
ಬೆಂಗಳೂರು(ಜೂ. 30) ಕೊರೋನಾ ಮಹಾಮಾರಿ ನಟಿಯ ಪತಿ ಹಾಗೂ ಪುತ್ರನ ಬಲಿಪಡೆದಿದೆ. ಕೋವಿಡ್‌ಗೆ ನಟಿ ಕವಿತಾ ಅವರ ಪತಿ ಮತ್ತು ಪುತ್ರ ಬಲಿಯಾಗಿದ್ದಾರೆ. ಹದಿನೈದು ದಿನದಲ್ಲಿ ಪತಿ ದಶರಥ ರಾಜ್ ಮತ್ತು ಮಗ ಸಂಜಯ್ ರೂಪ್ ಅವರನ್ನು ಕಳೆದುಕೊಂಡಿದ್ದಾರೆ.
ಜೂನ್ 15 ರಂದು ಕವಿತ ಅವ್ರ ಪುತ್ರ ಕೊವಿಡ್ ಸೋಂಕಿನಿಂದ ಕೊನೆಯುಸಿರೆಳೆದಿದ್ದರು. ಪತಿ ದಶರಥ ರಾಜ್ ಕೂಡ ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದರು. ದಶರಥ ರಾಜ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ವೆಂಟಿಲೇಟರ್ ಸಿಗದೆ ಕೊನೆ ಉಸಿರು ಎಳೆದ ಹಿರಿಯ ಕಲಾವಿದ ರಾಜಾರಾಮ್
ಕವಿತ ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡದ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಕನ್ನಡದ ಸಹೋದರರ ಸವಾಲ್', ಕಿಲಾಡಿ ಕಿಟ್ಟು' ಸೇರಿದಂತೆ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕವಿತಾ ನಟಿಸಿದ್ದಾರೆ. ರವಿಚಂದ್ರನ್ .ಉಮಾಶ್ರೀ ಅಭಿನಯದ ಪುಟ್ನಂಜ ಚಿತ್ರದಲ್ಲಿ ಅಭಿನಯಿಸಿದ ನಟಿ ಹೆಸರು ಸಂಪಾದನೆ ಮಾಡಿದ್ದರು. ಪುಟ್ನಂಜ ಸಿನಿಮಾದಲ್ಲಿ ಮೀನಾ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕವಿತಾ ಘಾಟಿ ಹೆಂಗಸಿನ ಪಾತ್ರದಲ್ಲಿ ಮಿಂಚಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.