ಬಾಲ ನಟರ ಬಳಸಲು ಇನ್ನು ಡೀಸಿ ಅನುಮತಿ ಕಡ್ಡಾಯ

By Kannadaprabha NewsFirst Published Jun 26, 2022, 9:56 AM IST
Highlights
  • ಶಾಲೆಗೆ ರಜೆ ಹಾಕಿಸಿ ಶೂಟಿಂಗ್‌ಗೆ ಕರೆದೊಯ್ದರೆ ನಿರ್ಮಾಪಕ ಖಾಸಗಿ ಟ್ಯೂಷನ್‌ ಕೊಡಿಸಬೇಕು
  •  ಸಂಭಾವನೆಯಲ್ಲಿ ಶೇ.20ರಷ್ಟುಠೇವಣಿ ಇಡಬೇಕು
  • ಮದ್ಯಪಾನ, ಧೂಮಪಾನ ಮಾಡಿಸುವಂತಿಲ್ಲ
  • ಸತತ 27 ದಿನ ದುಡಿಸುವಂತಿಲ್ಲ, ಪ್ರತಿ 3 ತಾಸಿಗೊಮ್ಮೆ ಬ್ರೇಕ್‌ ಕೊಡಬೇಕು: ಕೇಂದ್ರ ಕರಡು ನಿಯಮ

ಪಿಟಿಐ ನವದೆಹಲಿ

ಸಿನಿಮಾ, ಧಾರಾವಾಹಿ, ವೆಬ್‌ ಸೀರಿಸ್‌, ರಿಯಾಲಿಟಿ ಶೋದಂತಹ ಮನರಂಜನಾ ಕಾರ್ಯಕ್ರಮಗಳಿಗೆ ಬಾಲನಟರನ್ನು ಬಳಕೆ ಮಾಡಿಕೊಳ್ಳುವ ಮುನ್ನ ಶೂಟಿಂಗ್‌ ನಡೆಯುವ ಸ್ಥಳದಲ್ಲಿನ ಜಿಲ್ಲಾಧಿಕಾರಿಗಳಿಂದ ನಿರ್ಮಾಪಕರು ಅನುಮತಿ ಪಡೆಯಬೇಕು ಎಂಬ ನಿಯಮ ಶೀಘ್ರದಲ್ಲೇ ಜಾರಿಗೆ ಬರಲಿದೆ. ಮಕ್ಕಳು ಮದ್ಯಪಾನ, ಧೂಮಪಾನ ಮಾಡುವ ಅಥವಾ ಸಮಾಜವಿದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವಂತೆ ಬಿಂಬಿಸಬಾರದು ಎಂದೂ ಈ ನಿಯಮದಲ್ಲಿರಲಿದೆ.

ಮನರಂಜನಾ ಕ್ಷೇತ್ರದಲ್ಲಿ ಬಾಲನಟರನ್ನು ರಕ್ಷಿಸುವ ಸಂಬಂಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್‌) ಕರಡು ನಿಯಮವನ್ನು ರೂಪಿಸಿದೆ. ‘ಮನರಂಜನಾ ಉದ್ದಿಮೆಯಲ್ಲಿ ಮಕ್ಕಳ ಭಾಗವಹಿಸುವಿಕೆ ನಿಯಂತ್ರಣ ಮಾರ್ಗಸೂಚಿ’ ಎಂಬ ಈ ಕರಡು ನಿಯಮ ರಿಯಾಲಿಟಿ ಶೋ, ಟೀವಿ ಸೀರಿಯಲ್‌, ಸುದ್ದಿ ಹಾಗೂ ಮಾಹಿತಿಯುತ ಮಾಧ್ಯಮ, ಸಿನಿಮಾ, ಒಟಿಟಿ, ಸಾಮಾಜಿಕ ಜಾಲತಾಣ, ಪ್ರದರ್ಶನ ಕಲೆ, ಜಾಹೀರಾತು ಸೇರಿ ವಾಣಿಜ್ಯ ಉದ್ದೇಶದ ಮನರಂಜನಾ ಚಟುವಟಿಕೆಗಳಿಗೆ ಅನ್ವಯವಾಗಲಿದೆ.

'ತಾರೆ ಜಮೀನ್‌ ಪರ್' ನಟ ದರ್ಶೀಲ್ ಸಫಾರಿ ಹೀಗಾಗಿದ್ದಾರೆ ನೋಡಿ...

