ಡಾಲಿ ಧನಂಜಯ್​ ಭಾವಿ ಪತ್ನಿಯ ಹೆರಿಗೆ ಸ್ಟೋರಿ ಸಕತ್​ ಇಂಟರೆಸ್ಟಿಂಗ್​: ಅವ್ರ ಮಾತಲ್ಲೇ ಕೇಳಿ...

Published : Feb 06, 2025, 12:53 PM ISTUpdated : Feb 06, 2025, 01:06 PM IST
ಡಾಲಿ ಧನಂಜಯ್​ ಭಾವಿ ಪತ್ನಿಯ ಹೆರಿಗೆ ಸ್ಟೋರಿ ಸಕತ್​ ಇಂಟರೆಸ್ಟಿಂಗ್​: ಅವ್ರ ಮಾತಲ್ಲೇ ಕೇಳಿ...

ಸಾರಾಂಶ

ನಟ ಡಾಲಿ ಧನಂಜಯ್‌ ವೈದ್ಯೆ ಧನ್ಯತಾ ಜೊತೆ ವಿವಾಹವಾಗುತ್ತಿದ್ದಾರೆ. ಧನ್ಯತಾ ಸಮಾಜಸೇವೆ, ಡಾಲಿಯ ಬ್ಯುಸಿ ವೇಳಾಪಟ್ಟಿಯನ್ನು ಅರ್ಥಮಾಡಿಕೊಳ್ಳುವಿಕೆ, ಸರಳತೆ ಡಾಲಿಗೆ ಇಷ್ಟವಾಗಿದೆ. ಧನ್ಯತಾ ೫೦೦ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದಾರೆ. ಮೈಸೂರಿನಲ್ಲಿ ಅಭಿಮಾನಿಗಳಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ದರ್ಶನ್‌ರನ್ನು ಸಂಪರ್ಕಿಸಲು ಸಾಧ್ಯವಾಗದ ಕಾರಣ ಮದುವೆಗೆ ಆಹ್ವಾನ ನೀಡಲು ಸಾಧ್ಯವಾಗಿಲ್ಲ ಎಂದು ಡಾಲಿ ತಿಳಿಸಿದ್ದಾರೆ.

ಸ್ಯಾಂಡಲ್​ವುಡ್​ ನಟ ಡಾಲಿ ಧನಂಜಯ್​ ಅವರು ವೈದ್ಯೆಯಾಗಿರುವ ಧನ್ಯತಾ ಅವರೊಂದಿಗೆ ಇದೇ 16ರಂದು ಹಸೆಮಣೆ ಏರಲಿದ್ದಾರೆ.  ತಮ್ಮ ಮದುವೆಯ ಬಗ್ಗೆ ಹಾಗೂ ಭಾವಿ ಪತ್ನಿ ಧನ್ಯತಾ ಅವರನ್ನು ಪರಿಚಯಿಸುವ ಸಲುವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಡಾಲಿ ಮತ್ತು ಧನ್ಯತಾ ಅವರು ಹಲವಾರು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಇದೇ ವೇಳೆ ಧನ್ಯತಾ ಅವರು ತಮಗೆ ಯಾಕೆ ಇಷ್ಟ ಆದರು ಎನ್ನುವ ಬಗ್ಗೆಯೂ ಡಾಲಿ ಹೇಳಿಕೊಂಡಿದ್ದರೆ, ಎಲ್ಲರ ಗಮನ ಸೆಳೆದದ್ದು ಇಷ್ಟು ಚಿಕ್ಕ ವಯಸ್ಸಿನಲ್ಲಿ, ಧನ್ಯತಾ ಅವರು ಮಾಡಿರುವ ಹೆರಿಗೆಗಳ ಸಂಖ್ಯೆಯನ್ನು ಕೇಳಿ!

