ದರ್ಶನ್ ಪವಿತ್ರಾ ಗೌಡ ಮದುವೆ ಆಗಿದ್ರಾ? ಮದುಮಗನ ಗೆಟಪ್‌ನಲ್ಲಿ ದರ್ಶನ್, ಪವಿತ್ರಾ ಕೊರಳಲ್ಲಿ ಅರಿಶಿನ ದಾರ!

Published : Oct 31, 2025, 12:31 PM ISTUpdated : Oct 31, 2025, 12:40 PM IST
Darshan Thoogudeepa Pavithra Gowda

ಸಾರಾಂಶ

ದರ್ಶನ್ ಮತ್ತು ಪವಿತ್ರಾ ಗೌಡ ಅವರಿಬ್ಬರೂ 2014 ರಿಂದಲೇ ಜೊತೆಗಿದ್ದಾರೆ ಎನ್ನಲಾಗುತ್ತಿದೆ. ಕಳೆದ ವರ್ಷ ಕೂಡ, ದರ್ಶನ್, ಪವಿತ್ರಾ ಗೌಡ ಹಾಗೂ ಪವಿತ್ರಾ ಗೌಡ ಮಗಳು ಒಟ್ಟಿಗೇ ಇರುವ ಫೋಟೋಗಳು ವೈರಲ್ ಅಗಿತ್ತು. ಇದೀಗ, ಕೇಸ್ ತನಿಖೆ ಹಂತದಲ್ಲಿ ಇರುವಾಗ ಮತ್ತೊಮ್ಮೆ ಪವಿತ್ರಾ ಗೌಡ, ದರ್ಶನ್ ಫೋಟೋ ವೈರಲ್ ಆಗಿದೆ!

ಇದೀಗ ಹೊಸದೊಂದು ಸುದ್ದಿ ಕರ್ನಾಟಕದ ತುಂಬೆಲ್ಲಾ ಸ್ಫೋಟವಾಗಿದೆ. ಅದು ನಟ ದರ್ಶನ್ ತೂಗುದೀಪ ಹಾಗೂ ಪವಿತ್ರಾ ಗೌಡ ಅವರು ಮದುಮಕ್ಕಳ ಗೆಟಪ್‌ನಲ್ಲಿರುವ ಫೋಟೋ. ಅದರಲ್ಲಿ ನಟ ದರ್ಶನ್ ಅವರು ಮದುಮಗನ ಗೆಟಪ್‌ನಲ್ಲಿ ಹಾಗೂ ಮಟಿ ಪವಿತ್ರಾ ಗೌಡ ಕೊರಳಲ್ಲಿ ಅರಿಶಿನ ದಾರ ಇರೋದು..! ಹಾಗಿದ್ದರೆ ಇದೇನು?

ವೈರಲ್ ಆಗಿರುವ ಫೋಟೋದಲ್ಲಿ ದರ್ಶನ್ ಪವಿತ್ರಾ ನವ ದಂಪತಿಗಳ ರೀತಿ ಪೋಸ್ ಕೊಟ್ಟಿದ್ದಾರೆ. ಅದರಲ್ಲಿ ನೋಡಿದರೆ ಅವರಿಬ್ಬರೂ ಮದುವೆ ಆಗಿರೋ ತರಹವೇ ಇದೆ. ಹಾಗಿದ್ದರೆ ನಿಜವಾಗಿಯೂ ಅವರಿಬ್ಬರ ಮಧ್ಯೆ ಇರುವ ಸಂಬಂಧವೇನು? ನಟ ದಶ್ನ್ ಅವರು ಖಾಸಗಿಯಾಗಿ ಎಲ್ಲೋ ಒಂದು ಕಡೆ ನಟಿ ಪವಿತ್ರಾ ಗೌಡ ಅವರಿಗೆ ತಾಳಿ ಕೊಟ್ಟಿದ್ದಾರೆಯೇ ಎಂಬ ಪ್ರಶ್ನೆಯೀಗ ಹಲವರಲ್ಲಿ ಮೂಡಿದೆ.

ದರ್ಶನ್ ಮತ್ತು ಪವಿತ್ರಾ ಗೌಡ ಅವರಿಬ್ಬರೂ 2014 ರಿಂದಲೇ ಜೊತೆಗಿದ್ದಾರೆ ಎನ್ನಲಾಗುತ್ತಿದೆ. ಕಳೆದ ವರ್ಷ ಕೂಡ ನಟ ದರ್ಶನ್, ನಟಿ ಪವಿತ್ರಾ ಗೌಡ ಹಾಗೂ ಪವಿತ್ರಾ ಗೌಡ ಮಗಳು ಒಟ್ಟಿಗೇ ಇರುವ ಫೋಟೋಗಳು ಕೂಡ ವೈರಲ್ ಅಗಿತ್ತು. ಇದೀಗ, ಕೇಸ್ ತನಿಖೆ ಹಂತದಲ್ಲಿ ಇರುವಾಗ ಮತ್ತೊಮ್ಮೆ ನಟಿ ಪವಿತ್ರಾ ಗೌಡ ಜೊತೆಗಿರುವ ದರ್ಶನ್ ಫೋಟೋ ವೈರಲ್ ಆಗಿದೆ, ಅದೂ ಕೂಡ ಮದುಮಕ್ಕಳ ಗೆಟಪ್‌ನಲ್ಲಿ! ಹಾಗಿದ್ರೆ ನಿಜವಾಗಿಯೂ ದರ್ಶನ್ ಬಾಳಲ್ಲಿ ಅದೇನು ನಡೆದಿದೆ? ಈ ಸಂಗತಿಯೀಗ ತೀವ್ರ ಕುತೂಹಲ ಮೂಡಿಸಿದೆ. ಮುಂದೇನು ಎಂಬುದನ್ನು ಕಾದು ನೋಡಬೇಕಿದೆ!

