ಪುನೀತ್-ಶಿವಣ್ಣ ಬಗ್ಗೆ ಹೊಸ ಸೀಕ್ರೆಟ್ ಹೇಳಿ ಭಾರೀ ಮೆಚ್ಚುಗೆ ಪಡೆದ್ರಾ ನಟ ವಿನೋದ್ ರಾಜ್..!?

By Shriram Bhat  |  First Published Aug 25, 2024, 5:10 PM IST

ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್ ನಟ ಹಾಗೂ ಕೃಷಿಕರು. ನಟ ವಿನೋದ್ ರಾಜ್ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕನ್ನಡದ ಕಣ್ಮಣಿ ದಿವಂಗತ 'ಅಪ್ಪು' ಹಾಗೂ 'ಶಿವಣ್ಣ' ಬಗ್ಗೆ ಏನ್ ಹೇಳಿದಾರೆ ಅಂದ್ರೆ...


ಕನ್ನಡದ ವರನಟ ಡಾ ರಾಜ್‌ಕುಮಾರ್ (Dr Rajkumar) ಮಗ ಪುನೀತ್ ರಾಜ್‌ಕುಮಾರ್ (Puneeth Rajkumar) ಬಗ್ಗೆ ಗೊತ್ತಿಲ್ಲದ ಕನ್ನಡಿಗರಿಲ್ಲ. ಹಾಗೇ, ನಟ ವಿನೋದ್ ರಾಜ್ (Vinod Raj) ಯಾರು ಎನ್ನವಂಥ ಪ್ರಶ್ನೆ ಕೇಳುವವರೂ ಕಡಿಮೆ. ಹಿರಿಯ ನಟಿ ಲೀಲಾವತಿ (Leelavathi) ಪುತ್ರ ವಿನೋದ್ ರಾಜ್ ನಟ ಹಾಗೂ ಕೃಷಿಕರು. ನಟ ವಿನೋದ್ ರಾಜ್ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕನ್ನಡದ ಕಣ್ಮಣಿ ದಿವಂಗತ 'ಅಪ್ಪು' ಬಗ್ಗೆ ಏನ್ ಹೇಳಿದಾರೆ ಗೊತ್ತಾ? 

'ಪುನೀತ್ ಅವ್ರು ಅಂಥ ವಿದ್ಯಾವಂತರು ಅಲ್ದೇ ಇರ್ಬಹುದು. ತನ್ನದೇ ಆದ ಸ್ಥಾನವನ್ನು ಸೃಷ್ಟಿ ಮಾಡಿಕೊಂಡು, ಒಬ್ಬ ಉದ್ಯಮಿಯಾಗಲು ಪ್ರಯತ್ನಪಟ್ಟು, ಚಿತ್ರರಂಗಕ್ಕೆ ಏನು ಮಾಡ್ಬಹುದು ಅಂತ ಯೋಚ್ನೆ ಮಾಡಿದವ್ರು. ಪಿಆರ್‌ಕೆ ಪ್ರೊಡಕ್ಷನ್ಸ್‌ ಅಂತ ಮಾಡಿ, ಬಹುಶಃ ಅದರ ಮೆಂಟೇನೆನ್ಸ್‌ ಆತನಿಗೆ ಬರ್ಡನ್ ಆಯ್ತು.. 

Tap to resize

Latest Videos

undefined

ತುಂಬಾ ದುಡಿದಾಗ ಹೊಟ್ಟೆ ಹಸಿಯಲ್ಲ, ತುಂಬಾ ಯೋಚ್ನೆ ಮಾಡಿದಾಗ ಹೊಟ್ಟೆ ಹಸಿತದೆ.. ಆತನಿಗೆ ದುಡಿದು ಹೊಟ್ಟೆ ಹಸಿಯಲಿಲ್ಲ, ಯೋಚ್ನೆ ಮಾಡಿ ಹೊಟ್ಟೆ ಹಸಿತು ಪುನೀತ್‌ಗೆ.. ಅವ್ರ ಲೈಫಲ್ಲಿ ಅಮ್ಮನ ಕಳ್ಕೊಂಡಿದ್ದು ದೊಡ್ಡ ನಷ್ಟ..'ಎಂದಿದ್ದಾರೆ ನಟ ವಿನೋದ್ ರಾಜ್. ಈ ಮೂಲಕ ವಿನೋದ್ ರಾಜ್ ಅವರು ನಟ ಪುನೀತ್ ರಾಜ್‌ಕುಮಾರ್ ಅವರು ಕನ್ನಡಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸಿದ್ದಾರೆ. 

