
ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮೀ ಅವರು ‘ದಿ ಡೆವಿಲ್’ ಸಿನಿಮಾ ರಿಲೀಸ್ ಆಗಿದೆ. ದರ್ಶನ್ ಜೈಲಿನಲ್ಲಿದ್ದು, ಅವರ ಅನುಪಸ್ಥಿತಿಯಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿದೆ. ಈ ಮಧ್ಯೆ ನೆಗೆಟಿವ್ ಕಾಮೆಂಟ್ ಮಾಡುವವರು ಇದ್ದಾರೆ. ಈ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
‘ದಿ ಡೆವಿಲ್’ ಸಿನಿಮಾ ನಾಯಕಿ ರಚನಾ ರೈ ಅವರು ವಿಜಯಲಕ್ಷ್ಮೀ ದರ್ಶನ್ ಅವರ ಸಂದರ್ಶನವನ್ನು ಮಾಡಿದ್ದಾರೆ.
ಎಲ್ಲರೂ ನಮ್ಮ ಬಗ್ಗೆ ಮಾತನಾಡೋದಿಲ್ಲ. ನೆಗೆಟಿವ್ ಕಾಮೆಂಟ್ಸ್ ಬರುತ್ತದೆ. ಜನರು ನನ್ನ ಬಗ್ಗೆ ಮಾತಾಡಿದ್ರು ಮ್ಯಾಟರ್ ಆಗಲ್ಲ, ಈಗ ನನ್ನ ಮಗನ ಬಗ್ಗೆ ಮಾತಾಡಿದ್ರು ಮ್ಯಾಟರ್ ಆಗಲ್ಲ. ನಮ್ಮನ್ನು ಪ್ರೀತಿಸುವವರ ಬಗ್ಗೆ ಯೋಚನೆ ಮಾಡ್ತೀನಿ, ನನ್ನ ಬಗ್ಗೆ ನೆಗೆಟಿವ್ ಆಗಿ ಮಾತಾಡೋರ ಬಗ್ಗೆ ತಲೆ ಕೆಡಿಸಿಕೊಂಡು ಕೂತ್ಕೊಳೋದಿಲ್ಲ. ನನ್ನ ಮಗ ಕೂಡ ಬೆಳೆಯುತ್ತಿದ್ದೇನೆ, ಅವನನ್ನು ನಾನು ಬೆಳೆಸಬೇಕು. ನನಗೆ ಮನೆಯಿದೆ, ಬ್ಯುಸಿನೆಸ್ ಇದೆ, ಜೈಲಿನ ಕೆಲಸವೂ ಇದೆ. ಅದನ್ನು ನೋಡಿಕೊಳ್ಳಬೇಕು ಎಂದು ವಿಜಯಲಕ್ಷ್ಮೀ ದರ್ಶನ್ ಹೇಳಿದ್ದಾರೆ.
ನಾನು ಕಾಮೆಂಟ್‌ಗಳನ್ನು ಓದೋದಿಲ್ಲ, ನೆಗೆಟಿವ್ ಆಗಿ ಮಾತನಾಡೋರು ನನ್ನ ಜೊತೆ ಇಲ್ಲವೇ ಇಲ್ಲ. ನನಗೆ ಪಾಸಿಟಿವ್ ಆಗಿ ಮುಂದುವರೆಯಬೇಕು. ಪತ್ನಿಯಾಗಿ ನಾನು ಏನು ಮಾಡಬೇಕೋ ಅದನ್ನು ಮಾಡ್ತೀನಿ, ಉಳಿದದ್ದು ದರ್ಶನ್ ಅವರ ಪರಿಶ್ರಮ ಅಷ್ಟೇ. ದರ್ಶನ್ ಅವರಿಗೆ ನೆಗೆಟಿವ್ ಪ್ರತಿಕ್ರಿಯೆ ಸಿಕ್ಕಾಗ ಬೇಜಾರಾಗುತ್ತದೆ, ಯಾಕೆ ನನಗೆ ಎಂದು ಅನಿಸುವುದು, ಸಾಕಷ್ಟು ಬಾರಿ ಯಾಕೆ ಯಾಕೆ ಎಂಬ ಪ್ರಶ್ನೆ ಬರುವುದು. ಮ್ಯಾಕ್ಸಿಮಮ್ 1 ವಾರ ಅಥವಾ ಹದಿನೈದು ದಿನ ನಾನು ಅಳುವೆ, ಆಮೇಲೆ ಯೋಚನೆ ಮಾಡೋದಿಲ್ಲ ಎಂದು ವಿಜಯಲಕ್ಷ್ಮೀ ದರ್ಶನ್ ಹೇಳಿದ್ದಾರೆ.
