ದರ್ಶನ್‌ರನ್ನ ಡೆವಿಲ್ ಮಾಡಿದ ಮಿಲನ ಪ್ರಕಾಶ್: ತಾರಕ್ ಡೈರೆಕ್ಟರ್ ಜೊತೆ 'ಡೆವಿಲ್ ದಿ ಹೀರೋ' ಆದ ಕಾಟೇರ!

By Govindaraj S  |  First Published Jan 17, 2024, 11:58 AM IST

ನಟ ದರ್ಶನ್ ಕಾಟೇರ ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ಈ ಖುಷಿಯಲ್ಲೇ ಪಬ್ನಲ್ಲಿ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿ ಬಂದಿರೋ ದರ್ಶನ್ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತನ್ನ ಮುಂದಿನ ಸಿನಿಮಾ ಕಡೆ ಗಮನ ಕೊಡುತ್ತಿದ್ದಾರೆ.


ನಟ ದರ್ಶನ್ ಕಾಟೇರ ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ಈ ಖುಷಿಯಲ್ಲೇ ಪಬ್ನಲ್ಲಿ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿ ಬಂದಿರೋ ದರ್ಶನ್ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತನ್ನ ಮುಂದಿನ ಸಿನಿಮಾ ಕಡೆ ಗಮನ ಕೊಡುತ್ತಿದ್ದಾರೆ. ಹಾಗಾದ್ರೆ ದರ್ಶನ್ ಮುಂದಿನ ಸಿನಿಮಾ ಯಾವ್ದು ಅಂತ ಕೇಳ್ತೀರಾ.? ಅದೇ 'ಡೆವಿಲ್ ದಿ ಹೀರೋ'. ಕಾಟೇರ ಗೆಲುವಿನ ಹಾರ ಹಾಕಿಕೊಂಡಿರೋ ನಟ ದರ್ಶನ್ ಮುಂದಿನ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರೋದು ನಿರ್ದೇಶನ ಮಿಲನ ಪ್ರಕಾಶ್. ಈ ಹಿಂದೆ 2017ರಲ್ಲಿ ದರ್ಶನ್ ಜೊತೆ ತಾರಕ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ರು. 

ಆದ್ರೆ ಈ ಸಿನಿಮಾ ದೊಡ್ಡ ಹಿಟ್ ಆಗಿರಲಿಲ್ಲ. ಆದ್ರೆ ದರ್ಶನ್ ಸ್ಟೈಲೀಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು ಟಾಕ್ ಆಗಿತ್ತು. ಡೈರೆಕ್ಟರ್ ಪ್ರಕಾಶ್ ಅಂದ್ರೆ ಕನ್ನಡಿಗರಿಗೆ ತಟ್ ಅಂತ ಗೊತ್ತಾಗಲ್ಲ. ಅದೇ ಮಿಲನಾ ಪ್ರಕಾಶ್ ಅಂದ್ರೆ ಹೋ ಇವರಾ ಅಂತ ಎಲ್ರು ಹೇಳ್ತಾರೆ. ಯಾಕಂದ್ರೆ ಮಿಲನಾ ಪ್ರಕಾಶ್ ಸಿನಿ ರಂಗದಲ್ಲಿ ಹೆಸರು ಮಾಡೋಕೆ ಕಾರಣ ಪವರ್ ಸ್ಟಾರ್ ಪುನೀತ್ರಾಜ್ಕುಮಾರ್.. ಪ್ರಕಾಶ್ ನಿರ್ದೇಶನದಲ್ಲಿ ಪುನೀತ್, ಮಿಲನ ಹಾಗು ವಂಶಿ ಸಿನಿಮಾದಲ್ಲಿ ನಟಿಸಿ ದೊಡ್ಡ ಸಕ್ಸಸ್ ತಂದುಕೊಟ್ಟಿದ್ರು. ಬರೀ ಪ್ರಕಾಶ್ ಆಗಿದ್ದ ಈ ಡೈರೆಕ್ಟರ್ ಮಿಲನ ಸಿನಿಮಾ ಹಿಟ್ ಆಗುತ್ತಿದ್ದಂತೆ ಚಿತ್ರರಂಗದಲ್ಲಿ ಮಿಲನ ಪ್ರಕಾಶ್ ಅಂತಲೇ ಫೇಮಸ್ ಆದ್ರು. 

