
ಕೊರೋನಾವೈರಸ್ ಭೀತಿ, ಲಾಕ್‌ಡೌನ್ ಸಂಕಷ್ಟದಿಂದ ಚಿತ್ರರಂಗ ಬಳಲಿದೆ. ಕಳೆದ ವರ್ಷ ಕೊರೋನಾ ಸಂದರ್ಭ 9 ತಿಂಗಳು ಲಾಕ್ ಆಗಿದ್ದ ಸ್ಯಾಂಡಲ್‌ವುಡ್ ಸ್ವಲ್ಪ ಚೇತರಿಸುತ್ತಿರುವಾಗ ಎರಡನೇ ಅಲೆಯ ಏಟು ಬಿತ್ತು.
ಭಾರತದಲ್ಲಿ ಬಹಳಷ್ಟು ಸಿನಿ ಇಂಡಸ್ಟ್ರಿಯಲ್ಲಿ ಹಿರಿಯ ಕಲಾವಿದರೇ ಒಟಿಟಿ ರಿಲೀಸ್‌ನತ್ತ ಮುಖ ಮಾಡಿ, ಸಿನಿಮಾ ರಿಲೀಸ್ ಮಾಡಿದ್ದಾರೆ. ಥಿಯೇಟರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡೋದು ಸದ್ಯಕ್ಕಾಗುವ ಕೆಲಸವಲ್ಲ ಎಂಬುದನ್ನು ಬಹಳಷ್ಟು ಜನ ಅರ್ಥ ಮಾಡಿಕೊಂಡು ಪರ್ಯಾಯ ಮಾರ್ಗವನ್ನು ಆರಿಸಿಕೊಳ್ಳುತ್ತಿದ್ದಾರೆ.
ಪ್ರಜ್ವಲ್ ದೇವರಾಜ್ ಬರ್ತ್‌ಡೇ ದಿನ PD 35 ಚಿತ್ರತಂಡದಿಂದ ಫಸ್ಟ್ ಲುಕ್
ಈ ನಿಟ್ಟಿನಲ್ಲಿ ವಿನೂತನವಾಗಿ ಯೋಚಿಸಿರೋ ಆಮ್ಲೆಟ್ ಚಿತ್ರತಂಡ ನೇರವಾಗಿ ಸಿನಿಮಾವನ್ನು ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ಪ್ರದರ್ಶಿಸಲಿದೆ. ಮೊದಲ ಪ್ರದರ್ಶನದ ಖುಷಿಯನ್ನು ಜನ ಮನೆಯಲ್ಲೇ ಕುಳಿತು ಆಸ್ವಾದಿಸಬಹುದು. ವೆಂಕಟ್ ಭಾರದ್ವಾಜ್ ನಿರ್ದೇಶನದ ಈ ಸಿನಿಮಾ ಜುಲೈ 9ರಂದು ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರದರ್ಶನ ಕಾಣುತ್ತಿದೆ.
ಕನ್ನಡ ಚಲನಚಿತ್ರೋದ್ಯಮದಲ್ಲಿ ಮೊದಲ ಬಾರಿಗೆ, ಹೊಸ ಚಲನಚಿತ್ರ ಆಮ್ಲೆಟ್ ನೇರವಾಗಿ ಕಲರ್ಸ್ ಕನ್ನಡ ಸಿನೆಮಾ ಚಾನೆಲ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳುತ್ತಿದೆ. ಜು.9ರಂದು ಸಂಜೆ 7 ಗಂಟೆಗೆ ರೆಡಿಯಾಗಿರಿ ಎಂದಿದೆ ಚಿತ್ರತಂಡ.
ಸರಿತಾ ಓಂಪ್ರಕಾಶ್ ಹಾಗೂ ಪ್ರಸನ್ನ ಮಿಯಾಪುರಂ ನಿರ್ಮಾಣದ ಈ ಚಿತ್ರದ ತಾರಾಗಣದಲ್ಲಿ ಸಂಯುಕ್ತಾ ಹೊರನಾಡು, ಶೋಭರಾಜ್, ಬಲರಾಜ ವಾಡಿ , ಶರ್ಮಿತ ಗೌಡ, ನಿರಂಜನ್ ದೇಶಪಾಂಡೆ, ಪಿ.ಡಿ. ಸತೀಶ್ ಚಂದ್ರ, ಮಧುರ, ವಂಶಿಧರ್ ಭೋಗರಾಜ್ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.