
2024 ಟು 2026 ಪರಪ್ಪನ ಅಗ್ರಹಾರ.. ದಾಸ ಇನ್ & ಔಟ್!
ಸ್ಯಾಂಡಲ್ ವುಡ್ ನಲ್ಲಿ ಬಿಂದಾಸ್ಆಗಿ ಮೆರೆಯುತ್ತಿದ್ದ ನಟ ದರ್ಶನ್ (Darshan Thoogudeepa) ಜೈಲು ಸೇರಿ ಸರಿಯಾಗಿ ಎರಡು ವರ್ಷ ಕಳೆದಿದೆ. ಜೂನ್11, 2024ರಂದು ದಾಸ ರೇಣುಕಾಸ್ವಾಮಿ ಕೊಲೆ ಆರೋಪ ಹೊತ್ತು ಪರಪ್ಪನ ಅಗ್ರಹಾರ ಸೇರಿದ್ರು. ಈ ಎರಡು ವರ್ಷದದಲ್ಲಿ ದಾಸನ ಬದುಕು ಹೇಗಾಗಿದೆ. ಏನೆಲ್ಲಾ ಘಟನೆಗಳು ನಡೆದಿವೆ ಅಂತ ನೋಡೋಣ ಬನ್ನಿ..
ನಟ ದರ್ಶನ್.. ಕನ್ನಡ ಚಿತ್ರರಂಗದ ಸ್ಟಾರ್ ನಟ.. ದೊಡ್ಡ ಅಭಿಮಾನಿ ಬಳಗ ಹೊಂದಿದ್ದ ಹೀರೋ.. ದಾಸನ ಸ್ಟಾರ್ ಡಮ್ ತುಂಬಾನೇ ಪೀಕ್ನಲ್ಲಿತ್ತು. ಮತ್ಯಾರಿಗೂ ಸಿಗದಷ್ಟು ಕನ್ನಡಿಗರ ಪ್ರೀತಿ ಆತನಿಗಿತ್ತು. ಆದ್ರೆ ರೇಣುಕಾಸ್ವಾಮಿ ಅನ್ನೋ ವ್ಯಕ್ತಿಯ ಒಂದು ಕೊಲೆ ದಚ್ಚು ಸಾಮ್ರಾಜ್ಯಕ್ಕೆ ಕೊಳ್ಳಿ ಇಟ್ಟಿತ್ತು. ದಾಸನ ರಾಜ್ಯ ಭಾರ ಮುಗಿದು ಬರೋಬ್ಬರು 2 ವರ್ಷ ಆಗಿದೆ. ಅಂದ್ರೆ ದರ್ಶನ್ ಕೊಲೆ ಕೇಸ್ ಆರೋಪದ ಮೇಲೆ ಮೊದಲ ಭಾರಿಗೆ ಜೈಲು ಸೇರಿದ್ದು, ಜೂನ್ 1ಟನೇ ತಾರೀಖು.
ದರ್ಶನ್ ಜೈಲು ವಾಸ.. ಎರಡು ವರ್ಷದಲ್ಲಿ ಏನೆಲ್ಲಾ ಆಯ್ತು..? ದಾಸನ ಬಿಡುಗಡೆ ಬೇಲ್ ರಿಜೆಕ್ಟ್.. ಎದುರಾಯ್ತು ದೊಡ್ಡ ಶಾಕ್..!
