ಕ್ರೇಜಿಸ್ಟಾರ್‌ಗೆ 60ರ ಸಂಭ್ರಮ;ತಂದೆ ಮತ್ತು ಮಕ್ಕಳ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ!

Kannadaprabha News   | Asianet News
Published : May 31, 2021, 09:13 AM ISTUpdated : May 31, 2021, 09:40 AM IST
ಕ್ರೇಜಿಸ್ಟಾರ್‌ಗೆ 60ರ ಸಂಭ್ರಮ;ತಂದೆ ಮತ್ತು ಮಕ್ಕಳ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ!

ಸಾರಾಂಶ

ರವಿಚಂದ್ರನ್ ಹುಟ್ಟುಹಬ್ಬಕ್ಕೆ ಕನ್ನಡಿಗ ಟೀಸರ್ ರಿಲೀಸ್ ಮಾಡಲಾಗಿದೆ. ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡು ತಮ್ಮ ಮಕ್ಕಳ ಜೊತೆ ಮಾಡುತ್ತಿರುವ ಸಿನಿಮಾ ಬಗ್ಗೆ ರಿವೀಲ್ ಮಾಡಿದ್ದಾರೆ.

ನಟ ರವಿಚಂದ್ರನ್ ತಮ್ಮ 60ನೇ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಕುಟುಂಬದವರು ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು. ಕೋವಿಡ್ ಕಾರಣಕ್ಕೆ ಪ್ರತಿ ವರ್ಷ ನಡೆಯುವಂತೆ ಕನಸುಗಾರನ ಹುಟ್ಟುಹಬ್ಬ ಅದ್ದೂರಿಯಾಗಿ ನಡೆಯಲಿಲ್ಲ. ಚಿತ್ರರಂಗದ ಗಣ್ಯರು, ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದರು. ನಿರ್ದೇಶಕ ರಘುರಾಮ್ ರವಿಚಂದ್ರನ್ ಅವರ ಅಪರೂಪದ ಕಪ್ಪು ಬಿಳುಪಿನ ಫೋಟೋಗಳನ್ನು ಬಳಸಿಕೊಂಡು ಮಾಡಿರುವ ವಿಡಿಯೋ ಗಮನ ಸೆಳೆಯಿತು.

ಕ್ರೇಜಿಸ್ಟಾರ್ ರವಿಚಂದ್ರನ್ ಹುಟ್ಟು ಹಬ್ಬಕ್ಕೆ ‘ಕನ್ನಡಿಗ’ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಕನ್ನಡ ಲಿಪಿಕಾರನ ಜೀವನ ಪಯಣವನ್ನು ಸೆರೆ ಹಿಡಿದಿರುವ ಚಿತ್ರವಿದು. ಕನ್ನಡ ಭಾಷೆ ಮತ್ತು ಐತಿಹಾಸಿಕ ಹಿನ್ನೆಲೆಯಲ್ಲಿ ಇಡೀ ಚಿತ್ರವನ್ನು ರೂಪಿಸಿರುವ ನಿರ್ದೇಶಕ ಬಿ ಎಂ ಗಿರಿರಾಜ್, ಚಿತ್ರದಲ್ಲಿ ರವಿಚಂದ್ರನ್ ಅವರನ್ನು ಯಾವ ರೀತಿ ಪ್ರಸೆಂಟ್ ಮಾಡಿದ್ದಾರೆ ಎನ್ನುವ ಕುತೂಹಲ ಸಿನಿಮಾ ಸೆಟ್ಟೇರಿದಾಗಿನಿಂದಲೂ ಇತ್ತು.ಈ ಟೀಸರ್ ಆ ಕುತೂಹಲ ತಣಿಸಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಟೀಸರ್ ನೋಡಬಹುದು. ಎನ್ ಎಸ್ ರಾಜ್‌ಕುಮಾರ್ ನಿರ್ಮಿಸಿರುವ ‘ಕನ್ನಡಿಗ’ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ.

100 ಕಾರ್ಮಿಕರಿಗೆ 5000 ಸಾವಿರ ರೂ. ಧನ ಸಹಾಯ ಮಾಡಿದ ನಟ ಮನೋರಂಜನ್ ರವಿಚಂದ್ರನ್! 

ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಅವರ ಮಕ್ಕಳಾದ ಮನು ರವಿಚಂದ್ರನ್, ವಿಕ್ರಮ್ ರವಿಚಂದ್ರನ್ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ. ಇವರ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರದ ಹೆಸರು ‘ಬ್ಯಾಡ್ ಬಾಯ್‌ಸ್’. ಸ್ವತಃ ರವಿಚಂದ್ರನ್ ಅವರೇ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಬಿಡುಗಡೆ ಮಾಡಿರುವ ವಿಶೇಷ ವೀಡಿಯೋದಲ್ಲಿ ಈ ‘ಬ್ಯಾಡ್ ಬಾಯ್‌ಸ್’ ಚಿತ್ರದ ಜತೆಗೆ ‘ಗಾಡ್’, ‘60’ ಹೆಸರಿನಲ್ಲಿ ಚಿತ್ರಗಳನ್ನು ಘೋಷಣೆ ಮಾಡಿದ್ದಾರೆ. ಈ ಪೈಕಿ ‘ಬ್ಯಾಡ್ ಬಾಯ್‌ಸ್’ನಲ್ಲಿ ಅಪ್ಪ ಮಕ್ಕಳು ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂರೂ ಚಿತ್ರಗಳು 2022ಕ್ಕೆ ಸೆಟ್ಟೇರಲಿವೆ.

ಈ ವರ್ಷ ಅಂದುಕೊಂಡಂತೆ ಆದರೆ ‘ರವಿಬೋಪಣ್ಣ’ ಹಾಗೂ ‘ಕನ್ನಡಿಗ’ ಚಿತ್ರಗಳು ತೆರೆಗೆ ಬರಲಿವೆ. ನಂತರ ‘ದೃಶ್ಯ 2’ ಸರದಿಯಲ್ಲಿದೆ.

ಕ್ರೇಜಿ ಸ್ಟಾರ್ ರವಿಚಂದ್ರನ್‌ಗೆ ಎಸ್‌.ಮಹೇಂದ್ರ ನಿರ್ದೇಶನ! 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿದ್ದುಬಿದ್ದೂ ನಗುವಂತೆ 'ಆಭಾಸ' ಸೃಷ್ಟಿಸಿದ ತೆಲುಗು ಸಿನಿಮಾದಿಂದ ಕನ್ನಡಕ್ಕೆ 'ಡಬ್' ಆಗಿರೋ ಹಾಡು; ಏನ್ ಗುರೂ ಇದೂ..!?
ಕುಟುಂಬವೇ ಹೆಮ್ಮೆಪಡುವಂತೆ ಮಾಡಿದ Kiccha Sudeep ಮಗಳು ಸಾನ್ವಿ! ಇದಪ್ಪಾ..ಸಾಧನೆ ಅಂದ್ರೆ..!