ಮತ್ತೊಂದು ಸಾರಥಿ ಆಗುತ್ತೆ ಅಂದುಕೊಂಡಿದ್ದ 'ದಿ ಡೆವಿಲ್' ಏನಾಯ್ತು? ದರ್ಶನ್ ಚಿತ್ರದ ಕಲೆಕ್ಷನ್‌ ಎಷ್ಟಾಯ್ತು?

Published : Dec 17, 2025, 02:50 PM IST
Darshan The Devil Movie

ಸಾರಾಂಶ

ಸಾರಥಿ ಆವತ್ತಿಗೆ ದರ್ಶನ್ ಕರೀಯರ್​ನಲ್ಲೇ ಅತಿದೊಡ್ಡ ಯಶಸ್ಸು ಕಂಡಿತ್ತು. ಇದ್ರಲ್ಲಿ ದರ್ಶನ್ ಕುರಿತ ಅನುಕಂಪದ ಜೊತೆಗೆ ಸಾರಥಿ ಕಂಟೆಂಟ್ ಕೂಡ ಅದ್ಭುತವಾಗಿತ್ತು. ರಿಪೀಟ್ ಆಡಿಯನ್ಸ್ ಸಿನಿಮಾಗೆ ಬಂದಿದ್ರು. ಸಾರಥಿ ಶತದಿನೋತ್ಸವ ಆಚರಿಸಿತ್ತು. ಡೆವಿಲ್​ಗೂ ಮೆಗಾ ಓಪನಿಂಗ್ ಸಿಕ್ಕಿದೆ, ಮುಂದೇನು..?

ದರ್ಶನ್ ‘ದಿ ಡೆವಿಲ್’ ಕಲೆಕ್ಷನ್ ಕಥೆ ಏನು?

11 ಡಿಸೆಂಬರ್ 2025ರಂದು ತೆರೆಕಂಡ ದರ್ಶನ್ (Darshan Thoogudeepa) ನಟನೆಯ 'ದಿ ಡೆವಿಲ್' ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿರೋದು ಗೊತ್ತೇ ಇದೆ. ಆದ್ರೆ ಡೆವಿಲ್ ಸಾರಥಿಯಂತೆ ದೊಡ್ಡ ಹಿಟ್ ಆಗುತ್ತಾ..? ಹಿಂದೆ ದಾಸ ಜೈಲಿನಲ್ಲಿದ್ದಾಗಲೇ ಬಂದು ಬಿಗ್ಗೆಸ್ಟ್ ಸಕ್ಸಸ್ ಕಂಡಿದ್ದ ಸಾರಥಿಯ ಮಟ್ಟಕ್ಕೆ ಡೆವಿಲ್ ಕೂಡ ತಲುಪಬಹುದಾ..? ಈ ಬಗ್ಗೆ ಬಾಕ್ಸಾಫೀಸ್ ಪಂಡಿತರು ಏನಂತಾರೆ..? ಆ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ಮೊದಲ ದಿನವೇ 10 ಕೋಟಿ ಗಳಿಸಿದ ಡೆವಿಲ್

ಯೆಸ್ ಗುರುವಾರ ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ಬಿಗ್ಗೆಸ್ಟ್ ಓಪನಿಂಗ್ ಪಡೆದುಕೊಂಡಿದೆ. ದಾಸನ ಫ್ಯಾನ್ಸ್ ಫಸ್ಟ್ ಡೇ ಮುಗಿಬಿದ್ದು ಸಿನಿಮಾವನ್ನ ನೋಡಿದ್ದಾರೆ. ಖುದ್ದು ಚಿತ್ರತಂಡವೇ ಅನೌನ್ಸ್ ಮಾಡಿರುವಂತೆ ಸಿನಿಮಾ ಮೊದಲ ದಿನದ ಗಳಿಕೆ 10 ಕೋಟಿ ದಾಟಿದೆ.

