ಗಾಳಿ ಮಾತುಗಳಿಗೆ ದಿನಕರ್ ತೂಗುದೀಪ ಫುಲ್‌ ಸ್ಟಾಪ್‌: ದರ್ಶನ್ ಜೊತೆ ಸಿನಿಮಾ?

Suvarna News   | Asianet News
Published : Nov 23, 2020, 01:09 PM ISTUpdated : Nov 23, 2020, 01:15 PM IST
ಗಾಳಿ ಮಾತುಗಳಿಗೆ  ದಿನಕರ್ ತೂಗುದೀಪ ಫುಲ್‌ ಸ್ಟಾಪ್‌: ದರ್ಶನ್ ಜೊತೆ ಸಿನಿಮಾ?

ಸಾರಾಂಶ

ನಟ ದರ್ಶನ್ ಸಹೋದರ ದಿನಕರ್‌ ತಮ್ಮ ಮುಂದಿನ ಚಿತ್ರಕ್ಕೆ ದರ್ಶನ್‌ ಅವರನ್ನೇ ನಾಯಕನಾಗಿ ಆಯ್ಕೆ ಮಾಡಿದ್ದಾರೆ, ರಮ್ಯಾರನ್ನು ಮತ್ತೆ ಕರೆ ತರಲಿದ್ದಾರೆ ಎಂಬೆಲ್ಲಾ ಗಾಳಿ ಸುದ್ದಿಗಳು ಹರಿದಾಡುತ್ತಿದ್ದವು. ಇವೆಕ್ಕೆಲ್ಲಾ ಸ್ವತಃ ದಿನಕರ್ ಖಾಸಗಿ ವೆಬ್‌ಸೈಟ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. 

ಕನ್ನಡ ಚಿತ್ರರಂಗಕ್ಕೆ ತೂಗುದೀಪ ಕುಟುಂಬದ ಇಬ್ಬರು ಕುಡಿಗಳ ಅಪಾರ ಕೊಡುಗೆಗಳಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರೆ, ಇತ್ತ ದಿನಕರ್ ತಮ್ಮ ಮುಂದಿನ ಚಿತ್ರ ಕತೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. 

ಶಹಬ್ಬಾಸ್..! ಸರ್ಕಾರಿ ಶಾಲೆ ದತ್ತು ಪಡೆದ ಡಿ ಬಾಸ್ ಫ್ಯಾನ್ಸ್ 

ದರ್ಶನ್ ಹಾಗೂ ದಿನಕರ್ ಕಾಂಬಿನೇಷನ್‌ ಅನ್ನು ಮತ್ತೆ ತೆರೆ ಮೇಲೆ ನೋಡಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಈ ನಡುವೆ ಆ ನಟಿ ಮಿಂಚಲಿದ್ದಾರೆ, ಈ ನಟರು ಜೊತೆಯಾಗಲಿದ್ದಾರೆ ಎಂಬೆಲ್ಲಾ ಗಾಳಿ ಮಾತುಗಳು ಕೇಳಿ ಬರುತ್ತಿದ್ದವು. ಮೊದಲ ಬಾರಿ ಸ್ವತಃ ದಿನಕರ್ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

'ತಯಾರಿ ಮಾಡುತ್ತಿರುವ ಹೊಸ ಸ್ಕ್ರಿಪ್ಟ್‌ಗೆ ಕಲಾವಿದರ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಕೆಲವೊಂದು ಮೀಡಿಯಾ ವೆಬ್‌ಸೈಟ್‌ಗಳು ಹಾಗೂ ಚಾನೆಲ್‌ಗಳು ಇದನ್ನು ತಿಳಿದುಕೊಳ್ಳದೇ ಇಷ್ಟ ಬಂದವರ ಹೆಸರು ಬಳಸುತ್ತಿವೆ. ಇದರಿಂದ ಅವರಿಗೆ ಶೋಭೆ ತರುವುದಿಲ್ಲ. ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಮುಗಿದ ಮೇಲೆ ನಾನೇ ಅಧಿಕೃತವಾಗಿ ಮಾಹಿತಿ ನೀಡುತ್ತೇನೆ,' ಎಂದು ದಿನಾಕರ್ ಹೇಳಿದ್ದಾರೆ.

ಬೈಕ್ ರೈಡ್‌ಗೆ ತೆರಳಿದ ದರ್ಶನ್; ವೃದ್ಧ ದಂಪತಿ ಮನೆಯಲ್ಲಿ ವಿಶ್ರಾಂತಿ!

ಸಾರಥಿ ಹಾಗೂ ನವಗ್ರಹ ಚಿತ್ರದಲ್ಲಿ ಅಣ್ಣ-ತಮ್ಮನ ಕಾಂಬಿನೇಷನ್ ನೋಡಿದ ಪ್ರೇಕ್ಷಕರು ಮತ್ತೊಂದು ಸಿನಿಮಾವನ್ನು ಒಟ್ಟಾಗಿ ಮಾಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?