ಈ ಬ್ಯೂಟಿ ನೋಡಿ ಎಲ್ಲೆಲ್ಲೋ ಚಿವುಟಿದ್ರು, ಬೇರೆ ಬೇರೆ ಪ್ರೊಡ್ಯೂಸರ್ಸ್​ ಬಂದು... ನಟ ದೀಪಕ್​ ಹೇಳಿದ್ದೇನು ಕೇಳಿ...

Published : Feb 04, 2025, 02:28 PM ISTUpdated : Feb 04, 2025, 02:54 PM IST
ಈ ಬ್ಯೂಟಿ ನೋಡಿ ಎಲ್ಲೆಲ್ಲೋ ಚಿವುಟಿದ್ರು, ಬೇರೆ ಬೇರೆ ಪ್ರೊಡ್ಯೂಸರ್ಸ್​ ಬಂದು...  ನಟ ದೀಪಕ್​ ಹೇಳಿದ್ದೇನು ಕೇಳಿ...

ಸಾರಾಂಶ

ಸೈಕೋ ಜಯಂತ್​, 'ಮಿಸ್ಟರ್ ರಾಣಿ' ಚಿತ್ರದಲ್ಲಿ ಮಹಿಳಾ ಪಾತ್ರದಲ್ಲಿ ನಟಿಸಿದ್ದಾರೆ. ಜುಲೈ ೭ ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ನಾಯಕನಾಗಿ ಬಂದ ಹುಡುಗ, ನಾಯಕಿಯಾಗುವ ಕಥೆಯಿದೆ. ಜಯಂತ್​ ಅವರ ಮಹಿಳಾ ವೇಷ, ಪ್ರೇಕ್ಷಕರನ್ನು ಅಚ್ಚರಿಗೊಳಿಸಿದೆ. ನಿರ್ದೇಶಕ ಮಧುಚಂದ್ರ ಈ ಹಾಸ್ಯಮಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಲಕ್ಷ್ಮೀ ನಿವಾಸದ ಸೈಕೋ ಜಯಂತ್​ ಹೆಣ್ಣಾಗಿ ಬದಲಾಗಿದ್ದಾರೆ. ಮಿಸ್ಟರ್​ ರಾಣಿ ಚಿತ್ರದಲ್ಲಿ ಇವರದ್ದೇ ಲೀಡ್​​ ರೋಲ್​. ಮಿಸ್ಟರ್ ರಾಣಿ  (Mister Rani). ಈ ಚಿತ್ರ ಇದೇ 7ರಂದು ಬಿಡುಗಡೆಯಾಗಲಿದೆ. ಇದಾಗಲೇ ಈ ಸಿನಿಮಾದ ಪೋಸ್ಟರ್​ ಸೋಷಿಯಲ್​  ಮೀಡಿಯಾಗಳಲ್ಲಿ ಓಡಾಡುತ್ತಿದ್ದು ಈ ರಾಣಿಯನ್ನು ನೋಡಿದ್ರೆ, ನಿಜವಾಗಿಯೂ ಈ ರಾಣಿ, ಸೈಕೋ ಜಯಂತಾ ಎಂದು ಕೇಳುವುದು ಉಂಟು. ಹುಡುಗನೋ, ಹುಡುಗಿಯೋ ಗೊತ್ತಾಗದ ರೀತಿಯಲ್ಲಿ ಜಯಂತ್​ ಪಾತ್ರಧಾರಿ ದೀಪಕ್ ಸುಬ್ರಹ್ಮಣ್ಯ ಕಾಣಿಸುತ್ತಿದ್ದಾರೆ. ಪುರುಷ ಒಬ್ಬ ಮಹಿಳೆಯ ರೋಲ್​ ಎಂದರೆ, ಅದು ಹಾಸ್ಯಮಯವೇ ಆಗಿರಲು ಸಾಧ್ಯ.  ವಿನೂತನ ಶೈಲಿಯ  ಕಾಮಿಡಿ ಎಂಟರ್ ಟೈನರ್ ಚಿತ್ರ ಇದಾಗಿದೆ. ಈ ಚಿತ್ರವನ್ನು  ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಖ್ಯಾತಿಯ ನಿರ್ದೇಶಕ ಮಧುಚಂದ್ರ  ನಿರ್ದೇಶಿಸಿದ್ದಾರೆ. ಇದರ ಕಥೆ ಏನೆಂದರೆ, ಹೀರೋ ಆಗಬೇಕೆಂದು ಸಿನಿಮಾಕ್ಕೆ ಬಂದ ಹುಡುಗ ಹೀರೋಯಿನ್ ಆಗುವ ಕಥೆ!  

