
ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯಿಸಿರುವ ಹೆಡ್‌ಬುಷ್ ಸಿನಿಮಾ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಿದೆ. ರಾಜ್ಯಾದ್ಯಂತ ಬಿಡುಗಡೆಯಾಗಿ ಮೂರು ದಿನಗಳಲ್ಲಿ 10 ಕೋಟಿ ಕಲೆಕ್ಷನ್ ಮಾಡಿರುವ ಸಿನಿಮಾ ಇದೀಗ ವಿವಾದದಲ್ಲಿ ಸಿಲುಕಿಕೊಂಡಿದೆ. ಕರಗ ಮತ್ತು ವೀರಗಾಸೆ ಕಲಾವಿದರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪ ಕೇಳಿ ಬಂದಿದ್ದು ದೂರು ದಾಖಲಾಗಿದೆ. ಈ ವಿಚಾರವಾಗಿ ಧನು ಎಷ್ಟೇ ಸ್ಪಷ್ಟನೆ ಕೊಟ್ಟರೂ ಸಂಘಟನೆಗಳು ಕೇಳಲಿಲ್ಲ ಪ್ರತಿಭಟನೆ ಮಾಡಲು ಮುಂದಾದರು ಆದರೆ ಧನು ಪರ ನಾವಿದ್ದೀವಿ ಎಂದು ಅಭಿಮಾನಿಗಳು ಸಾಥ್ ಕೊಡುತ್ತಿದ್ದಾರೆ.
ಹೌದು! ವಿವಾದದಲ್ಲಿ ಸಿಲುಕಿಕೊಂಡ ನಂತರ ಹೆಡ್‌ಬುಷ್ ಸಿನಿಮಾ ಮನೆಗೆ ಹೋಗುತ್ತದೆ ಹೆಚ್ಚಿನ ಮಟ್ಟದಲ್ಲಿ ಜನರಿಗೆ ತಲುಪು ಅಗಲಿಲ್ಲ ಎಂದು ಚಿತ್ರತಂಡಕ್ಕೆ ಆತಂಕ ಹೆಚ್ಚಾಗಿತ್ತು ಆದರೆ ಅಭಿಮಾನಿಗಳು ಇದನ್ನು ಉಲ್ಟಾ ಮಾಡಿದ್ದಾರೆ. ವಿವಾದ ದೊಡ್ಡದಾಗುತ್ತಿದ್ದಂತೆ ಎಲ್ಲೆಡೆ ಸಿನಿಮಾ ನೋಡಲು ಬುಕ್ಕಿಂಗ್ ಜೋರಾಗಿ ನಡೆಯುತ್ತಿದೆ ಎನ್ನಲಾಗಿದೆ. ಬುಕ್ ಮೈ ಶೋನಲ್ಲಿ 9.3/10 ರೇಟಿಂಗ್ ಏರಿಕೆ ಆಗಿದೆ. ಅಷ್ಟೆ ಅಲ್ಲದೆ ವಿದೇಶದಲ್ಲೂ ಧನು ಸಿನಿಮಾ ಬಿಗ್ ಸಪೋರ್ಟ್ ಸಿಗುತ್ತಿದೆ.
Heabush ನನಗೆ ಈ ರೀತಿ ಯಾಕಾಗುತ್ತಿದೆ? ಚಿತ್ರರಂಗದಲ್ಲಿ ನಾನಿರುವುದೇ ಇಷ್ಟ ಇಲ್ವಾ: ಧನಂಜಯ್
ಅಭಿಮಾನಿ ಟ್ವೀಟ್ ವೈರಲ್:
ಡಾಲಿ ಧನಂಜಯ್ ಅಭಿಮಾನಿ ಅವಿನಾಶ್ ರಂಗನಾಥ್ ವಿದೇಶದಲ್ಲಿದ್ದುಕೊಂಡು ಬೆಂಗಳೂರಿನಲ್ಲಿ ಟಿಕೆಟ್ ಬುಕ್ ಮಾಡುತ್ತಿದ್ದಾರೆ. 'ಈ ಮೂಲಕ ನಾನು ಧನಂಜಯ್‌ಗೆ ಸಪೋರ್ಟ್ ಮಾಡುತ್ತಿರುವೆ. Houstonನಲ್ಲಿ ಹೆಡ್‌ಬುಷ್ ಸಿನಿಮಾ ರಿಲೀಸ್ ಆಗಿಲ್ಲ ಹೀಗಾಗಿ ನಾನು ಬೆಂಗಳೂರಿನಲ್ಲಿ 10 ಸೀಟ್ ಬುಕ್ ಮಾಡಿರುವೆ. ನಾನು ಬೆಂಗಳೂರಿನಲ್ಲಿ ಇಲ್ಲ ಆದರೂ ಟಿಕೆಟ್ ಖರೀದಿ ಮಾಡುವ ಮೂಲಕ ಸಿನಿಮಾಗೆ ಸಪೋರ್ಟ್ ಮಾಡುತ್ತಿರುವೆ.ಯಾರ್ ಬೇಕಿದ್ದರೂ ಈ ಟಿಕೆಟ್‌ಗಳನ್ನು ಬಳಸಿಕೊಳ್ಳಬಹುದು. ಸಿನಿಮಾ ಗೆಲ್ಲುವುದು ಮುಖ್ಯ' ಎಂದು ಟ್ವೀಟ್ ಮಾಡಿದ್ದಾರೆ. 10 ಟಿಕೆಟ್‌ಗಳ ಪೋಟೋ ಹಂಚಿಕೊಂಡು ನಾನು ಧನಂಜಯ್ ಜೊತೆ ನಿಂತುಕೊಳ್ಳುವೆ ಎಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನಿನ್ನೆಯಿಂದ #IStandWithDhananjay ಟ್ರೆಂಡ್ ಆಗುತ್ತಿದೆ. ಹೆಡ್‌ಬುಷ್ ಸಿನಿಮಾ ಮತ್ತು ಧನಂಜಯ್ ಶ್ರಮದ ಬಗ್ಗೆ ಬರೆದುಕೊಂಡು ಪೋಸ್ಟ್ ಮಾಡುವ ಮೂಲಕ ಧನು ಜೊತೆಗಿದ್ದೀವಿ ಎನ್ನುತ್ತಿದೆ ಕರುನಾಡು. ಏಷ್ಯಾನೆಟ್ ಸುವರ್ಣ ನ್ಯೂಸ್ ಮಾಡಿದ ಸಂದರ್ಶನದಲ್ಲಿ ಬಡವರ ಮಕ್ಲು ಬೆಳೀಬೇಕು ಕಣ್ರಯ್ಯ ಎಂದು ಹೇಳಿರುವ ಸಾಲುಗಳು ಸಖತ್ ವೈರಲ್ ಆಗುತ್ತಿದೆ.