  • ಶಾಲೆಗೆ ರಜೆ ಹಾಕಿಸಿ ಶೂಟಿಂಗ್‌ಗೆ ಕರೆದೊಯ್ದರೆ ನಿರ್ಮಾಪಕ ಖಾಸಗಿ ಟ್ಯೂಷನ್‌ ಕೊಡಿಸಬೇಕು
  •  ಸಂಭಾವನೆಯಲ್ಲಿ ಶೇ.20ರಷ್ಟುಠೇವಣಿ ಇಡಬೇಕು
  • ಮದ್ಯಪಾನ, ಧೂಮಪಾನ ಮಾಡಿಸುವಂತಿಲ್ಲ
  • ಸತತ 27 ದಿನ ದುಡಿಸುವಂತಿಲ್ಲ, ಪ್ರತಿ 3 ತಾಸಿಗೊಮ್ಮೆ ಬ್ರೇಕ್‌ ಕೊಡಬೇಕು: ಕೇಂದ್ರ ಕರಡು ನಿಯಮ

ದಿನಕ್ಕೊಂದೇ ಶಿಫ್‌್ಟ, ವಿಶ್ರಾಂತಿ:

ಮನರಂಜನಾ ಕಾರ್ಯಕ್ರಮದಲ್ಲಿ ಬಾಲನಟರ ಶೋಷಣೆ ಅಥವಾ ದೌರ್ಜನ್ಯ ತಡೆಗೆ ತೆಗೆದುಕೊಂಡಿರುವ ಕ್ರಮಗಳನ್ನು ನಿರ್ಮಾಪಕರು ವಿವರಿಸಬೇಕು. ಸತತ 27 ದಿನಗಳಿಗಿಂತ ಅಧಿಕ ಕಾಲ ಯಾವುದೇ ಮಗು ಕೆಲಸ ಮಾಡಬಾರದು. ದಿನವೊಂದಕ್ಕೆ ಬಾಲನಟರಿಗೆ ಒಂದೇ ಶಿಫ್‌್ಟಇರಬೇಕು. ಪ್ರತಿ ಮೂರು ತಾಸಿಗೊಮ್ಮೆ ವಿಶ್ರಾಂತಿ ನೀಡಬೇಕು ಎಂದು ಕರಡು ನಿಯಮ ಹೇಳುತ್ತದೆ.

ಶೂಟಿಂಗ್‌ ಚಟುವಟಿಕೆಯಿಂದಾಗಿ ಬಾಲನಟರ ಶಾಲಾ ಶಿಕ್ಷಣಕ್ಕೆ ತೊಂದರೆಯಾಗದಂತೆ ನಿರ್ಮಾಪಕರು ನೋಡಿಕೊಳ್ಳಬೇಕು. ಒಂದು ವೇಳೆ, ಶೂಟಿಂಗ್‌ ಉದ್ದೇಶಕ್ಕಾಗಿ ಶಾಲಾ ಹಾಜರಾತಿಯಿಂದ ವಿನಾಯಿತಿ ಪಡೆದಲ್ಲಿ, ಅಂತಹ ಬಾಲನಟರಗೆ ಖಾಸಗಿ ಶಿಕ್ಷಕರನ್ನು ನೇಮಿಸಿ ನಿರ್ಮಾಪಕರು ಟ್ಯೂಷನ್‌ ಕೊಡಿಸಬೇಕು ಎಂದು ನಿಯಮದಲ್ಲಿದೆ.

30 ಚಿತ್ರಗಳಲ್ಲಿ ನಟಿಸಿರುವ ಬಾಲ ನಟಿ ಆರಾಧ್ಯ!

ಬಾಲನಟರ ಶೇ.20ರಷ್ಟುಆದಾಯವನ್ನು ವಯಸ್ಕರಾಗುವವರೆಗೂ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿ ಇಡಬೇಕು. ಸೂಕ್ತವಲ್ಲದ ಅಥವಾ ಇರಿಸು- ಮುರಿಸಾಗುವ ಪಾತ್ರಗಳನ್ನು ನೀಡಬಾರದು. ತೀಕ್ಷ$್ಣ ಬೆಳಕು, ಕಿರಿಕಿರಿ ಉಂಟು ಮಾಡುವ ಅಥವಾ ಕಲುಷಿತ ಸೌಂದರ್ಯವರ್ಧಕಗಳಿಗೆ ಮಕ್ಕಳನ್ನು ಒಡ್ಡಬಾರದು. ಬಟ್ಟೆಬದಲಿಸುವ ಜಾಗ ಅಥವಾ ಸ್ಥಳಗಳನ್ನು ವಯಸ್ಕರು ಅದರಲ್ಲೂ ವಿಶೇಷವಾಗಿ ವಿರುದ್ಧ ಲಿಂಗದವರ ಜತೆ ಹಂಚಿಕೊಳ್ಳುವಂತೆ ಮಾಡಬಾರದು ಎಂದು ಹೇಳಿದೆ.

click me!