ಎಲ್ಲಾ ದುರಭ್ಯಾಸಗಳಿಂದ ದೂರವಿದ್ದರೂ ಕನ್ನಡ ಖಳನಟ ಸುಧೀರ್ ಸತ್ತಿದ್ದು ಹೇಗೆ?

ಇನ್ನು ಶಿವಣ್ಣನ ಬಗ್ಗೆ ಕೂಡ ನಟ ವಿನೋದ್ ರಾಜ್ ಅವರು 'ನಟ ಶಿವಣ್ಣ ಅವರು ಏನೇ ಆಗ್ಲಿ, ಯಾವುದೇ ಕಷ್ಟ ಬರ್ಲಿ ಕೆಲಸ ಮಾಡ್ತಾನೇ ಇರ್ತಾರೆ, ನಿಲ್ಸಿಲ್ಲ.. ಅದೇನೇ ಆಗ್ಲಿ, ನಾನು ಹೋಗ್ತಾನೇ ಇರ್ತೀನಿ ಅನ್ನೋ ತರ.. ಅದು ಅವ್ರ ಹತ್ರ ಕಲಿಬೇಕಾಗಿರೋ ವಷ್ಯ, ದೊಡ್ಡ ವಿಷ್ಯ ಅದು.. ಈ ಕಡೆ ನಿಂದನೆ ಆದ್ರೂ ಇನ್ನೊಂದು ಕಡೆ ಅವಮಾನ ಆದ್ರೂ ನಾನ್ ರೆಡಿ ರೆಡಿ ಅನ್ನೋದು ಇದ್ಯಲ್ಲ ಅದು ತುಂಬಾ ದೊಡ್ಡ ಗುಣ..' ಎಂದಿದ್ದಾರೆ ನಟ ವಿನೋದ್ ರಾಜ್. 

ಹೀಗೆ ಕನ್ನಡದ 'ಡಾನ್ಸ್ ರಾಜಾ ಡಾನ್ಸ್' ಖ್ಯಾತಿಯ ನಟ ವಿನೋದ್ ರಾಜ್ ಅವರು ದೊಡ್ಮನೆ ಕುಡಿಗಳಾದ ಶಿವಣ್ಣ ಹಾಗು ಪುನೀತ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ತಮ್ಮ ಅಮ್ಮನ ಮಾತಿನಂತೆ ತಾವು ಕರುಣಾಮಯಿ ಆಗಿದ್ದೇನೆ ಎಂದಿದ್ದಾರೆ. 'ನಮ್ಮಮ್ಮ ಹೇಳಿದಾರೆ, ಯಾವತ್ತೂ ದಯೆ, ಕರುಣೆ ಹಾಗೂ ಕ್ಷಮೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು. ನಾನು ಆದಷ್ಟೂ ಅದೇ ದಾರಿಯಲ್ಲಿ ಸಾಗಲು ಪ್ರಯತ್ನಿಸುತ್ತಿದ್ದೇನೆ' ಎಂದಿದ್ದಾರೆ ನಟ ವಿನೋದ್ ರಾಜ್.

ಕೈ ತುಂಬ ಇದ್ದೋನೆ ಯೋಗಿ, ಕಡೆವರೆಗು ಬೇಡೋನೆ ಜೋಗಿ ಸದ್ಯ ಟ್ರೆಂಡಿಂಗ್ ಆಗ್ತಿರೋದು ಯಾಕೆ?

ಒಟ್ಟಿನಲ್ಲಿ, ಕನ್ನಡದ ಕಂದ, ಲೀಲಾವತಿಯ ಮುದ್ದಿನ ಸುಪುತ್ರ ನಟ ವಿನೋದ್ ರಾಜ್ ಅವರು ಇತ್ತೀಚೆಗೆ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹಲವು ಸಂಗತಿಗಳನ್ನು ಹಂಚಿಕೊಳ್ಳುತ್ತ, ಚಿತ್ರರಂಗದ ತಮ್ಮ ಆಪ್ತರ ಬಗ್ಗೆ ಮಾತನಾಡುತ್ತ ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ, ಕೆಲವೊಮ್ಮೆ ಟೀಕೆಗಳಿಗೆ ಗುರಿಯಾದರೂ ಅವೆಲ್ಲ ಜೀವನದ ಒಂದು ಭಾಗ ಎಂದು ಭಾವಿಸಿಕೊಂಡಂತೆ ಮುನ್ನಡೆಯುತ್ತಿದ್ದಾರೆ ವಿನೋದ್ ರಾಜ್ ಎನ್ನಬಹುದೇನೋ!

click me!