Tap to resize

Latest Videos

undefined

ಮಿಲನ ಪ್ರಕಾಶ್ರನ್ನ ಸ್ಟಾರ್ ಡೈರೆಕ್ಟರ್ ಮಾಡಿದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಈಗ ಇದೇ ಮಿಲನಾ ಪ್ರಕಾಶ್ ನಟ ದರ್ಶನ್ಗೆ ಡೆವಿಲ್ ಪಟ್ಟ ಕಟ್ಟುತ್ತಿದ್ದಾರೆ. ದರ್ಶನ್ ಜತೆ ಡೆವಿಲ್ ದಿ ಹೀರೋ ಸಿನಿಮಾ ಮಾಡುತ್ತಿದ್ದಾರೆ. ಕಳೆದ ನವೆಂಬರ್ನಲ್ಲೇ ಈ ಸಿನಿಮಾದ ಮಹೂರ್ಥ ಕೂಡ ನಡೆದಿದೆ. ನಿರ್ದೇಶಕ ಮಿಲನಾ ಪ್ರಕಾಶ್ ಕ್ಲಾಸ್ ಸಿನಿಮಾಗಳನ್ನ ಮಾಡಿರೋ ಡೈರೆಕ್ಟರ್. ಆದ್ರೆ ಈ ಭಾರಿ ದರ್ಶನ್ ಜತೆ ಕಣಕ್ಕಿಳಿದಿರೋದು ಮಾಸ್ ಕಥೆಯ ಜೊತೆ. ಯಾಕಂದ್ರೆ ಡೆವಿಲ್ ದಿ ಹೀರೋ ಮಾಸ್ ಸಿನಿಮಾ ಅಂತೆ. ದರ್ಶನ್ ಸ್ಟೈಲೀಶ್ ಲುಕ್ನಲ್ಲಿ ಸಿಕ್ಕಾಪಟ್ಟೆ ಆಕ್ಷನ್ ಮಾಡ್ತಾರಂತೆ. 

ಸ್ಟೈಲಿಶ್ ಲುಕ್​ನಲ್ಲಿ ಮಿಂಚಿದ ಕಾಂತಾರ ಬೆಡಗಿ: ಕರ್ನಾಟಕದ ಸ್ಮೈಲಿಂಗ್ ಕ್ವೀನ್ ಸಪ್ತಮಿ ಎಂದ ಫ್ಯಾನ್ಸ್‌!

ಈ ಸಿನಿಮಾವನ್ನ ಮಿಲನಾ ಪ್ರಕಾಶ್ರವರೇ ವೈಷ್ಟೋ ಸ್ಟುಡಿಯೋ ಬ್ಯಾನರ್ನಲ್ಲಿ ನಿರ್ಮಾಣ ಮಾಡ್ತಾರೆ ಅಂತ ಹೇಳಲಾಗ್ತಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಇರಲಿದೆ. ಡೆವಿಲ್ ಹೀರೋ ಶೂಟಿಂಗ್ ಫೆಬ್ರವರಿಯಿಂದ ಆರಂಭ ಆಗುತ್ತೆ ಅಂತ ಮಿಲನ ಪ್ರಕಾಶ್ ಆಪ್ತ ಸಂಘ ಹೇಳಿಕೊಂಡಿದೆ. ನಟ ದರ್ಶನ್ ಈ ಸಿನಿಮಾದಲ್ಲಿ ಯಂಗ್ ಆಗಿ ಕಾಣಿಸಿಕೊಳ್ಳಬೇಕಂತೆ. ಹೀಗಾಗಿ ಸಣ್ಣಗಾಗಬೇಕು ಅಂತ ಡಯೆಟ್ ಜೊತೆ ಜಿಮ್ನಲ್ಲಿ ಬೆವರು ಹರಿಸುತ್ತಿದ್ದಾರಂತೆ. ಕಾಟೇರ ಸಿನಿಮಾದಲ್ಲಿ ಇದ್ದ ರಗಡ್ ಲುಕ್ನಿಂದ ಸ್ಟೈಲೀಸ್ ಲುಕ್ಗೆ ದರ್ಶನ್ ಬರಲಿದ್ದಾರಂತೆ. 

click me!