ದರ್ಶನ್ ಜೈಲಿನಿಂದ ಹೊರ ಬರಬೇಕು ಅಂತ ಸುಪ್ರೀಂ ಕೋರ್ಟ್ನಲ್ಲಿ ಬೆಲ್ ಅರ್ಜಿ ಹಾಕ್ತಾನೆ ಇದ್ದಾರೆ. ಆದ್ರೆ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಹಾಗೂ ವಿಜಯ್ ಬಿಷ್ಣೋಯ್ ಪೀಠ ಬೆಲ್ ಅರ್ಜಿಯನ್ನು ವಜಾ ಮಾಡ್ತೋ ಅಲ್ಲಿಗೆ ದರ್ಶನ್ ಪಾಲಿಗಿದ್ದ ಕೊನೆಯ ಬಾಗಿಲು ಮುಚ್ಚಿಕೊಳ್ತು.. ಇದು ದರ್ಶನ್ಗೆ ದೊಡ್ಡ ಶಾಕ್ ಕೊಟ್ಟಿದೆ. ಇನ್ನೊಂದೊ ವರ್ಷ ದಚ್ಚು ಜೈಲಲ್ಲೇ ಇರಬೇಕಾದ ಸ್ಥಿತಿ ಇದೆ.
ಇನ್ನು ದಾಸನನ್ನ ಜೈಲು ಸೇರಿಸಿದ ಆ ಕೊಲೆ ಕೇಸ್ ಟೈಮ್ ಲೈನೂ ಏನು ಅನ್ನೋದನ್ನ ಈ ಸಂದರ್ಭದಲ್ಲಿ ನೋಡಲೇ ಬೇಕು.. ಯಾಕಂದ್ರೆ, ಈ ಟೈಮ್ ಲೈನ್ಗೆ ಇದೀಗ ಎರಡು ವರ್ಷ ಆಗ್ತಿದೆ ನೋಡಿ ಅದಕ್ಕೆ...
ಜೂನ್ 9, 2024 - ಸುಮ್ಮನಹಳ್ಳಿ ರಾಜಕಾಲುವೆಯಲ್ಲಿ ಮೃತದೇಹ ಪತ್ತೆ
ಜೂನ್ 10. 2024 - ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ
ತಪ್ಪೋಪ್ಪಿಕೊಂದು ನಾಲ್ವರು ಶರಣು
ಜೂನ್ 11, 2024 - ತನಿಖೆಯಲ್ಲಿ ದರ್ಶನ್, ಪವಿತ್ರ ಹೆಸರು ಬೆಳಕಿಗೆ
ಮೈಸೂರಲ್ಲಿ ದರ್ಶನ್, ಬೆಂಗಳೂರಲ್ಲಿ ಪವಿತ್ರಾ ಬಂಧನ
ಈ ಟೈಮ್ಲೈನ್ನನ್ನು ದರ್ಶನ್ ಅಭಿಮಾನಿಗಳಾಗಲಿ ರಾಜ್ಯದ ಜನ್ರಾಗಲಿ ಯಾವುದೇ ಕಾರಣಕ್ಕೂ ಮರೆಯೋದಕ್ಕೆ ಸಾಧ್ಯವಿಲ್ಲ.. ಯಾಕಂದ್ರೆ, ಇಡೀ ದೇಶಾದ್ಯಂತ ಈ ಕೊಲೆ ಕೇಸ್ ಬಾರೀ ಸದ್ದು ಮಾಡಿತ್ತು.. ಸ್ಯಾಂಡಲ್ವುಡ್ನ ಸ್ಟಾರ್ ನಟ ಕೊಲೆ ಕೇಸ್ನಲ್ಲಿ ಪ್ರಮುಖ ಆರೋಪಿ ಅನ್ನೋ ಕಾರಣಕ್ಕಾಗಿ.. ರಾಜ್ಯದಲ್ಲಂತೂ ಇವತ್ತಿಗೂ ಇದೊಂದು ಸೆನ್ಸೆಷನಲ್ ಕೇಸ್..
ಜೈಲಿನಲ್ಲಿದ್ದೇ ಫ್ಯಾನ್ಸ್ ಡೆವಿಲ್ ಸಿನಿಮಾ ತೋರಿಸಿದ್ದ ದರ್ಶನ್..!
