ಕೌಸಲ್ಯಾ ಸುಪ್ರಜಾ ರಾಮ ಚಿತ್ರವನ್ನು ನೋಡಿ ತಮ್ಮನ್ನು ಹಾರೈಸುವಂತೆ ನಟ ಡಾರ್ಲಿಂಗ್ ಕೃಷ್ಣ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
ನಟರಾದ ಡಾರ್ಲಿಂಗ್ ಕೃಷ್ಣಾ ಮತ್ತು ಮಿಲನಾ ನಾಗರಾಜ್ ದಂಪತಿ ಜನರ ಮನಸ್ಸು ಅದರಲ್ಲಿಯೂ ಮುಖ್ಯವಾಗಿ ತರುಣ, ತರುಣಿಯರ ಮನಸ್ಸು ಗೆದ್ದಿದ್ದು ಲವ್ ಮಾಕ್‌ಟೇಲ್ ಸಿನಿಮಾದ ಮೂಲಕ. ಈ ಜನಪ್ರಿಯ ಜೋಡಿಯನ್ನು ಜನ ಮೆಚ್ಚಿಕೊಂಡದ್ದು ಅಷ್ಟಿಷ್ಟಲ್ಲ. ಅದರಲ್ಲಿಯೂ ಯುವಕರ ಮನಸ್ಸನ್ನು ಈ ಜೋಡಿ ಕದ್ದುಬಿಟ್ಟಿದೆ. ಇದಕ್ಕೆ ಕಾರಣ, ಲವ್ ಮಾಕ್‌ಟೇಲ್ ಚಿತ್ರದಲ್ಲಿ ಕೃಷ್ಣ ಲವ್ ಬ್ರೇಕಪ್ ಆಗಿ, ಕೊರಗಿ ಒದ್ದಾಡುವ ತರುಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಅವನನ್ನು ಅಪಾರವಾಗಿ ಪ್ರೀತಿಸುವ ನಿಧಿಮಾ ಎಂಬ ಹುಡುಗಿಯ ಪಾತ್ರದಲ್ಲಿ ಮಿಲನಾ ಕಾಣಿಸಿದ್ದರು. ಆ ಸಿನಿಮಾದಲ್ಲಿ ಆ ಜೋಡಿಯ ಅಪಾರ ಪ್ರೀತಿಯನ್ನು ನೋಡಿ ಸಿನಿಮಾ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಲವ್ (Love) ಆಗಿತ್ತು. ಅದೇ ಪ್ರೀತಿಯನ್ನೂ ಈಗಲೂ ತೋರಿಸುತ್ತಿದ್ದಾರೆ. ಈ ಜೋಡಿ ಯಾವಾಗಲೂ ಕಿತ್ತಾಡಿಕೊಂಡು, ಪ್ರೀತಿ ತೋರಿಸಿಕೊಂಡು ಆದರ್ಶ ದಂಪತಿ ಥರ ಸೋಷಿಯಲ್ ಮೀಡಿಯಾದಲ್ಲಿ (Social Media) ಕಾಣಿಸಿಕೊಳ್ಳುತ್ತಿರುತ್ತಾರೆ. ಇದು ಕೂಡ ಇವರ ಫ್ಯಾನ್ಸ್ ಮನಸ್ಸನ್ನು ಗೆಲ್ಲುತ್ತಿದೆ. ಇದೇ ಕಾರಣಕ್ಕೆ ಈ ಜೋಡಿ ಏನು ಫೋಟೋ, ವಿಡಿಯೋ, ರೀಲ್ಸ್ ಶೇರ್ ಮಾಡಿದ್ರೂ ಅದಕ್ಕೆ ಕೋಟಿ ಕೋಟಿಗಟ್ಟಲೆ ವ್ಯೂಸ್ ಬರೋದು ಉಂಟು.
