
ಬೆಂಗಳೂರು (ಜ.30) ನಟ ಡಾಲಿ ಧನಂಜಯ್ ಮಾಂಸಾಹಾರ ಸೇವನೆ ಮಾಡಿರುವ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಪರ ವಿರೋಧ ಚರ್ಚೆಗೆ ಕಾರಣವಾಗಿತ್ತು. ಡಾಲಿ ಧನಂಜಯ್ ಸಮುದಾಯ ಉಲ್ಲೇಖಿಸಿ ಮಾಂಸಾಹಾರ ಸೇವನೆಯನ್ನು ಹಲವರು ಪ್ರಶ್ನಿಸಿದ್ದರು. ಧನಂಜಯ್ ಬಿರಿಯಾನಿ ಸೇವನೆ ಚರ್ಚೆ ಚೊತೆಗೆ ವಿವಾದಕ್ಕೂ ಕಾರಣವಾಗಿದೆ. ಇದೀಗ ಸ್ವತಃ ಡಾಲಿ ಧನಂಜಯ್ ತಮ್ಮ ನಾನ್ ವೆಜ್ ಬಿರಿಯಾನಿ ಕುರಿತು ಸುದ್ದಿಗೋಷ್ಠಿ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಈ ರೀತಿಯ ವಿಷಗಳು ಆಯ್ಕೆಯಾಗುತ್ತೆ, ಅದು ಇಷ್ಟೊಂದು ವಿವಾದಕ್ಕೆ ಕಾರಣವಾಗುತ್ತೆ ಅನ್ನೋದು ಗೊತ್ತಿರಲಿಲ್ಲ. ನಾನ್ ವೆಬ್ ಬಿರಿಯಾನಿ ತಿಂದಿರುವ ವಿಚಾರದಲ್ಲಿ ಸಮುದಾಯ, ಜಾತಿ, ಇತರ ಕಲಾವಿದರನ್ನು ಎಳೆದು ತಂದಿದ್ದು ಬೇಜಾರಾಗಿದೆ ಎಂದು ಡಾಲಿ ಧನಂಜಯ್ ಹೇಳಿದ್ದಾರೆ.
ಮಾಂಸಾಹಾರ ಸೇವನೆ ವಿವಾದದ ಕುರಿತು ಮಾತನಾಡಿದ ಡಾಲಿ ಧನಂಜಯ್, ನಾನು ನನ್ನ ಆಹಾರ, ಈ ಆಹಾರ ಪದ್ಧತಿ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ. ನಾನು ಇನಸೆಂಟ್ ಆಗಿ ಗೆಳೆಯನ ಹೊಟೆಲ್‌ಗೆ ತೆರಳಿದ್ದೆ. ಅಲ್ಲಿ ಪ್ರೀತಿಯಿಂದ ಬಿರಿಯಾನಿ ತಿಂದು ಬಂದಿದ್ದೇನೆ. 10 ರಿಂದ 15 ಬಿರಿಯಾನಿ ಶಾಪ್ ಓಪನ್ ಮಾಡಿದ್ದೇನೆ. ಆದರೆ ನಾನು ಬಿರಿಯಾನಿ ತಿಂದಿರುವ ವಿಚಾರ ಚರ್ಚೆ, ವಿವಾದವಾಗಿರುವುದು ನೋಡಿ ಆಘಾತವಾಯಿತು ಎಂದು ಧನಂಜಯ್ ಹೇಳಿದ್ದಾರೆ.
ಡಾಲಿ ಧನಂಜಯ ನಾನ್ ವೆಜ್ ತಿನ್ನುತ್ತಾನೆ ಎಂದರೆ ಒಕೆ, ಆದರೆ ಇದರ ನಡುವೆ ಸಮುದಾಯ ಎಳೆದು ತಂದಿದ್ದಾರೆ, ಜಾತಿ ಎಳೆದು ತಂದಿದ್ದಾರೆ. ಬೇರೆ ಕಲಾವಿದರ ಹೆಸರು ತಂದಿದ್ದಾರೆ. ಇದೆಲ್ಲಾ ಬೇಜಾರು ಆಯಿತು ಎಂದು ಧನಂಜಯ್ ಹೇಳಿದ್ದಾರೆ. ನನ್ನ ಆಹಾರ ನನ್ನ ಆಯ್ಕೆ. ನಾನು ಆಗಾಗಾ ಪಾರ್ಟಿ ಮಾಡುತ್ತೇನೆ. ಧೂಮಪಾನ ಮಾಡುತ್ತಿದ್ದೆ. ಈಗ ನಿಲ್ಲಿಸಿದ್ದೇನೆ ಎಂದಿದ್ದಾರೆ.