ದಾಸ ಜೈಲು ಸೇರಿ ಎರಡು ವರ್ಷ ಆಗೋಗಿದೆ.. ಜೈಲಲ್ಲಿದ್ರೂ ದರ್ಶನ್ ಈ ವರ್ಷವನ್ನ ಸಿನಿಮಾ ರಿಲೀಸ್ನೊಂದಿಗೆ ಆರಂಭಿಸಿದ್ರು. ಡೆವಿಲ್ ಸಿನಿಮಾವನ್ನು ಜೈಲಿನಿಂದಲೇ ಅಭಿಮಾನಿಗಳಿಗೆ ಅರ್ಪಿಸಿ, ಪತ್ನಿ ವಿಜಯಲಕ್ಷ್ಮಿ ಮೂಲಕ ಸಂದೇಶವನ್ನು ಕಳುಹಿಸಿದ್ರು..
ಜೈಲಿನಲ್ಲೇ ಆಯ್ತು ಹುಟ್ಟುಹಬ್ಬ, ವೆಡ್ಡಿಂಗ್ ಆನಿವರ್ಸರಿ..!
ಇದೇ ಸಂದರ್ಭದಲ್ಲಿ ಈ ವರ್ಷದ ಎರಡು ಇಂಪಾರ್ಟೆಂಟ್ ಇವೆಂಟ್ಗಳನ್ನು ದಾಸ ಮಿಸ್ ಮಾಡ್ಕೊಳ್ಳಬೇಕಾಯ್ತು.. ಮೊದಲನೆಯದು ತನ್ನದೇ ಬರ್ತ್ ಡೇ.. ಹೌದು, ಫೆಬ್ರವರಿ 16 ರಂದು ದಾಸ ಹುಟ್ಟಿದ ದಿನ.. ಆ ದಿನವನ್ನ ಅಭಿಮಾನಿಗಳೊಂದಿಗೆ ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳೊದು ವಾಡಿಕೆ. ಆದ್ರೆ, ಈ ಸಲ ಆ ಅವಕಾಶವೇ ಸಿಗಲಿಲ್ಲ. ಜೈಲಲ್ಲಿದ್ದ ದಾಸನನ್ನ ನೋಡಲಿಕ್ಕೆ ಪತ್ನಿ ಹಾಗೂ ಮಗನಿಗೆ ಜೈಲಾಧಿಕಾರಿಗಳು ಅವಕಾಶವನ್ನ ಮಾಡಿಕೊಡಲಿಲ್ಲ.. ಹೀಗಾಗಿ ದಾಸ ಜೈಲಲ್ಲಿಯೇ ಏಕಾಂತವಾಗಿ ಕಾಲ ಕಳೆಯ ಬೇಕಾಯ್ತು..
ಮತ್ತೊಂದು ದಾಸ ಈ ವರ್ಷ ಮಿಸ್ ಮಾಡ್ಕೊಂಡ ಮತ್ತೊಂದು ಇಂಪಾರ್ಟೆಂಟ್ ಇವೆಂಟ್ ಅಂದ್ರೆ, ತನ್ನ ಮದುವೆ ವಾರ್ಷಿಕೋತ್ಸವ. 2003 ಮೇ 19ರಂದ ವಿಜಯ್ ಲಕ್ಷ್ಮಿಯನ್ನು ದಾಸ ಧರ್ಮಸ್ಥಳದಲ್ಲಿ ಸರಳವಾಗಿ ಕೈ ಹಿಡಿದಿದ್ರು. ಆ 23ನೇ ವಾರ್ಷಿಕೋತ್ಸವವನ್ನ ದಾಸ ಜೈಲಲ್ಲಿಯೇ ಆಚರಿಸಕೊಳ್ಳಬೇಕಾಯ್ತು. ಬರ್ತ್ಡೇಗೆ ಮಿಸ್ ಮಾಡ್ಕೊಂಡಿದ್ದ ವಿಜಯ್ ಲಕ್ಷ್ಮಿ , ಆ್ಯನಿವರ್ಸರಿಗೆ ದರ್ಶನ್ ಭೇಟಿಯನ್ನು ಮಿಸ್ ಮಾಡಿಕೊಳ್ಳಲಿಲ್ಲ.. ಜೈಲಲ್ಲಿ ಇಬ್ಬರಿಗೂ 30 ನಿಮಿಷಗಳ ಕಾಲ ದಾಸನನ್ನ ಭೇಟಿಗೂ ಅವಕಾಶ ಸಿಕ್ಕಿತ್ತು..