ಇಂದು ನಟ ದರ್ಶನ್ ತೂಗುದೀಪ (Darshan Thoogudeepa) ಪುತ್ರ ವಿನೀಶ್ (Vineesh Thoogudeepa) ಅವರ ಮಗನ ಹುಟ್ಟುಹಬ್ಬ. ಈ ಸಂಭ್ರಮದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ (Vijayalakshmi Darshan) ಅವರು ತಮ್ಮ ಪುತ್ರ ವಿನೀಶ್‌ಗೆ ವಿಶ್ ಮಾಡಿದ್ದಾರೆ. ಜೊತೆಗೆ, ದರ್ಶನ್ ಜೊತೆಗಿನ ಫೋಟೋ ಫೋಸ್ಟ್‌ ಮಾಡಿ ಮಗನಿಗೆ ಧೈರ್ಯ ತುಂಬಿದ್ದಾರೆ. 

'ನೀನು ಕೆಲ ಘಟನೆಗಳು, ಹಾಗೂ ಪರಿಸ್ಥಿತಿಯನ್ನ ಎದುರಿಸಿ ನಿಂತಿರುವುದು ನನಗೆ ಹೆಮ್ಮೆ ತಂದಿದೆ. ನಾನು‌, ನಿಮ್ಮ ಅಪ್ಪ ನಿನ್ನನ್ನು‌ ತುಂಬಾನೇ ಪ್ರೀತಿಸುತ್ತೇವೆ ಎಂಬುದನ್ನ ಮರೆಯಬೇಡ ಮಗನೇ' ಎಂದಿದ್ದಾರೆ ವಿಜಯಲಕ್ಷ್ಮಿ. ಈ ಮೂಲಕ ವಿನೀಶ್ ಅಪ್ಪ ನಟ ದರ್ಶನ್ ಅವರು ಸದ್ಯ ಜೈಲಿನಲ್ಲಿರುವ ಸಂಗತಿಯನ್ನು ನೆನಪಿಸಿಕೊಂಡು ಮಗನಿಗೆ ಸಮಾಧಾನ ಮಾಡುವ ಯತ್ನ ಮಾಡಿದ್ದಾರೆ ಎನ್ನಬಹುದು.

ಪ್ರತಿವರ್ಷವೂ ಮಗನ ಹುಟ್ಟುಹಬ್ಬವನ್ನು (Vineesh Darshan Birthday) ಗ್ರಾಂಡ್‌ ಆಗಿ ಆಚರಿಸುತ್ತಿದ್ದರು ವಿಜಯಲಕ್ಷ್ಮೀ ಹಾಗೂ ದರ್ಶನ್. ಆದರೆ, ಈ ಬಾರಿ ಈ ಅವಕಾಶ ವಿಜಯಲಕ್ಷ್ಮೀ ಪಾಲಿಗೆ ಹಾಗೂ ದರ್ಶನ್ ಪಾಲಿಗೆ ಮಿಸ್ ಆಗಿದೆ. ದರ್ಶನ್ ಇಲ್ಲದ ಮಗನ ಹುಟ್ಟುಹಬ್ಬವನ್ನು ಆಚರಿಸಿ ಪೋಸ್ಟ್ ಮಾಡಿದ್ದಾರೆ ವಿಜಯಲಕ್ಷ್ಮೀ. ಈ ಬಾರಿ ಅಪ್ಪನ Wishes & ಗಿಫ್ಟ್ ಮಿಸ್ ಮಾಡಿಕೊಂಡಿದ್ದಾರೆ ದರ್ಶನ್ ಪುತ್ರ ವಿನೀಶ್ ತೂಗುದೀಪ. 

ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಅವರು ಕೊಲೆ ಆರೋಪಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವುದು ಗೊತ್ತೇ ಇದೆ. ಸದ್ಯ ಆರೋಪಿ ಸ್ಥಾನದಲ್ಲಿರುವ ನಟ ದರ್ಶನ್ ಅವರು ಮುಂದೆ ಅಪರಾಧಿ ಎನ್ನಿಸಿಕೊಳ್ಳುತ್ತಾರೋ ಅಥವಾ ನಿರಪರಾಧಿ ಎನ್ನಿಸಿಕೊಂಡು ಹೊರಬರುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ
ಯಶ್- ರಾಧಿಕಾ ಪುತ್ರಿಗೆ 7 ವರ್ಷಗಳ ಸಂಭ್ರಮ: ಹುಟ್ಟುಹಬ್ಬದ ಕ್ಯೂಟ್​ ಫೋಟೋಗಳು ಇಲ್ಲಿವೆ