ಮೊದಲ ದಿನ ಇಷ್ಟು ದೊಡ್ಡ ಓಪನಿಂಗ್ ಪಡೆದುಕೊಂಡರೂ ಆ ಬಳಿಕ ಸಿನಿಮಾದ ಕಲೆಕ್ಷನ್ ಡಲ್ ಆಗಿದೆ. ಎರಡನೇ ದಿನ 3 ಪ್ಲಸ್ ಕೋಟಿ ಗಳಿಸಿರೋ ಡೆವಿಲ್ ಸಿನಿಮಾ, ಶನಿವಾರ ಭಾನುವಾರವೂ ತಕ್ಕಮಟ್ಟಿಗೆ ಒಳ್ಳೆ ಗಳಿಕೆ ಮಾಡಿದೆ. ಆದ್ರೆ ಸೋಮವಾರದ ಹೊತ್ತಿಗೆ ಸಿನಿಮಾ ಕಲೆಕ್ಷನ್ ಡಲ್ ಆಗಿದೆ.

ಮತ್ತೊಂದು ಸಾರಥಿ ಆಗಲಿಲ್ಲ ದಿ ಡೆವಿಲ್..!

ಅಸಲಿಗೆ ಡೆವಿಲ್ ತೆರೆಗೆ ಬರುವ ಮುನ್ನ ಎಲ್ಲರೂ ಇದು ಮತ್ತೊಂದು ಸಾರಥಿ ಆಗುಬಹುದು ಅನ್ನೋ ನಿರೀಕ್ಷೆ ಇಟ್ಟುಕೊಂಡಿದ್ರು. 2011ರಲ್ಲಿ ಸಾರಥಿ ರಿಲೀಸ್ ಆದಾಗಲೂ ದರ್ಶನ್ ಜೈಲು ಪಾಲಾಗಿದ್ರು. ನಾಯಕ ಕಂಬಿ ಹಿಂದೆ ಇದ್ದಾಗ ಬಂದ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು.

ಸಾರಥಿ ಆವತ್ತಿಗೆ ದರ್ಶನ್ ಕರೀಯರ್​ನಲ್ಲೇ ಅತಿದೊಡ್ಡ ಯಶಸ್ಸು ಕಂಡಿತ್ತು. ಇದ್ರಲ್ಲಿ ದರ್ಶನ್ ಕುರಿತ ಅನುಕಂಪದ ಜೊತೆಗೆ ಸಾರಥಿ ಕಂಟೆಂಟ್ ಕೂಡ ಅದ್ಭುತವಾಗಿತ್ತು. ರಿಪೀಟ್ ಆಡಿಯನ್ಸ್ ಸಿನಿಮಾಗೆ ಬಂದಿದ್ರು. ಸಾರಥಿ ಶತದಿನೋತ್ಸವ ಆಚರಿಸಿತ್ತು.

ಡೆವಿಲ್​ಗೂ ಮೆಗಾ ಓಪನಿಂಗ್ ಸಿಕ್ಕಿದೆ ಆದ್ರೂ ಇದು ಮತ್ತೊಂದು ಸಾರಥಿ ಆಗೋದು ಅಸಾಧ್ಯ ಅಂತಿದ್ದಾರೆ ಬಾಕ್ಸಾಫೀಸ್ ಪಂಡಿತರು. ಫ್ಯಾಮಿಲಿ ಆಡಿಯನ್ಸ್ ಡೆವಿಲ್ ಕೈ ಹಿಡಿದ್ರೆ ನಿರ್ಮಾಪಕರ ಜೇಬಿಗೆ ಮತ್ತಷ್ಟು ಹಣ ಬರಬಹುದು. ಆದ್ರೆ ಇನ್ನೊಂದು ವಾರದಲ್ಲಿ 45, ಮಾರ್ಕ್ ಸಿನಿಮಾಗಳು ಕೂಡ ಬರ್ತಾ ಇವೆ.