Head Bush 22 ಕೋಟಿಗೆ ಸೇಲ್:
ಡಾಲಿ ಧನಂಜಯ್ ನಟನೆಯ ‘ಹೆಡ್ ಬುಷ್’ ಚಿತ್ರದ ಟಿವಿ ರೈಟ್ಸ್ ಹಾಗೂ ಓಟಿಟಿ ಹಕ್ಕುಗಳು ದೊಡ್ಡ ಮೊತ್ತಕ್ಕೆ ಮಾರಾಟ ಆಗಿವೆ. ಚಿತ್ರದ ಟ್ರೇಲರ್ ಹಾಗೂ ಮೇಕಿಂಗ್ ನೋಡಿಯೇ ಚಿತ್ರದ ಪ್ರಸಾರ ಹಕ್ಕುಗಳನ್ನು ಜೀ ವಾಹಿನಿ ತನ್ನದಾಗಿಸಿಕೊಂಡಿದೆ. ಬರೋಬ್ಬರಿ 22 ಕೋಟಿ ರುಪಾಯಿಗಳಿಗೆ ಓಟಿಟಿ ಹಾಗೂ ಟಿವಿ ಹಕ್ಕುಗಳು ಮಾರಾಟಗೊಂಡಿದೆ. ಆ ಮೂಲಕ ಸಿನಿಮಾ ತೆರೆ ಕಾಣುವ ಮುನ್ನವೇ ಡಾಲಿ ಧನಂಜಯ್ ಸಿನಿಮಾ ಬ್ಯುಸಿನೆಸ್‌ನಲ್ಲೂ ದಾಖಲೆ ಮಾಡಲು ಹೊರಟಿದೆ. ಈಗಾಗಲೇ ಚಿತ್ರವನ್ನು ಎಲ್ಲಾ ಭಾಷೆಯವರು ಮೆಚ್ಚಿಕೊಂಡಿದ್ದಾರೆ.ಅಗ್ನಿ ಶ್ರೀಧರ್ ಬರೆದಿರುವ ಕತೆಯನ್ನು ಶೂನ್ಯ ನಿರ್ದೇಶಿಸಿದ್ದಾರೆ. ವಸಿಷ್ಠ ಸಿಂಹ, ಬಾಲುನಾಗೇಂದ್ರ, ಲೂಸ್ ಮಾದ ಯೋಗೇಶ್, ಪ್ರಕಾಶ್ ಬೆಳವಾಡಿ, ದೇವರಾಜ್, ರಘುಮುಖರ್ಜಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
Headbush Controversy ಹೆಡ್‌ಬುಷ್ ಸಿನಿಮಾದಲ್ಲಿ ವೀರಗಾಸೆ ಕಲಾವಿದರಿಗೆ ಕಾಲಿನಿಂದ ಒದ್ದು ಅವಮಾನ?
ದಾವಣಗೆರೆಯಲ್ಲಿ ಅದ್ದೂರಿಯಾಗಿ ನಡೆದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಧನು ಹೇಳಿದ ಮಾತುಗಳು ವೈರಲ್ ಅಗಿತ್ತು. ಈ ಮಳೆಯಲ್ಲಿ ನಮಗೋಸ್ಕರ ಇಷ್ಟುಹೊತ್ತು ಕಾಯುತ್ತಾ ಕುಳಿತಿದ್ದಕ್ಕೆ ಅಡ್ಡ ಬೀಳ್ತೀನಣ್ಣಾ, ನಿಮ್ಮ ಪ್ರೀತಿ, ಅಭಿಮಾನಕ್ಕೆ ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಾಗ್ತಿಲ್ಲ. ಬಡವರ ಮಕ್ಕಳು ಗೆಲ್ಲಬೇಕಣ್ಣ. ಲವ್ ಯೂ’ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.