ಈ ಸೀಕ್ರೆಟ್ ಗೊತ್ತಾ ನಿಮ್ಗೆ..? ಡಾ ರಾಜ್‌ಕುಮಾರ್ ಜೊತೆ ಕ್ರೇಜಿ ಸ್ಟಾರ್ ರವಿಚಂದ್ರನ್ ನಟಿಸಿದ್ದಾರೆ...!

By Shriram Bhat  |  First Published Aug 25, 2024, 6:55 PM IST

ಕನ್ನಡದ ವರನಟ ಡಾ ರಾಜ್‌ಕುಮಾರ್ ಅವರೊಂದಿಗೆ ನಟಿಸುವುದು ಎಂದರೆ ಅದೊಂದು ಮಹಾನ್ ಅವಕಾಶ ಎಂದೇ ಎಲ್ಲರೂ ಭಾವಿಸಿರೋದು ಗೊತ್ತಿರೋ ಸಂಗತಿ. ನಟರಾದ ವಿಷ್ಣುವರ್ಧನ್, ಅಂಬರೀಷ್, ಶಂಕರ್‌ ನಾಗ್..


ಕನ್ನಡದ ವರನಟ ಡಾ ರಾಜ್‌ಕುಮಾರ್ (Dr Rajkumar) ಅವರೊಂದಿಗೆ ನಟಿಸುವುದು ಎಂದರೆ ಅದೊಂದು ಮಹಾನ್ ಅವಕಾಶ ಎಂದೇ ಎಲ್ಲರೂ ಭಾವಿಸಿರೋದು ಗೊತ್ತಿರೋ ಸಂಗತಿ. ನಟರಾದ ವಿಷ್ಣುವರ್ಧನ್, ಅಂಬರೀಷ್, ಶಂಕರ್‌ ನಾಗ್, ಅನಂತ್ ನಾಗ್, ಹೀಗೆ ಅಂದು ಡಾ ರಾಜ್‌ಕುಮಾರ್ ಅವರಿಗಿಂತ ಸ್ವಲ್ಪ ಚಿಕ್ಕ ವಯಸ್ಸಿನ ಹಾಗು ದೊಡ್ಡ ವಯಸ್ಸಿನ ಅನೇಕರು ಅವರೊಂದಿಗೆ ನಟಿಸಿರೋದು ಗೊತ್ತೇ ಇದೆ. ಆದರೆ, ನಟ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಅವರು ಸಹ ಡಾ ರಾಜ್‌ ಜೊತೆ ನಟಿಸಿದ್ದರು ಗೊತ್ತಾ?

ಹೌದು, ನಟ ರವಿಚಂದ್ರನ್ ಅವರು ಡಾ ರಾಜ್‌ಕುಮಾರ್ ಅವರ ಜೊತೆ ಒಂದು ಚಿತ್ರದಲ್ಲಿ ನಟಿಸಿದ್ದರು. ಅಂದು ಬಾಲನಟರಾಗಿ ವಿ ರವಿಚಂದ್ರನ್ ಅವರು ಅಣ್ಣಾವ್ರ ನಟಿಸಿದ್ದರು. ಆಗ ಅವರಿಗೆ ಕೇವಲ ಹತ್ತು ವರ್ಷ. ಡಾ ರಾಜ್‌ಕುಮಾರ್ ಅವರು ನಾಯಕರಾಗಿ ಮೂರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ 'ಕುಲಗೌರವ' ಚಿತ್ರದಲ್ಲಿ ನಟ ರವಿಚಂದ್ರನ್ ನಟಿಸಿದ್ದರು. ತಂದೆ-ಮಗ-ಮೊಮ್ಮಗನಾಗಿ ಡಾ ರಾಜ್‌ಕುಮಾರ್ ಆ ಚಿತ್ರದಲ್ಲಿ ನಟಿಸಿದ್ದರು. 

Tap to resize

Latest Videos

undefined

ಪುನೀತ್-ಶಿವಣ್ಣ ಬಗ್ಗೆ ಹೊಸ ಸೀಕ್ರೆಟ್ ಹೇಳಿ ಭಾರೀ ಮೆಚ್ಚುಗೆ ಪಡೆದ್ರಾ ನಟ ವಿನೋದ್ ರಾಜ್..!?

1971ರಲ್ಲಿ ತೆರೆ ಕಂಡಿದ್ದ ಫ್ಯಾಮಿಲಿ ಡ್ರಾಮಾ ಈ ಕುಲಗೌರವ ಸಿನಿಮಾ. ಈ ಚಿತ್ರದಲ್ಲಿ ಡಾ ರಾಜ್‌ಕುಮಾರ್ ರಘುನಾಥ್ ರಾವ್, ಮಗ ರವಿ ಹಾಗೂ ಮೊಮ್ಮಗ ಶಂಕರ್ ಹೀಗೆ ಮೂರು ಪಾತ್ರದಲ್ಲಿ ನಟಿಸಿದ್ದರು. ಶಂಕರ್‌ ಬಾಲ್ಯದ ಪಾತ್ರದಲ್ಲಿ ನಟ ರವಿಚಂದ್ರನ್ ಬಾಲನಟರಾಗಿ ನಟಿಸಿದ್ದರು. ಈ ಸಂಗತಿ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಆದರೆ, ಅಣ್ಣಾವ್ರ ಜೊತೆ ರವಿಚಂದ್ರನ್ ನಟಿಸಿದ್ದು ಆ ಅದೃಷ್ಟ ಪಡೆದವರಲ್ಲಿ ಅವರೂ ಒಬ್ಬರು ಎನ್ನಲೇಬೇಕು!

ಒಟ್ಟಿನಲ್ಲಿ, ಡಾ ರಾಜ್‌ಕುಮಾರ್ ಅವರ ಜೊತೆ ಒಂದು ಸಣ್ಣ ಪಾತ್ರದಲ್ಲಿ ಬಾಲನಟರಾಗಿ ನಟಿಸಿದ್ದರು ರವಿಚಂದ್ರನ್. ಈ ಸಂಗತಿ ರವಿಮಾಮರ ಹಲವು ಅಭಿಮಾನಿಗಳಲ್ಲಿ ಪುಳಕ ತರುವುದಂತೂ ಖಂಡಿತ. ಏಕೆಂದರೆ, ಡಾ ರಾಜ್‌ ಅವರ ಜೊತೆ ನಟ ರವಿಚಂದ್ರನ್ ಅವರು ನಟಿಸಿದ್ದಾರೆ ಎಂಬ ಸಂಗತಿಯೇ ಹಲವರಿಗೆ ಹೊಸದು. ಈಗ ಅದು ಬಹಿರಂಗವಾಗಿದೆ, ಹಲವರ ಖುಷಿಗೆ, ರೋಮಾಂಚನಕ್ಕೆ ಪಾತ್ರವಾಗಿದೆ. ಈ ಮೂಲಕ ಸ್ಯಾಂಡಲ್‌ವುಡ್ ಸಿನಿಪ್ರೇಕ್ಷಕರ ಅಚ್ಚರಿ ಸಾಲಿಗೆ ಈ ಸಂಗತಿ ಕೂಡ ಕಾರಣವಾಗಿದೆ.

ಕೈ ತುಂಬ ಇದ್ದೋನೆ ಯೋಗಿ, ಕಡೆವರೆಗು ಬೇಡೋನೆ ಜೋಗಿ ಸದ್ಯ ಟ್ರೆಂಡಿಂಗ್ ಆಗ್ತಿರೋದು ಯಾಕೆ?

click me!