾ ನಟನೆಯ ಮ್ಯಾಟ್ನಿ; ಮತ್ತೆ ಕಮಾಲ್ ಮಾಡಲಿದ್ಯಾ ಅಯೋಗ್ಯ ಜೋಡಿ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.