ನಾವು ಫ್ಯಾನ್ಸ್ ಶೋಗೆ ಹೋಗಿದ್ದೇವೆ, ನಿಜವಾದ ದರ್ಶನ್ ಅವರ ಅಭಿಮಾನಿಗೆ ಹೆಣ್ಣು ಮಕ್ಕಳನ್ನು ಹೇಗೆ ನೋಡಬೇಕು, ಹೇಗೆ ಗೌರವಿಸಬೇಕು ಎನ್ನೋದು ಗೊತ್ತಿದೆ. ನಾವು ಫಸ್ಟ್ ಡೇ ಫಸ್ಟ್ ಶೋಗೆ ಹೋದಾಗ ನಾಲ್ಕು ಬೌನ್ಸರ್ಸ್ ಬಿಟ್ಟು ಬೇರೆ ಯಾರೂ ಇರಲಿಲ್ಲ. ಆದರೆ ಯಾರೂ ನಮ್ಮ ಜೊತೆ ಮಿಸ್ ಬಿಹೇವ್ ಮಾಡಲಿಲ್ಲ, ಒಂದು ಫೀಟ್ ಅಂತರ ಇಟ್ಟುಕೊಂಡಿದ್ದರು. ಫೇಕ್ ಅಕೌಂಟ್ ಇಟ್ಟುಕೊಂಡು ಯಾರು ಬೇಕಿದ್ರೂ ದರ್ಶನ್ ಅಭಿಮಾನಿ ಎಂದು ಹೇಳಬಹುದು, ನನ್ನ ಹೆಸರಿನಲ್ಲಿ ಅಕೌಂಟ್ ಮಾಡಬಹುದು.
ದರ್ಶನ್ ಅಭಿಮಾನಿಗಳ ಬಗ್ಗೆ ಪದಗಳಲ್ಲಿ ಹೇಳೋಕೆ ಆಗದು. ದರ್ಶನ್ ಥರ ನನಗೆ ಅಭಿಮಾನಿಗಳು ಇದ್ದಿದ್ದರೆ ಎಂದು ಅನಿಸುವುದು, ಒಮ್ಮೊಮ್ಮೆ ಹೊಟ್ಟೆಕಿಚ್ಚಾಗುತ್ತದೆ. ಈ ಪ್ರೀತಿ ನನ್ನ, ದರ್ಶನ್ ಮೇಲೆ ಇಡಿ ಎಂದು ಹೇಳುವೆ. ನಾನು ರಸ್ತೆಯಲ್ಲಿ ಹೋದಾಗ ದೇವತೆ ಎನ್ನುತ್ತಾರೆ. ಆಗ ನಾನು ದರ್ಶನ್‌ಗೆ ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳ್ತೀನಿ. ಹೊರಗಡೆ ಜನರು ಇಷ್ಟೆಲ್ಲ ಪ್ರೀತಿ ಕೊಟ್ಟಾಗ ಖುಷಿಯಾಗುತ್ತದೆ, ನನಗೆ ಯಾಕೆ ದೇವತೆ ಎಂದು ಕರೆಯುತ್ತಾರೆ ಎಂದು ಭಯ ಆಗುವುದು.
ದರ್ಶನ್ ಹೊರಗಡೆ ಹೋದಾಗ ಮೈ ಪರಚ್ತಾರೆ, ಗಾಯ ಆಗಿದೆ ಎಂದು ಹೇಳಿದ್ದರು. ನನಗೂ ಹಾಗೆ ಆಗತ್ತೆ ಎನ್ನೋ ಭಯಕ್ಕೆ ನಾನು ದಿ ಡೆವಿಲ್ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ವೇಳೆ ಚಪ್ಪಲಿ ಹಾಕದೆ ಶೂ ಹಾಕಿದ್ದೆ, ವಿನೀಶ್‌ಗೆ ಕೂಡ ಚಪ್ಪಲಿ ಹಾಕಬೇಡ, ಶೂ ಹಾಕಿಕೋ ಎಂದು ಹೇಳಿದ್ದೆ. ಆದರೆ ನಮ್ಮ ಜೊತೆ ಯಾವ ಅಭಿಮಾನಿಯೂ ಮಿಸ್ ಬಿಹೇವ್ ಮಾಡಲಿಲ್ಲ ಎಂದು ವಿಜಯಲಕ್ಷ್ಮೀ ದರ್ಶನ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.