
'ದಿಯಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪ್ರೀತಿಯ ಹೊಸ ಅಲೆ ಎಬ್ಬಿಸಿದ ನಟ ದೀಕ್ಷಿತ್ ಶೆಟ್ಟಿ ಕೊರೋನಾ ಲಾಕ್‌ಡೌನ್‌ನಿಂದ ಎದುರಿಸಿದ ಸಂಕಷ್ಟವನ್ನು ಹಂಚಿಕೊಂಡಿದ್ದಾರೆ. ಸಿನಿಮಾ ರಿಲೀಸ್ ಆಗಿ ಮಾರನೇ ದಿನವೇ ಲಾಕ್‌ಡೌನ್ ಆಗಿದೆ, ಆದರೆ ದೇವರ ದಯೆ ಓಟಿಟಿ ಕೈ ಹಿಡಿಯಿತು ಎಂದಿದ್ದಾರೆ.
ಕಿರುತೆರೆಯಿಂದ ಸ್ಯಾಂಡಲ್‌ವುಡ್‌ಗೆ ಬಂದ ನಾಗಿಣಿ, ಜೊತೆ ಜೊತೆಯಲಿ ನಟರು!
'ಹೀಗೆ ಹೇಳುವುದಕ್ಕೆ ನೋವಾಗುತ್ತದೆ ಆದರೆ ಓಟಿಟಿ ಮುಖಾಂತರ ಜನರು ಪ್ರೀತಿ ತೋರಿಸಿದ್ದರು. ನನ್ನ ಮೊದಲ ಚಿತ್ರವನ್ನು ಒಳ್ಳೆಯ ರೀತಿಯಲ್ಲಿ ಸ್ವೀಕರಿಸಿದ್ದಕ್ಕೆ ಸಂತೋಷವಿದೆ. ನಂತರ ನನಗೆ ಬಂದ ಮತ್ತೊಂದು ಪ್ರಶ್ನೆ ಮುಂದೇನು? ಆರ್ಥಿಕವಾಗಿ ಸ್ಥಿರವಿಲ್ಲದ ಹೊಸ ಕಲಾವಿದರೂ 6 ತಿಂಗಳು ಏನೂ ಕೆಲಸವಿಲ್ಲದೆ ಮನೆಯಲ್ಲಿ ಕೂರುವುದು ಕಷ್ಟ' ಎಂದು ದೀಕ್ಷಿತ್ ಟೈಮ್ಸ್ ಆಫ್ ಇಂಡಿಯಾದಲ್ಲಿ ಹೇಳಿದ್ದಾರೆ.
' ಈ ಸಮಯದಲ್ಲಿ ಚಿತ್ರರಂಗದ ಹಿರಿಯರು ಹೊಸ ವಿಚಾರಗಳನ್ನು ಕಲಿಯುವುದಕ್ಕೆ ಹೇಳಿದ್ದರು. ಫಿಲಂ ಎಡಿಟಿಂಗ್ ಹೇಗೆ ಮಾಡುವುದು ಕಲಿತೆ. ಶಾರ್ಟ್ ವಿಡಿಯೋಗಳು ಹಾಗೂ ಸಿನಿಮಾಗಳ ಎಡಿಟಿಂಗ್ ಮಾಡಿದೆ. ಕೆಲವು ಸಮಯ ಕಾಲ ಊರಿನಲ್ಲಿ ಕೃಷಿ ಬಗ್ಗೆ ಕಲಿತುಕೊಂಡೆ. ವರ್ಷಗಳ ಕಾಲ ಹೊರಗಡೆ ಕಷ್ಟಪಟ್ಟು ಮನೆಯಲ್ಲಿ ಸಮಯ ಕಳೆಯುವುದರಲ್ಲಿ ತುಂಬಾ ಬದಲಾವಣೆಗಳಿವೆ. ಓಟಿಟಿಯಲ್ಲಿ ಸಿನಿಮಾ ರಿಲೀಸ್ ಆಗಿದ್ದಕ್ಕೆ ಕನ್ನಡದಲ್ಲಿ ಮಾತ್ರವಲ್ಲ ತೆಲುಗು ಪ್ರಾಜೆಕ್ಟ್‌ಗಳು ಸಿಕ್ಕಿವೆ. ಈ ಸಮಯದಲ್ಲಿ ನಾವು ಸ್ಟ್ರಾಂಗ್ ಆಗಿದ್ದು, ನಮ್ಮನ್ನ ನಾವು ನಂಬುವುದು ಮುಖ್ಯವಾಗುತ್ತದೆ' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.