ಅ.10ರಂದು ಧ್ರುವ ಸರ್ಜಾ ನಟನೆಯ ಬಿಗ್ ಬಜೆಟ್ ಚಿತ್ರ ‘ಮಾರ್ಟಿನ್’ ತೆರೆಗೆ ಬರುತ್ತಿದೆ. ಎ ಪಿ ಅರ್ಜುನ್ ನಿರ್ದೇಶನದ ಈ ಅದ್ದೂರಿ ಸಿನಿಮಾದ ವಿಶೇಷತೆಗಳನ್ನು ನಿರ್ಮಾಪಕ ಉದಯ್ ಮೆಹ್ತಾ ತಿಳಿಸಿದ್ದಾರೆ.
ಅ.10ರಂದು ಧ್ರುವ ಸರ್ಜಾ ನಟನೆಯ ಬಿಗ್ ಬಜೆಟ್ ಚಿತ್ರ ‘ಮಾರ್ಟಿನ್’ ತೆರೆಗೆ ಬರುತ್ತಿದೆ. ಎ ಪಿ ಅರ್ಜುನ್ ನಿರ್ದೇಶನದ ಈ ಅದ್ದೂರಿ ಸಿನಿಮಾದ ವಿಶೇಷತೆಗಳನ್ನು ನಿರ್ಮಾಪಕ ಉದಯ್ ಮೆಹ್ತಾ ತಿಳಿಸಿದ್ದಾರೆ.
1. ಕನ್ನಡ ಸಿನಿಮಾಗಳು ವಿಶ್ವಮಟ್ಟದಲ್ಲಿ ಸುದ್ದಿ ಮಾಡುತ್ತಿರುವ ಈ ಸಂದರ್ಭದಲ್ಲಿ ಎಲ್ಲರಿಗೂ ಜಗತ್ತಿನ ಗಮನಸೆಳೆಯುವಂಥಾ ಸಿನಿಮಾ ಮಾಡಬೇಕು ಎಂಬ ಹುಮ್ಮಸ್ಸು ಬರುತ್ತದೆ. ನಮ್ಮ ತಂಡದಲ್ಲೂ ಆ ಯೋಚನೆ ಬಂದು ಅದು ಸಿನಿಮಾ ರೂಪ ತಾಳಿ ಇದೀಗ ನಿಮ್ಮ ಮುಂದೆ ಬರುತ್ತಿದೆ. ಇದರ ಕಂಟೆಂಟ್ ನಿಮಗೆ ಥ್ರಿಲ್ ಅನಿಸುತ್ತೆ.
2. ಸನ್ನಿವೇಶವನ್ನು ಚೆನ್ನಾಗಿ ನಿರೂಪಿಸಿದ್ದೇವೆ. ಅದಕ್ಕೆ ತಕ್ಕಂತೆ ಬಜೆಟ್ ಹಾಕಲಾಗಿದೆ. ಆರಂಭದಲ್ಲಿ ಒಂದು ಬಜೆಟ್ ಫಿಕ್ಸ್ ಮಾಡಿದ್ದೆವು. ಆ ಬಳಿಕ ಇನ್ನಷ್ಟು ಮೊತ್ತ ಹಾಕಿದರೆ ಸಿನಿಮಾ ಇನ್ನೂ ಚೆನ್ನಾಗಿರುತ್ತೆ ಎಂಬ ವಿಚಾರ ಬಂತು. ಹಾಗೇ ಬಜೆಟ್ ವಿಸ್ತಾರಗೊಳ್ಳುತ್ತಲೇ ಹೋಯಿತು. ಆ ಅದ್ದೂರಿತನವನ್ನು ನೀವು ಈ ಚಿತ್ರದಲ್ಲಿ ಕಣ್ತುಂಬಿಕೊಳ್ಳಬಹುದು.