ಕಾಟೇರ ನಂತರ ಬಂದ ಚಿತ್ರದತ್ತ ದೊಡ್ಡ ನಿರೀಕ್ಷೆ

ಹೌದು ದರ್ಶನ್ ನಟನೆಯ ಹಿಂದಿನ ಸಿನಿಮಾ ಕಾಟೇರ ಅತಿದೊಡ್ಡ ಯಶಸ್ಸು ಕಂಡಿತ್ತು. ಕೆಜಿಎಫ್, ಕಾಂತಾರ ಬಿಟ್ರೆ ಕನ್ನಡದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾ ಇದು. ಕಾಟೇರ ಚಿತ್ರದ ಕಥೆ, ದರ್ಶನ್ ರ ಪಾತ್ರ ಕೂಡ ಅಭಿಮಾನಿಗಳಿಗೆ ಇಷ್ಟವಾಗಿತ್ತು.

ಆದ್ರೆ ಕಾಟೇರ ನೋಡಿ ಆ ನಿರೀಕ್ಷೆಯಲ್ಲಿ ಡೆವಿಲ್ ನೋಡಬಂದವರಿಗೆ ಕೊಂಚ ನಿರಾಸೆ ಆಗಿದ್ದು ಸುಳ್ಳಲ್ಲ. ಕಾಟೇರ ಹಳ್ಳಿ ಹಿನ್ನೆಲೆಯ ರೆಟ್ರೋ ಚಿತ್ರವಾದ್ರೆ , ಡೆವಿಲ್ ಸ್ಟೈಲಿಶ್ ಮಾಸ್ ಸಿನಿಮಾ. ಇಲ್ಲಿ ದರ್ಶನ್ನೇ ಹೀರೋ ದರ್ಶನ್ನೇ ವಿಲನ್.

ಅಭಿಮಾನಿಗಳು ಡೆವಿಲ್​ನ ಮೆಚ್ಚಿದ್ರೂ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇದು ಇಷ್ಟ ಆಗೋದು ಕಷ್ಟ. ಸಾರಥಿಯಂತೆ, ಕಾಟೇರನಂತೆ ಡೆವಿಲ್ ಆಗೋದು ಬಲುಕಷ್ಟ ಅಂತಿದ್ದಾರೆ ಗಾಂಧಿನಗರ ಮಂದಿ.

ಡೆವಿಲ್ ಬಿಟ್ರೆ ದರ್ಶನ್ ಇನ್ಯಾವ ಚಿತ್ರದಲ್ಲೂ ನಟಿಸಿಲ್ಲ. ಸದ್ಯ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲಿನಲ್ಲಿರುವ ದಾಸ ಹೊರಬಂದು ಮುಂದಿನ ಚಿತ್ರ ಮಾಡೋದು ಯಾವಾಗ ಗೊತ್ತಿಲ್ಲ. ಇಂಥಾ ಟೈಂನಲ್ಲಿ ಡೆವಿಲ್ ಇನ್ನಷ್ಟು ದೊಡ್ಡ ಮ್ಯಾಜಿಕ್ ಮಾಡೋ ನಿರೀಕ್ಷೆ ಇತ್ತು. ಆದ್ರೆ ಅದ್ಯಾಕೋ ಆ ನಿರೀಕ್ಷೆಯನ್ನ ಡೆವಿಲ್ ಹುಸಿಮಾಡಿದೆ...! ಮುಂದೇನು ಅನ್ನೋ ಕುತೂಹಲ ಮೂಡಿದೆ.

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಮಾಕ್ಯ ದೇವಿ ಸನ್ನಿಧಾನದಲ್ಲಿ ‘ತೀರ್ಥರೂಪ ತಂದೆಯವರಿಗೆ’ ತಂಡ
ಬಿಗ್ ಬಾಸ್ ಮನೆಯಿಂದ ಹೊರ ಬಂದ ಜಾಹ್ನವಿ ಏನು ಮಾಡ್ತಿದ್ದಾರೆ?