ರಿಲೀಸ್‌ ದಿನಾಂಕ ಘೋಷಿಸಿದ Devil Movie; ಅಷ್ಟರಲ್ಲಿ Darshan Thoogudeepa ರಿಲೀಸ್‌ ಆಗ್ತಾರಾ?

Published : Aug 24, 2025, 12:15 PM IST
actor darshan the devil movie song

ಸಾರಾಂಶ

Darshan Thoogudeepa Rachana Rai starrer The Devil Movie Releas: ನಟ ದರ್ಶನ್‌ ತೂಗುದೀಪ, ರಚನಾ ರೈ ನಟನೆಯ ʼದಿ ಡೆವಿಲ್‌ʼ ಸಿನಿಮಾ ತನ್ನ ರಿಲೀಸ್‌ ದಿನಾಂಕವನ್ನು ಘೋಷಣೆ ಮಾಡಿದೆ. 

2025ರಲ್ಲಿ ಡಿಸೆಂಬರ್ 12 ನಟ ದರ್ಶನ್ ತೂಗುದೀಪ ಅವರ ಬಹುನಿರೀಕ್ಷಿತ ಕನ್ನಡ ಸಿನಿಮಾ 'ದಿ ಡೆವಿಲ್' ಥಿಯೇಟರ್‌ನಲ್ಲಿ ಬಿಡುಗಡೆಯಾಗಲಿದೆ. ಈ ಆಕ್ಷನ್ ಡ್ರಾಮಾ- ಥ್ರಿಲ್ಲರ್ ಸಿನಿಮಾವು ಈಗಾಗಲೇ ತನ್ನ ಟೀಸರ್, ಪೋಸ್ಟರ್‌ಗಳು ಮತ್ತು ಮೊದಲ ಹಾಡಿನ ಮೂಲಕ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಈ ಸಿನಿಮಾದಲ್ಲಿ ಯಾರಿದ್ದಾರೆ?

'ದಿ ಡೆವಿಲ್' ಚಿತ್ರವನ್ನು ಮಿಲನ ಸಿನಿಮಾ ಖ್ಯಾತಿಯ ಪ್ರಕಾಶ್ ವೀರ್ ನಿರ್ದೇಶಿಸಿದ್ದು, ಶ್ರೀ ಜೈಮಾತಾ ಕಂಬೈನ್ಸ್ ಬ್ಯಾನರ್‌ನಡಿಯಲ್ಲಿ ಇದನ್ನು ಅದ್ದೂರಿಯಾಗಿ ನಿರ್ಮಾಣ ಮಾಡಲಾಗಿದೆ. ಈ ಸಿನಿಮಾದಲ್ಲಿ ದರ್ಶನ್ ಅವರಿಗೆ ರಚನಾ ರೈ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಅವರ ಮೊದಲ ಸಿನಿಮಾ. ಇದರ ಜೊತೆಗೆ ಶರ್ಮಿಳಾ ಮಾಂಡ್ರೆ, ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಜಿಷು ಸೇನ್‌ಗುಪ್ತಾ, ಮುಕೇಶ್ ರಿಷಿ, ಫರ್ದೀನ್ ಖಾನ್ ಕೂಡ ನಟಿಸಿದ್ದಾರೆ.

ಸುಧಾಕರ್ ಎಸ್. ರಾಜ್ ಅವರು ಈ ಸಿನಿಮಾದ ಕೊರಿಯೋಗ್ರಫಿ ಮಾಡಿದ್ದಾರೆ. ಬಿ ಅಜನೀಶ್ ಲೋಕನಾಥ್ ಅವರು ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಈ ಸಿನಿಮಾದ ಮೊದಲ ಹಾಡು 'ಇದ್ರೆ ನೆಮ್ದಿಯಾಗ್ ಇರ್ಬೇಕ್' ಇಂದು ರಿಲೀಸ್‌ ಆಗಿದೆ. ಅಭಿಮಾನಿಗಳಿಗೋಸ್ಕರ ಈ ಹಾಡು ಬರೆದ ಹಾಗಿದೆ. ಈ ಹಾಡಿನಲ್ಲಿ ದರ್ಶನ್‌ ಅವರು ಸ್ಟೈಲಿಷ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾದ ಶೂಟಿಂಗ್‌

ಬೆಂಗಳೂರು, ರಾಜಸ್ಥಾನ ಮತ್ತು ಬ್ಯಾಂಕಾಕ್‌ನಂತಹ ಸ್ಥಳಗಳಲ್ಲಿ 'ದಿ ಡೆವಿಲ್' ಸಿನಿಮಾ ಶೂಟಿಂಗ್ ನಡೆದಿದೆ. ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ಎರಡು ಹಾಡುಗಳ ಶೂಟಿಂಗ್‌ ಮುಗಿದಿದ್ದು, ಸಿನಿಮಾದ ಎಲ್ಲ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಂಡಿವೆ. ದರ್ಶನ್ ಅವರು ತಮ್ಮ ಭಾಗದ ಶೂಟಿಂಗ್ ಮತ್ತು ಡಬ್ಬಿಂಗ್ ಕಾರ್ಯವನ್ನು ಈಗಾಗಲೇ ಮುಗಿಸಿದ್ದಾರೆ. ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಈಗ ಬಿರುಸಿನಿಂದ ನಡೆಯುತ್ತಿವೆ, ಸಿನಿಮಾ ತಂಡವು ಡಿಸೆಂಬರ್‌ನಲ್ಲಿ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಸಿದೆ.