ಧನ್ಯತಾ ಅವರು ವೈದ್ಯೆಯಾಗಿರುವ ಕಾರಣ, ಸದಾ ಎಲ್ಲಾ ಕಡೆಗಳಲ್ಲಿಯೂ ಕ್ಯಾಂಪ್​ ಮಾಡುತ್ತಿರುತ್ತಾರೆ. ಸದಾ  ಸಮಾಜ ಸೇವೆಯಲ್ಲಿ ನಿರತರಾಗಿರುತ್ತಾರೆ. ಅವರ ಈ ಗುಣ ನನಗೆ ತುಂಬಾ ಇಷ್ಟವಾಯ್ತು. ಅವರು ಯಾವಾಗಲೂ ಬ್ಯುಸಿ ಇರುವುದರಿಂದ ನಾನು ಸಿನಿಮಾ ಸಮಯದಲ್ಲಿ ಬಿಜಿ ಇರುವುದನ್ನು ಸುಲಭದಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ.  ಹೊಂದಿಕೊಂಡು ಹೋಗಲು ಇಷ್ಟು ಸಾಕು ಎಂದಿರೋ ಧನಂಜಯ್​, ನನ್ನ ಹಾಗೆ ಧನ್ಯತಾ ಕೂಡ  ಸಾಮಾನ್ಯ ಕುಟುಂಬದಿಂದ ಬಂದವರೇ. ಅದನ್ನು ಆಗಾಗ್ಗೆ ಆಕೆ ಎಚ್ಚರಿಸುತ್ತಾ ಇರುತ್ತಾರೆ. ಕೆಲವೊಮ್ಮೆ ಜನರು ಜೈಜೈಕಾರ ಹಾಕಿದಾಗ ಉಬ್ಬಿ ಹೋದ ಸಂದರ್ಭಗಳಲ್ಲಿ ನಮ್ಮ ಮೂಲವನ್ನು ಆಕೆ ಹೇಳುತ್ತಿರುತ್ತಾರೆ. ಅದು ತುಂಬಾ ಇಷ್ಟವಾಯಿತು ಎಂದಿದ್ದಾರೆ.

ಮದುಮಗ ಡಾಲಿ ಧನಂಜಯ್​ ದರ್ಶನ್​ರನ್ನು ಮದ್ವೆಗೆ ಯಾಕೆ ಕರೆದಿಲ್ಲ? ಕಾರಣ ಅವರ ಬಾಯಲ್ಲೇ ಕೇಳಿ...
 
ಇದೇ ವೇಳೆ, ಧನ್ಯತಾ ಅವರು ತಾವು ಮಾಡಿಸಿರುವ ಹೆರಿಗೆಯ ಬಗ್ಗೆ ಮಾತನಾಡಿದ್ದಾರೆ. ಕಾಲೇಜಿನಲ್ಲಿ ಇರುವಾಗಲೇ ಹೆರಿಗೆ ಟ್ರೇನಿಂಗ್​ ಶುರುವಾಗುತ್ತದೆ. ಸಾಮಾನ್ಯವಾಗಿ ಯಾವ ವೈದ್ಯರೂ ಹೆರಿಗೆಯ ಬಗ್ಗೆ ಲೆಕ್ಕಾಚಾರವೆಲ್ಲಾ ಇಟ್ಟುಕೊಂಡಿರುವುದಿಲ್ಲ. ಅಂದಾಜು ಹೇಳುವುದಾದರೆ 500 ಕ್ಕೂ ಅಧಿಕ ಹೆರಿಗೆ ಮಾಡಿಸಿದ್ದೇನೆ ಎಂದಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಹೆರಿಗೆ  ಮಾಡಿಸಿರುವ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೇ   ಡಾಲಿ ಅವರು ತಮಗೆ ಇಷ್ಟವಾಗಿದ್ದು ಯಾಕೆ ಎನ್ನುವ ಬಗ್ಗೆಯೂ ಧನ್ಯತಾ ಮಾತನಾಡಿದ್ದಾರೆ. ಡಾಲಿ ಧನಂಜಯ್ ಅವರ ಸರಳತೆಯನ್ನು ಮೆಚ್ಚಿಕೊಂಡೆ ಎಂದಿದ್ದಾರೆ.  ನಮ್ಮಿಬ್ಬರ ಪೋಷಕರು ವೃತ್ತಿಯಲ್ಲಿ ಶಿಕ್ಷಕರು. ಅವರು ಪರಿಚಯದ ಬಳಿಕ ನಾವಿಬ್ಬರೂ ಪರಿಚಯವಾದೆವು. ನಂತರ ಸ್ನೇಹಿತರಾಗಿದ್ದೆವು. ಈಗ ದಾಂಪತ್ಯಕ್ಕೆ ಕಾಲಿಡುತ್ತಿದ್ದೇವೆ ಎಂದಿದ್ದಾರೆ.
 