ಈ ಜೋಡಿ ಈಗ ಕೌಸಲ್ಯಾ ಸುಪ್ರಜಾ ರಾಮ (Kousalya Supraja Rama) ಸಿನಿಮಾದಲ್ಲಿ ಮೋಡಿ ಮಾಡುತ್ತಿದೆ. ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣಾ (Darling Krishna) ಮತ್ತು ಮಿಲನಾ ನಾಗರಾಜ್ ಹೆಸರು ರಾಮ್ ಮತ್ತು ಮುತ್ತುಲಕ್ಷ್ಮಿ. ಈ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಡಾರ್ಲಿಂಗ್ ಕೃಷ್ಣಾ ಅವರು, ನಿಮ್ಮ ಆದಿ ಮತ್ತು ನಿಧಿಮಾ ಈಗ ರಾಮ್ ಮತ್ತು ಮುತ್ತುಲಕ್ಷ್ಮಿಯಾಗಿ ನಿಮ್ಮೆದುರು ಕಾಣಿಸಿಕೊಳ್ಳುತ್ತಿದ್ದಾರೆ. ನೀವೆಲ್ಲರೂ ಇದನ್ನು ಇಷ್ಟಪಡುತ್ತೀರಿ ಮತ್ತು ನಾವು ನಿಮ್ಮ ಹೃದಯವನ್ನು ಮತ್ತೊಮ್ಮೆ ಮುಟ್ಟುತ್ತೇವೆ ಎಂದು ನನಗೆ ಖಾತ್ರಿಯಿದೆ ಎಂದಿದ್ದಾರೆ. ಇದಕ್ಕೆ ಅವರ ಫ್ಯಾನ್ಸ್ ಖಂಡಿತ ಎಂದು ಕಮೆಂಟ್ ಮಾಡುತ್ತಿದ್ದು, ಈ ಕ್ಯೂಟ್ ಜೋಡಿಯನ್ನು ಹಾಡಿ ಹೊಗಳುತ್ತಿದ್ದಾರೆ. ಈ ಚಿತ್ರ ತುಂಬಾ ಚೆನ್ನಾಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. '2 ನೇ ಭಾಗ ಮಾತ್ರ ಚೆನ್ನಾಗಿದೆ. ಮೊದಲ ಭಾಗದಲ್ಲಿ ಕಾಮಿಡಿ ಸಿಗಲಿಲ್ಲ. ನಮಗೆ ಅದೇ ನಿರಾಶೆ. ಆದರೆ ಚಿತ್ರದಲ್ಲಿ ಕಥೆ ಹೇಳಿದರೂ ಅದು ನಮಗೆ ತಲುಪುವಲ್ಲಿ ವಿಫಲತೆ ಕಂಡಿದೆ. ಆದರೂ ಒಂದು ಉತ್ತಮ ಸಂದೇಶದ ಚಲನಚಿತ್ರ' ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.
ಡಾರ್ಲಿಂಗ್ ಕೃಷ್ಣಗೆ ಧೈರ್ಯ ಇದ್ದರೆ ಮನೇಲಿ ಹೆಂಡ್ತಿ ಕಾಲೆಳೆದು ಕೂರಿಸಲಿ: ಸುದೀಪ್
ಕೌಸಲ್ಯಾ ಸುಪ್ರಜಾ ರಾಮ ಎಂದರೆ, ಕೌಸಲ್ಯೆಯ ಪುತ್ರ ಸುಪ್ರಜೆ ರಾಮ ಎಂದು. ಕೌಟುಂಬಿಕ ಕಥಾಹಂದರದ ಚಿತ್ರಗಳ ಮೂಲಕ ಗಮನ ಸೆಳೆದವರು ನಿರ್ದೇಶಕ ಶಶಾಂಕ್. ಈ ಚಿತ್ರದಲ್ಲೂ ಹೆಣ್ಣಿಗೆ ದೇವತೆ ಸ್ಥಾನ ಕೊಟ್ಟು, ಕಟ್ಟುಪಾಡುಗಳಲ್ಲಿ ಕಟ್ಟಿಹಾಕುವ ಪುರುಷ ಪ್ರಧಾನ ಸಮಾಜದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಇನ್ನು, ಇವರಿಬ್ಬರ ಮದುವೆಯ (Milana Nagaraj marriage) ವಿಚಾರವಾಗಿ ಹೇಳುವುದಾದರೆ ಈ ಜೋಡಿ 2021ರ ಫೆಬ್ರುವರಿ 14ರ ಪ್ರೇಮಿಗಳ ದಿನದಂದು ಮದುವೆಯಾಗಿದೆ.
‘ಲವ್ ಮಾಕ್ಟೇಲ್’ ಮತ್ತು ‘ಲವ್ ಮಾಕ್ಟೇಲ್ 2' ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡು ಮೆಚ್ಚುಗೆಗೆ ಪಾತ್ರವಾಗಿದ್ದ ಇಬ್ಬರು ಮತ್ತೆ ಪಿಸಿ ಶೇಖರ್ ಅವರ ಮುಂಬರುವ ರೋಮ್ಯಾಂಟಿಕ್ ಡ್ರಾಮಾ 'ಲವ್ ಬರ್ಡ್ಸ್' ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಇಬ್ಬರೂ ಸಿನಿಮಾರಂಗದಲ್ಲಿ ಸಕ್ಸಸ್ ಫುಲ್ ಸ್ಟಾರ್. ಅನೇಕ ವರ್ಷಗಳಿಂದ ಇಬ್ಬರೂ ಸಿನಿಮಾರಂಗದಲ್ಲಿದ್ದಾರೆ. ಆದರೆ ಲವ್ ಮಾಕ್‌ಟೇಲ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ತಂದುಕೊಟ್ಟಿತು. ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ ನಟಿಸಿದ್ದ ಲವ್ ಮಾಕ್‌ಟೇಲ್ ಸಿನಿಮಾಗೆ ದೊಡ್ಡ ಮಟ್ಟದ ಯಶಸ್ಸು ತಂದು ಕೊಟ್ಟಿತ್ತು.
ಥಾಯ್‌ಲ್ಯಾಂಡಿನ 74ನೇ ಮಹಡಿ ಮೇಲೆ ಕೃಷ್ಣ, ಮಿಲನಾ: ಈ ರೀಲ್ಸ್ 10 ಕೋಟಿ ಜನ ನೋಡಿದ್ದೇಕೆ?