ಇದೇ ಸಂದರ್ಭದಲ್ಲಿ ಇನ್ನೊಂದು ವಿಷ್ಯವನ್ನ ನೆನಪು ಮಾಡಿಕೊಳ್ಳಲೇಬೇಕು.. ಯಾಕಂದ್ರೆ, ದಾಸ ಜೈಲು ವಾಸ ಶುರುವಾಗಿದ್ದೇ ಈ ಆನಿವರ್ಸರಿ ವೃತ್ತಾಂತದಿಂದ ಅಂದ್ರೆ ತಪ್ಪಾಗಲ್ಲ. 2024ರ 21ನೇ ವಿವಾಹ ವಾರ್ಷಿಕೋತ್ಸವವನ್ನು ದರ್ಶನ್ ಹಾಗೂ ವಿಜಯ್ ಲಕ್ಷ್ಮಿ ದುಬೈನಲ್ಲಿ ಆಚರಿಸಿಕೊಂಡಿದ್ರು. ಅಂದ್ರೆ, ರೇಣುಕಾಸ್ವಾಮಿ ಕೊಲೆಯಾಗುವುಕ್ಕೂ ಒಂದು ತಿಂಗಳು ಮುಂಚಿತವಾಗಿ.. ಅವತ್ತು ದರ್ಶನ್ ಪತ್ನಿಗಾಗಿ ಹಾಡನ್ನ ಕೂಡ ಹಾಡಿದ್ರು.. ಇಬ್ಬರು ಜೊತೆ ಜೊತೆಯಲ್ಲಿ ಸ್ಟೆಪ್ ಹಾಕಿದ್ರು..
ಈ ಖುಷಿಯನ್ನ ವಿಜಯ್ ಲಕ್ಷ್ಮಿ ಸೋಶಿಯಲ್ಮೀಡಿಯಾದಲ್ಲಿ ಪೋಸ್ಟ್ ಕೂಡ ಮಾಡಿಕೊಂಡ್ರು.. ಅಲ್ಲಿಗೆ, ದರ್ಶನ್ ಪಾಲಿನ ಸಂಭ್ರಮದ ದಿನಗಳು ಮುಗಿದು ಕರಾಳ ಅಧ್ಯಾಯವೇ ಆರಂಭವಾಗಿ ಹೋಯ್ತು.. ವಿಜಯ್ ಲಕ್ಷ್ಮಿ ಪೊಸ್ಟ್ಗೆ ಟಾಂಟ್ ನೀಡುವಂತೆ ಪವಿತ್ರಾ ಪೋಸ್ಟ್ ಮಾಡಿದ್ರು.. ಇಬ್ಬರ ಈ ವಾರ್ನಿಂದ ದರ್ಶನ್ ತಲೆ ಬಿಸಿಯಾಗಿತ್ತು.. ಆ ಬಳಿಕ ಪವಿತ್ರಾಳನ್ನ ಓಲೈಕೆ ಮಾಡೋದಕ್ಕೆ ಅಂತ ಹೋಗಿಯೇ ಈ ಎಲ್ಲಾ ಅವಾಂತರಗಳು ಘಟಿಸಿದ್ವು ಅಂತ ಹೇಳಲಾಗ್ತಿದೆ.