ಹಾಲಿವುಡ್ಗೂ ಸವಾಲ್ ಹಾಕ್ತಾನೆ ಮಾರ್ಟಿನ್ ಧ್ರುವ: 12 ಭಾಷೆಯಲ್ಲಿ ಸಿದ್ಧವಾಗಿರೋ ಮೊದಲ ಕನ್ನಡ ಸಿನಿಮಾ
3. ಕನ್ನಡದ ಕಾಸ್ಟ್ಲಿಯೆಸ್ಟ್ ಸಿನಿಮಾ ಮಾರ್ಟಿನ್ ಎಂದು ಆತ್ಮವಿಶ್ವಾಸದಿಂದ ಹೇಳಬಲ್ಲೆ. ಹೀಗಾಗಿ ಇದು ನೋಡುವವರಿಗೂ ವಿಶಿಷ್ಟ ಸಿನಿಮಾ.
4. ಹೊಸ ರೀತಿಯ ಸ್ಕ್ರೀನ್ ಪ್ಲೇ ಸಿನಿಮಾದಲ್ಲಿದೆ. ಪ್ರೇಕ್ಷಕ ಕುರ್ಚಿ ತುದಿಯಲ್ಲಿ ಕುಳಿತು ನೋಡುವಂಥಾ ಸನ್ನಿವೇಶಗಳಿವೆ.
5. ಸಿನಿಮಾದ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಹಿರಿತೆರೆಯ ಮೇಲೇ ನೋಡಿ ಎನ್‌ಜಾಯ್ ಮಾಡಬೇಕು. ಸಾಹಸವನ್ನು ನೆಕ್ಸ್ಟ್ ಲೆವೆಲ್‌ನಲ್ಲಿ ತೋರಿಸಿರುವ ಸಿನಿಮಾ ಮಾರ್ಟಿನ್.
6. ಧ್ರುವ ಸರ್ಜಾ ನಟನೆ ಭರ್ಜರಿಯಾಗಿದೆ. ತಾಂತ್ರಿಕತೆಯೂ ಸಿನಿಮಾದ ಹೈಲೈಟ್.
7. ಭಾರತದಾದ್ಯಂತ ಸದ್ಯ ಸುಮಾರು 2000 ಸ್ಕ್ರೀನ್‌ಗಳಲ್ಲಿ ಚಿತ್ರ ತೆರೆ ಕಾಣಲಿದೆ. ವಿಶ್ವಮಟ್ಟದಲ್ಲಿ ಮುಂದಿನವಾರ ರಿಲೀಸ್ ಕಾಣಲಿದೆ. ಬುಕಿಂಗ್‌ಗೆ ಉತ್ತಮ ರೆಸ್ಪಾನ್ಸ್ ಬರುತ್ತಿದೆ.
500 ಕಾರು.. 600 ಡ್ಯಾನ್ಸರ್ಸ್.. ಧ್ರುವ ಸರ್ಜಾ ಮಾಸ್ ಎಂಟ್ರಿ: ಮಾರ್ಟಿನ್ ಇಂಟ್ರಡಕ್ಷನ್ ಸಾಂಗ್ಗೆ 6 ಕೋಟಿ ಬಜೆಟ್!
8. ಇದೊಂದು ಅದ್ಭುತ ಪ್ರಾಜೆಕ್ಟ್. ಬಹಳ ಅಪರೂಪಕ್ಕೆ ಇಂಥಾ ಬಹು ದೊಡ್ಡ ಕ್ಯಾನ್ವಾಸ್‌ನ ಸಿನಿಮಾ ಬರುತ್ತಿದೆ. ಜನರಲ್ಲಿ ಸಿನಿಮಾದ ಬಗ್ಗೆ ಕುತೂಹಲವಿದೆ. ಅದು ಟಿಕೆಟ್ ಆಗಿಯೂ ರೂಪಾಂತರವಾಗುತ್ತದೆ ಎಂಬ ವಿಶ್ವಾಸವಿದೆ.