ಕಲಾವಿದರ ಸಂಘವು ಕಳೆದ 16 ವರ್ಷಗಳಿಂದ ಸರ್ವ ಸದಸ್ಯರ ಸಾಮಾನ್ಯ ಸಭೆ ಮತ್ತು ವಾರ್ಷಿಕ ಚುನಾವಣೆಗಳನ್ನು ನಡೆಸದ ಕಾರಣ ಸರ್ಕಾರದಿಂದ ನೋಟಿಸ್‌ಗೆ ಗುರಿಯಾಗಿದೆ. ಸಹಕಾರ ಸಂಘಗಳ ಕಾಯ್ದೆ 1959 ರ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು (ಆ.25): ಇತ್ತೀಚೆಗಷ್ಟೇ ಚಿತ್ರರಂಗದ ಏಳಿಗೆಗಾಗಿ ಕಲಾವಿದರ ಸಂಘದಲ್ಲಿ ಪೂಜೆ , ನಾಗಾರಾಧನೆ ಹೋಮ, ಹವನ ಮಾಡಲಾಯ್ತು. ಆದರೆ ಇದೀಗ ಕಲಾವಿದರ ಸಂಘದ ವಿರುದ್ಧ ನೋಟಿಸ್ ಜಾರಿಯಾಗಿದೆ. ಕಲಾವಿದರ ಸಂಘದ ಖಂಜಾಜಿ ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಪದಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸಹಕಾರ ಸಂಘಗಳ ಕಾಯ್ದೆ ಉಲ್ಲಂಘನೆ ಹಿನ್ನೆಲೆ ನೋಟೀಸ್ ಜಾರಿ ಮಾಡಲಾಗಿದೆ.
ಕಲಾವಿದರ ಸಂಘದಲ್ಲಿ ಕಳೆದ 16 ವರ್ಷಗಳಿಂದ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಸಿಲ್ಲ. ಪ್ರತಿ ವರ್ಷ ಸಲ್ಲಿಸಬೇಕಾದ ವಾರ್ಷಿಕ ಲೆಕ್ಕಾಚಾರ ಪರಿಶೋಧನೆ ವರದಿ ಸಲ್ಲಿಕೆಯಾಗಿಲ್ಲ. ಈ ಬಗ್ಗೆ ದೂರು ದಾಖಲಾದ ಹಿನ್ನೆಲೆ ನೋಟೀಸ್ ಜಾರಿ ಮಾಡಲಾಗಿದೆ.
ಜಿಲ್ಲಾ ಸಂಘಗಳ ನೋಂದಣಾ ಅಧಿಕಾರಿಗಳು ಹಾಗೂ ಜಿಲ್ಲಾ ಸಹಕಾರಿ ಸಂಘದ ಉಪನಿಂಬಧಕರಿಂದ ನೋಟಿಸ್ ಜಾರಿ ಮಾಡಿದ್ದು, 15 ದಿನ ಒಳಗೆ ಲಿಖಿತ ವಿವರಣೆ ಮತ್ತು ದಾಖಲಾತಿ ನೀಡುವಂತೆ ಸೂಚನೆ ನೀಡಲಾಗಿದೆ.
ರೌಡಿ ವಿಲ್ಸನ್ ಗಾರ್ಡನ್ ನಾಗನ ಜತೆ ಜೈಲಲ್ಲಿ ದರ್ಶನ್ ಸಿಗರೇಟ್ ಸೇದುವ ಫೋಟೋ ವೈರಲ್!
ನೋಟೀಸ್ ನೀಡಿದ್ದು ಯಾಕೆ?
ಕರ್ನಾಟಕ ಸಹಕಾರ ಸಂಘ ಕಾಯ್ದೆ 1959 ರ ನಿಯಮಗಳನ್ವಯ. ಪ್ರತಿ ವರ್ಷ ಸಂಘದ ವಾರ್ಷಿಕ ಚುನಾವಣೆ ನಡೆಸಬೇಕು. ಕನಿಷ್ಠ ಒಂದು ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಸಬೇಕು. ಆದ್ರೆ ಕಳೆದ 16 ವರ್ಷದಿಂದ ಸಂಘದಲ್ಲಿ ಚುನಾವಣೆ ಮತ್ತು ಸರ್ವ ಸದಸ್ಯರ ಸಭೆ ನಡೆದಿಲ್ಲ. ಕಳೆದ ವಾರ ಈ ಬಗ್ಗೆ ದೂರು ದಾಖಲಾಗಿತ್ತು. ದೂರು ದಾಖಲಾದ ಬೆನ್ನಲ್ಲೇ ನೋಟಿಸ್ ಜಾರಿಗೊಳಿಸಲಾಗಿದೆ. ಎನ್.ಆರ್.ರಮೇಶ್ ದೂರು ಆಧರಿಸಿ ಕನ್ನಡ ಚಲನಚಿತ್ರ ಸಂಘಕ್ಕೆ ಸರ್ಕಾರ ನೋಟಿಸ್ ನೀಡಿದೆ.