ಇದೀಗ ಇವರು ಹೆಣ್ಣಿನ ವೇಷದಲ್ಲಿ ಕೀರ್ತಿ ಎಂಟರ್​ಟೇನ್​ಮೆಂಟ್​  ಕ್ಲಿನಿಕ್​ ಯೂಟ್ಯೂಬ್​ ಚಾನೆಲ್​ಗೆ ಸಂದರ್ಶನ ನೀಡಿದ್ದಾರೆ. ಇದರಲ್ಲಿ ಅವರು, ಹೆಣ್ಣಿನ ವೇಷದಲ್ಲಿ ಕಾಣಿಸಿಕೊಂಡಾಗ ತಮ್ಮನ್ನು ಯಾರೂ ಗುರುತು ಹಿಡಿಯಲಿಲ್ಲ. ಆಗ ನಾನು ಬಾಯಿಯನ್ನೂ ಬಿಡದ ಕಾರಣ ಎಲ್ಲರೂ ನನ್ನನ್ನು ಹೆಣ್ಣು ಎಂದೇ ಅಂದುಕೊಂಡಿದ್ದರು ಎಂದಿದ್ದಾರೆ. ಇದೀಗ ಅವರು ಹೆಣ್ಣಿನ ಅಂದರೆ ಮಿಸ್ಟರ್​ ರಾಣಿ ರೂಪದಲ್ಲಿಯೇ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದಾರೆ.ಅವರ ರೂಪವನ್ನು ನೋಡಿದರೆ ಎಂಥ ಹೀರೋಯಿನ್​ಗಳೂ ನಾಚಿಕೊಳ್ಳುವಂಥ ಸೌಂದರ್ಯ ಇದೆ. ತಮ್ಮನ್ನು ಶೂಟಿಂಗ್​ ಸೆಟ್​ನಲ್ಲಿ ನೋಡಿದಾಗ ಕೆಲವರು ನಾನು ಹೆಣ್ಣೇ ಎಂದುಕೊಂಡು ಎಲ್ಲೆಲ್ಲೋ ಚಿವುಟಿದರು. ಎಲ್ಲಿ ಅಂತ ನಾನು ಹೇಳಲ್ಲಪ್ಪ ಎಂದಿದ್ದಾರೆ.  

ಮಿಸ್ಟರ್​ ರಾಣಿ ಸಿನಿಮಾದ ಪ್ರೊಡ್ಯೂಸರ್​ ಕೂಡ ಸಂದರ್ಶನಕ್ಕೆ ಬಂದಿದ್ದು, ಇವರು ದೀಪಕ್​ ಎಂದು ತಿಳಿಯದೇ ಇವರನ್ನು ತಮ್ಮ ಸಿನಿಮಾದಲ್ಲಿ ಹಾಕಿಕೊಳ್ಳಲು ಹಲವು ಪ್ರೊಡ್ಯೂಸರ್​ಗಳು ಮುಂದೆ ಬಂದಿದ್ದರು. ನಾನು ಕೆಲವರನ್ನು ಕರೆದುಕೊಂಡು ಬಂದಿದ್ದೆ. ಅವರು ಈ ರಾಣಿಯನ್ನು ದುರುಗುಟ್ಟಿ ನೋಡುತ್ತಿದ್ದರು. ಅಲ್ಲಿದ್ದವರಂತೂ ಈ ಸುಂದರಿ ಯಾರು? ಕನ್ನಡ ಬೇರೆ ಮಾತನಾಡ್ತಾಳೆ. ಬೇರೆ ಭಾಷೆಯವಳು ಅಲ್ಲ ಅಂತಾಯ್ತು, ಯಾರು ಅಂತೆಲ್ಲಾ ನೋಡುತ್ತಿದ್ದರು ಎಂದಿದ್ದಾರೆ.