ಇದೇ ಪತ್ರಿಕಾಗೋಷ್ಠಿಯಲ್ಲಿ ಡಾಲಿ ಅವರು, ಮದುವೆಗೆ ಬರುವ ಫ್ಯಾನ್ಸ್​ಗೆ ಮಾಡಿರುವ  ವಿಶೇಷ ವ್ಯವಸ್ಥೆ ಬಗ್ಗೆ ಮಾತನಾಡಿದ್ದಾರೆ.  ಮೈಸೂರು ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಮದುವೆ ನಡೆಯಲಿದ್ದು, ಅಲ್ಲಿ  ವಿದ್ಯಾಪತಿ ದ್ವಾರದಿಂದ ಫ್ಯಾನ್ಸ್​ಗೆ ಬರಲು ಅವಕಾಶ ಕಲ್ಪಿಸಲಾಗಿದೆ.  ಎಲ್ಲರನ್ನೂ ವೇದಿಕೆಗೆ ಕರೆಸುವುದು ಕಷ್ಟ, ಆದ್ದರಿಂದ  ವಿದ್ಯಾಪತಿ ದ್ವಾರದ ಸಾಲಿನಲ್ಲಿ ಬಂದರೆ ಸಾಕು ಕುಳಿತು ಹತ್ತಿರದಿಂದ ಮದುವೆ ಸಂಭ್ರಮವನ್ನು ನೋಡಬಹುದು. ಬಳಿಕ ಊಟ ಮಾಡಿಕೊಂಡು ಹೋಗುವಂತೆ ಹೇಳಿದ್ದಾರೆ. ಇದೇ ವೇಳೆ, ದರ್ಶನ್​ ಅವರನ್ನು ಮದುವೆಗೆ ಆಹ್ವಾನಿಸದೇ ಇರುವ ಬಗ್ಗೆಯೂ ಡಾಲಿ ಉತ್ತರಿಸಿದ್ದಾರೆ.  ಕಳೆದೆರಡು ತಿಂಗಳಿನಿಂದ ಆಮಂತ್ರಣ ಪತ್ರಿಕೆ ಹಂಚುತ್ತಿದ್ದೇನೆ. ವಿವಿಧ ಕ್ಷೇತ್ರದವರನ್ನು ಆಹ್ವಾನಿಸುತ್ತಿದ್ದೇನೆ. ಹೀಗೆ ಇರುವಾಗ ದರ್ಶನ್​ ಅವರನ್ನು ಕರೆಯದೇ ಇರುತ್ತೇನೆಯೆ ಎಂದು ಪ್ರಶ್ನಿಸಿದ್ದಾರೆ. ಅವರನ್ನೂ ಕರೆಯುವ ಪ್ರಯತ್ನ ಮಾಡಿದ್ದೆ. ಆದರೆ  ಅವರನ್ನು ರೀಚ್ ಮಾಡುವುದಕ್ಕೆ ಸಾಧ್ಯವಾಗ್ತಿಲ್ಲ. ಆದ್ದರಿಂದ ಇಲ್ಲಿಂದಲೇ ದರ್ಶನ್​ ಅವರು  ತುಂಬಾ ಆತ್ಮೀಯತೆಯಿಂದ ನನ್ನ ಮದುವೆಗೆ ಆಹ್ವಾನಿಸುತ್ತಿದ್ದೇನೆ ಎಂದಿದ್ದಾರೆ. 

ಡಾಲಿ ಧನಂಜಯ್‌ 'ಲವ್ ಮ್ಯಾಟರ್' ಕಥೆ ಹೇಗೇಗೆಲ್ಲಾ ಆಯ್ತು? ಗುಟ್ಟು ಈಗಷ್ಟೇ ರಟ್ಟಾಯ್ತು!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