
ಕನ್ನಡ ಚಿತ್ರರಂಗಕ್ಕೆ ಅದ್ಭುತ ಸಿನಿಮಾಗಳನ್ನು ಕೊಡುಗೆಯಾಗಿ ನೀಡಿದ ಡಾ.ಪಾರ್ವತಮ್ಮ ರಾಜ್‌ಕುಮಾರ್ ಅವರ ವಜ್ರೇಶ್ವರಿ ಕಂಬೈನ್ಸ್‌ನ ಅಡಿಯಲ್ಲಿ ಮೂಡಿ ಬಂದ ಸಿನಿಮಾ ಜಾಕಿ ಹಾಗೂ ಹುಡುಗರು 100 ದಿನಗಳಲ್ಲಿ ಪೂರೈಸಿದ ಪ್ರಯುಕ್ತ ಪ್ರತಿಯೊಬ್ಬ ಕಲಾವಿದನಿಗೂ ಬೆಳ್ಳಿ ಲೋಟ ನೀಡಲಾಗಿತ್ತು. ಫೋಟೋ ಶೇರ್ ಮಾಡುವ ಮೂಲಕ ಡಾರ್ಲಿಂಗ್ ಕೃಷ್ಣ ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ದುಬಾರಿ ಹೋಟೆಲ್‌ನಲ್ಲಿ ಮಿಲನಾ-ಕೃಷ್ಣ ಬ್ಯಾಚ್ಯುಲರ್ ಪಾರ್ಟಿ; ಹೇಗಿತ್ತು ನೋಡಿ!
ಕೃಷ್ಣ ಪೋಸ್ಟ್:
2010ರಲ್ಲಿ ಬಿಡುಗಡೆಯಾದ 'ಜಾಕಿ' ಚಿತ್ರಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಡಾರ್ಲಿಂಗ್ ಕೃಷ್ಣ ಸಿಐಡಿ ಆಫೀಸರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆನಂತರ 2011ರಲ್ಲಿ 'ಹುಡುಗರು' ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 2013ರಲ್ಲಿ 'ಮದರಂಗಿ' ಚಿತ್ರದಲ್ಲಿ ಮೂಲಕ ಪ್ರಮುಖ ಪಾತ್ರಧಾರಿಯಾಗಿ ಚಿತ್ರರಂಗಕ್ಕೆ ಪರಿಚಯವಾದರು. ವಜ್ರೇಶ್ವರಿ ಕಂಬೈನ್ಸ್ ಸಿನಿಮಾ ಮೂಲಕ ಬಣ್ಣ ಹಚ್ಚಿದ ಕೃಷ್ಣ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ ಕಾರಣ ಎರಡು ಬೆಳ್ಳಿ ಲೋಟ ಪಡೆದುಕೊಂಡಿದ್ದಾರೆ.
'100 ದಿನಗಳ ಬೆಳ್ಳಿ ಲೋಟ. ವಜ್ರೇಶ್ವರಿ ಬ್ಯಾನರ್‌ನಲ್ಲಿ ಬಂದ ಜಾಕಿ ಹಾಗೂ ಹುಡುಗರು ಚಿತ್ರಕ್ಕೆ. ಸವಿ ನೆನಪುಗಳು' ಎಂದು ಕೃಷ್ಣ ಬರೆದುಕೊಂಡಿದ್ದಾರೆ.
ವಜ್ರೇಶ್ವರಿ ಕಂಬೈನ್ಸ್:
ಹಲವಾರು ಲೇಖಕರಿಗೆ ಆಶ್ರಯವಾಗಿ, ಪ್ರತಿಭಾನ್ವಿತ ಕಲಾವಿದರಿಗೆ ಬೆನ್ನೆಲುಬಾಗಿ ನಿಂತ ಡಾ. ಪಾರ್ವತಮ್ಮ ರಾಜ್‌ಕುಮಾರ್ ಅವರ ವಜ್ರೇಶ್ವರಿ ಕಂಬೈನ್ಸ್ ಈಗಲೂ ಸಿನಿಮಾ ನಿರ್ಮಾಣ ಮಾಡುವ ಸಂಸ್ಥೆಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. 'ತ್ರಿಮೂರ್ತಿ','ಸನಾದಿ ಅಪ್ಪಣ್ಣ','ಶಂಕರ್ ಗುರು','ತಾಯಿಗೆ ತಕ್ಕ ಮಗ' ಸೇರಿದಂತೆ ಬ್ಯಾನರ್‌ನಲ್ಲಿ ಮೂಡಿ ಬಂದ ಎಲ್ಲಾ ಚಿತ್ರಗಳು ಸೂಪರ್ ಹಿಟ್. ವಜ್ರೇಶ್ವರಿ ಕಂಬೈನ್ಸ್‌ನನ್ನು ಈಗ ರಾಘವೇಂದ್ರ ರಾಜ್‌ಕುಮಾರ್ ನಡೆಸಿಕೊಂಡು ಬರುತ್ತಿದ್ದಾರೆ. ಈ ಬ್ಯಾನರ್‌ನ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬೇಕೆಂಬುದು ಪ್ರತಿಯೊಬ್ಬ ಕಲಾವಿದನ ಕನಸು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.