ನವವಧು ಚಂದನಾಗೆ ಪ್ರಾಂಕ್​ ಕಾಲ್​ ಮಾಡಿ ಸುಸ್ತು ಮಾಡಿದ ಲಕ್ಷ್ಮೀ ನಿವಾಸ ಸೈಕೋ ಜಯಂತ್​! ಹೀಗಿತ್ತು ನೋಡಿ ಮಜಾ

ಇದೇ ವೇಳೆ ದೀಪಕ್​  ಅವರು ತಮ್ಮ ಈ ಸೌಂದರ್ಯಕ್ಕೆ ನಾಲ್ಕೈದು ತಾಸು ದಿನವೂ ಮೇಕಪ್​ ಮಾಡಿಕೊಳ್ಳಬೇಕಾಯಿತು. ವ್ಯಾಕ್ಸಿಂಗ್​ ಎಲ್ಲಾ ಮಾಡಿಕೊಳ್ಳುವ ಸ್ಥಿತಿ ಇತ್ತಲ್ಲ, ಅದಕ್ಕೇ ತುಂಬಾ ಸುಸ್ತಾಗಿ ಹೋಯಿತು. ನಿಜಕ್ಕೂ ಹೆಣ್ಣುಮಕ್ಕಳಿಗೆ  ಮೇಕಪ್​  ಮಾಡಿಕೊಳ್ಳಲು ಯಾಕೆ ಟೈಮ್​ ಆಗುತ್ತೆ ಎನ್ನುವುದು ತಿಳಿಯಿತು ಎಂದಿದ್ದಾರೆ ದೀಪಕ್​. ಇನ್ನು ದೀಪಕ್ ಸುಬ್ರಮಣ್ಯ ಕುರಿತು ಹೇಳುವುದಾದರೆ, ಇವರು ರಂಗಭೂಮಿ ಕಲಾವಿದ. ಎರಡು ದಶಕಗಳ ಬಣ್ಣದ ಲೋಕದಲ್ಲಿ ಪಳಗಿದ್ದಾರೆ.   ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್​. ಇದಾಗಲೇ,  ಸಾಲಗಾರ ,  ಜಾರು ಬಂಡೆ ,  ಪಿಂಕಿ ಎಲ್ಲಿ..? ,  ಶುದ್ಧಿ ,  ಆಯಾನಾ ,  ಸಾರಾಂಶ  ಸೇರಿದಂತೆ ಹಲವು ಸಿನಿಮಾ ಮಾಡಿದ್ದಾರೆ.  ಸಿನಿಮಾ ರಂಗ, ರಂಗಭೂಮಿ ಹಾಗೂ ಕಿರುತೆರೆ ಮೂರರಲ್ಲೂ ಈಗ ದೀಪಕ್ ಸುಬ್ರಮಣ್ಯ ಬಿಜಿಯಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ವರ್ಷ ಪ್ರಸಾರವಾಗಿದ್ದ ದಾಸ ಪುರಂದರ ಧಾರಾವಾಹಿಯಲ್ಲಿ ಪುರಂದರನಾಗಿ ನಟಿಸಿ ಅಪಾರ ಮೆಚ್ಚುಗೆ ಗಳಿಸಿದ್ದರು.  ಈ ಸೀರಿಯಲ್​  ಮೂಲಕ ಕಿರುತೆರೆಗೆ ಎಂಟ್ರಿ ಪಡೆದರು. ಇದೀಗ ಲಕ್ಷ್ಮಿ ನಿವಾಸದಲ್ಲಿ ಸಕತ್​ ಫೇಮಸ್​ ಆಗಿದ್ದಾರೆ.  ಪ್ರಾಂಕ್​  ಮಾಡಿರುವ  ವಿಡಿಯೋ ಇಲ್ಲಿದೆ  ನೋಡಿ.

ರಾಣಿಯಾಗಿ ಲಕ್ಷ್ಮೀ ನಿವಾಸ ಸೈಕೋ ಜಯಂತ್​! ಚಿತ್ರದ ಪ್ರಮೋಷನ್​ ವೇಳೆನೂ ಚಿನ್ನುಮರಿಯ ಹೀಗೆ ಹೆದ್ರಿಸೋದಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