ಸಮುದ್ರ ಆಹಾರಗಳು ನನಗೆ ಇಷ್ಟ. ಆದರೆ ಇದೇ ಆಹಾರ ಪದ್ಧತಿಗೆ ಬೇರೆ ಬೇರೆ ಆ್ಯಂಗಲ್ ಕೊಟ್ಟಿದ್ದು ನಿಜಕ್ಕೂ ಬೇಜಾರಾಗಿದೆ. ಎಲ್ಲಿ ಮಾಂಸ ತಿಂದಿದ್ದೇನೆ ಅನ್ನೋದು ಹೇಳಲು ಹೋಗುವುದಿಲ್ಲ. ನಾನು ಲಿಂಗ ಹಾಕಿ ಊಟ ಮಾಡುವುದಿಲ್ಲ. ಚರ್ಚೆ ಶುರು ಮಾಡಿದವರಿಗೆ ನಾನು ಉತ್ತರ ಕೊಟ್ಟಂತೆ ಆಗುತ್ತೆ. ಅದು ನನಗೆ ಇಷ್ಟವಿಲ್ಲ ಎಂದು ಡಾಲಿ ಧನಂಜಯ್ ಹೇಳಿದ್ದಾರೆ.
ನಾನು ಏನೇ ಮಾಡಿದರೂ ಬಹಳ ಪ್ರಶ್ನೆಗಳು ಬರುತ್ತೆ ಅದು ನನಗೆ ಬಹಳ ಖುಷಿ ಇದೆ. ನಾನೊಬ್ಬ ನಟನಾಗಿ ಬಂದು ಪ್ರೊಡಕ್ಷನ್ ಶುರು ಮಾಡಿದ್ದೀನಿ. ಇಂಡಸ್ಟ್ರಿಗೆ ಬಹಳ ಸಿನಿಮಾ ಕೊಟ್ಟಿದ್ದೇನೆ. ನೂರಾರು ಕೋಟಿ ವ್ಯಾಪಾರ ಮಾಡಿರೋ ಪ್ರೊಡ್ಯೂಸರ್ ಅಲ್ಲ . ನಾನು ಸಿನಿಮಾಕ್ಕಾಗಿ ಒದ್ದಾಡುತ್ತೇನೆ. ನಿರಂತರ ಶ್ರಮವಹಿಸುತ್ತೇನೆ. ಉತ್ತಮ ಸಿನಿಮಾ ಕೊಡಲು ಎಲ್ಲಾ ಪ್ರಯತ್ನ ಮಾಡುತ್ತೇನೆ. ಆದರೆ ಅದರ ಬಗ್ಗೆ ಚರ್ಚೆಯಾಗುವುದಿಲ್ಲ. ನಾನು ಇಂಡಸ್ಟ್ರಿಗಾಗಿ ಮಾಡೋ ಕೆಲಸದ ಬಗ್ಗೆ ಚರ್ಚೆ ಆಗಬೇಕು ಅನ್ನೋದು ನನ್ನ ಆಸೆ. ಆದರೆ ಅದರ ಬಗ್ಗೆ ಯಾಕೆ ಚರ್ಚೆ ಆಗುತ್ತಿಲ್ಲ ಗೊತ್ತಿಲ್ಲ ಎಂದಿದ್ದಾರೆ.
ಬಡವರ ಮಕ್ಕಳು ಬೆಳೀಬೇಕು ಅನ್ನೋದನ್ನ ಅವರವರ ಅರ್ಥಕ್ಕೆ ಬದಲಾಯಿಸಿ ಮಾತನಾಡಿದ್ದಾರೆ. ಸಂಬಂಧಗಳನ್ನ ಸೆಲೆಬ್ರೇಶನ್ ಮಾಡೋಣ ಅನ್ನೋದನ್ನ ನಾನು ಎಲ್ಲಾ ಕಡೆ ಹೇಳಿದ್ದೀನಿ ಅಷ್ಟೆ . ಎಲ್ಲರೂ ಎಲ್ಲಾ ವಿಚಾರವನ್ನ ಮಾತನಾಡಬಹುದು, ಸಿನಿಮಾ ನಟರು ಅಂದ್ರೆ ಅದನ್ನೇ ಮಾತಾಡಬೇಕು ಅಂತ ಏನಿಲ್ಲ ಅಲ್ವಾ . ನಾನು ಊಟ ಮಾಡಿದ ವಿಚಾರವನ್ನ ಕೂಡ ಮಾತಾಡ್ತಾರೆ ಅಂದ್ರೆ ತಪ್ಪಲ್ವಾ ? ಎಂದು ಡಾಲಿ ಧನಂಜಯ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.