ದರ್ಶನ್ ಜೈಲು ಸೇರಿದ್ಮೇಲೆ ಆತನ ಸಿನಿಮಾಗಳನ್ನು ರೀ ರಿಲಿಸ್ ಮಾಡುವ ಮೂಲ್ಕ ಪ್ರಡ್ಯೂಸರ್ಗಳು ಒಂದಿಷ್ಟು ಕಾಸು ಮಾಡಿಕೊಳ್ತಿದ್ದಾರೆ.. ಅಭಿಮಾನಿಗಳು ದರ್ಶನ್ ಸಿನಿಮಾಗಳನ್ನ ಥಿಯೇಟರ್ಗೆ ಬಂದು ನೋಡ್ತಾರೆ ಅನ್ನೋ ಕಾರಣಕ್ಕೆ ದರ್ಶನ್ ಅಭಿನಯದ ಕಲಾಸಿಪಾಳ್ಯ, ಸುಂಟರಗಾಳಿ, ಸಾರಥಿ, ಮೆಜೆಸ್ಟಿಕ್ ಸೇರಿದಂತೆ ಹಕಲವು ಸಿನಿಮಾಗಳು ರೀ ರಿಲೀಸ್ ಆಗಿವೆ.
ಈ ಮಧ್ಯೆ ದರ್ಶನ್ ಕಳೆದ 2025ರಲ್ಲಿ ದರ್ಶನ್ ಪಾಲಿಗೆ ಹೇಗಿತ್ತು ಅನ್ನೋದನ್ನ ನೋಡಿದ್ರೆ, ಸಿಹಿ ಹಾಗೂ ಕಹಿ ಎರಡೂ ಸಿಕ್ಕಿತ್ತು. ಯಾಕಂದ್ರೆ, ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ದರ್ಶನ್, ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿ ಜೈಲುವಾಸದಲ್ಲಿ ಶತಕದಿನವನ್ನು ಪೂರೈಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ರು. ಆ ವರ್ಷ ಪತ್ನಿ, ಮಗ ವಿನೀಶ್ ಜೊತೆಯಲ್ಲಿ ಹೊಸ ವರ್ಷ, ಸಂಕ್ರಾಂತಿ ಹಬ್ಬ ಮಾಡಿದ್ರು. ಅಷ್ಟೆ ಅಲ್ಲ ಡೆವಿಲ್ ಸಿನಿಮಾದ ಶೂಟಿಂಗ್ ಅಂತ ಥೈಲ್ಯಾಂಡ್ಗೆ ಹೋಗಿದ್ರು. ದೇವಸ್ಥಾನಗಳಿಗೆ ಸುತ್ತಿದ್ರು.
2025 ರಲ್ಲಿ ಮತ್ತೆ ಜೈಲು ಸೇರಿದ ನಟ ದರ್ಶನ್..!
ಡೆವಿಲ್ಸಿನಿಮಾ ಕೆಲಸ ಮುಗಿಸಿದ್ದ ನಟ ದರ್ಶನ್ ಸಿನಿಮಾ ಹಾಡಿನ ರಿಲೀಸ್ ಡೇಟ್ ಅನೌನ್ಸ್ ಮಾಡ್ಕೊಂಡು ಕಾಯ್ತಿದ್ರೆ, ಅತ್ತ ಸುಪ್ರೀಂ ಕೋರ್ಟ್ಶಾಕ್ ನೀಡ್ತು.. ಆಗಸ್ಟ್ 14ನೇ ತಾರೀಕು ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ರದ್ದು ಮಾಡ್ತು.. ಮತ್ತೆ ಮತ್ತೆ ದಾಸ ಪರಪ್ಪನ ಅಗ್ರಹಾರ ಜೈಲು ಸೇರಿದ್ರು. ಅಲ್ಲಿನಿಂದ ಇಲ್ಲಿ ತನಕ ದಚ್ಚು ಜೈಲಿನಲ್ಲೇ ಇದ್ದಾರೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.