ಇಡೀ ನಾಡು ಗಣೇಶ ಹಬ್ಬವನ್ನು ಆಚರಿಸುವ ಖುಷಿಯಲ್ಲಿರುವಾಗ ಸಿನಿಮಾ ತಂಡವು ಚಿತ್ರದ ರಿಲೀಸ್‌ ದಿನಾಂಕವನ್ನು ಘೋಷಣೆ ಮಾಡಿದೆ.

"ಸಿನಿಮಾ ಒಂದು ಮನರಂಜನೆಯ ಮಾಧ್ಯಮ, ಅದನ್ನು ಅದೇ ಮನೋಭಾವದಿಂದ ನೋಡಬೇಕು. ನನ್ನನ್ನು ನಂಬಿ ಕನಸು ಕಂಡಿರುವ ನಿರ್ದೇಶಕರು ಮತ್ತು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿರುವ ನಿರ್ಮಾಪಕರಿಗೆ ಬೆಂಬಲವಾಗಿ ನಿಲ್ಲುವುದು ನನ್ನ ಕರ್ತವ್ಯ. 'ದಿ ಡೆವಿಲ್' ಸಿನಿಮಾದ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಸಾಗಲಿ ಎಂಬುದು ನನ್ನ ಆಶಯ. ಇದಕ್ಕೆ ನನ್ನ ಸೆಲೆಬ್ರಿಟಿಗಳಾದ ನಿಮ್ಮೆಲ್ಲರ ಸಂಪೂರ್ಣ ಸಹಕಾರವಿದೆ" ಎಂದು ದರ್ಶನ್ ತಿಳಿಸಿದ್ದಾರೆ.

'ದಿ ಡೆವಿಲ್' ಸಿನಿಮಾವು ದರ್ಶನ್‌ರವರ 57ನೇ ಸಿನಿಮಾವಾಗಿದೆ. ಇದರ ಟೀಸರ್‌ನಲ್ಲಿ ದರ್ಶನ್‌ರವರ ಡೆವಿಲಿಶ್ ಡೈಲಾಗ್‌ಗಳು, ಸಖತ್‌ ಆಕ್ಷನ್‌ ದೃಶ್ಯಗಳು ಪ್ರೇಕ್ಷಕರಿಗೆ ಥ್ರಿಲ್‌ ನೀಡಿತ್ತು. 'ದಿ ಡೆವಿಲ್' ಸಿನಿಮಾದ ಒಟಿಟಿ ಮತ್ತು ಸ್ಯಾಟಲೈಟ್ ಹಕ್ಕುಗಳ ಕುರಿತು ಒಪ್ಪಂದವು ಬಹುತೇಕ ಖಚಿತವಾಗಿದ್ದು, Zee5 ಮತ್ತು Zee Kannada ಇದರ ಸ್ಟ್ರೀಮಿಂಗ್, ಟಿವಿ ಪ್ರೀಮಿಯರ್ ಹಕ್ಕುಗಳನ್ನು ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಬಗ್ಗೆ ವಾಹಿನಿ, ಸಿನಿಮಾ ತಂಡ ಅಧಿಕೃತ ಹೇಳಿಕೆ ನೀಡಬೇಕಿದೆ.

ಡಿಸೆಂಬರ್‌ 12ರವೊಳಗಡೆ ನಟ ದರ್ಶನ್‌ ತೂಗುದೀಪ ಅವರು ಜೈಲಿನಿಂದ ಹೊರಗಡೆ ಬರೋದು ಡೌಟ್‌ ಎನ್ನಲಾಗಿದೆ. ಹೈಕೋರ್ಟ್‌ ದರ್ಶನ್‌ ಅವರಿಗೆ ಜಾಮೀನು ನೀಡಿತ್ತು. ಇದನ್ನು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ಹೀಗಾಗಿ ಸುಪ್ರೀಂ ಕೋರ್ಟ್‌ ಜಾಮೀನನ್ನು ರದ್ದು ಮಾಡಿದೆ. ಇನ್ನು ಕೋರ್ಟ್‌ ಟ್ರಯಲ್‌ ನಡೆಯಲಿದೆ. ಹೀಗಾಗಿ ಇನ್ನೂ ಆರು ತಿಂಗಳುಗಳ ಬಳಿಕ ಈ ಕೇಸ್‌ ಏನಾಗಲಿದೆ ಎಂದು ಗೊತ್ತಾಗಲಿದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