ಮೈಸೂರಿನ ರೂಮಲ್ಲಿ ಏನಾಯ್ತು? ಇಬ್ರು ಹೀರೋಯಿನ್‌ ಬಿಟ್ಟೋಗಲು ಕಾರಣವೇನು?; ಓಂ ಪ್ರಕಾಶ್‌ ಬಣ್ಣ ಬಯಲು ಮಾಡಿದ ಕಿರೀಕ್ ಕೀರ್ತಿ

By Vaishnavi ChandrashekarFirst Published Mar 24, 2023, 1:03 PM IST
Highlights

ಕಿರಿಕ್ ಕೀರ್ತಿ ಸಿನಿಮಾ ಪ್ರಚಾರದಲ್ಲಿ ಕೀರ್ತಿ ಬಗ್ಗೆ ಮಾತನಾಡಿದ ನಿರ್ದೇಶಕ ಓಂ ಪ್ರಕಾಶ್. ಸುಳ್ಳು ಪ್ರಚಾರ ಬೇಡ ಸತ್ಯ ಹೇಳುವೆ ಎಂದು ಬಣ್ಣ ಬಯಲು ಮಾಡಲು ಮುಂದಾದ ಕೀರ್ತಿ..... 

ಬಿಗ್ ಬಾಸ್‌ ಸೀನಸ್‌ 4ರಲ್ಲಿ ಸೋಷಿಯಲ್ ಮೀಡಿಯಾ ಸ್ಟಾರ್ ಕಿರಿಕ್ ಕೀರ್ತಿ ಮತ್ತು ಓಂ ಪ್ರಕಾಶ್ ಸ್ಪರ್ಧಿಸಿದ್ದರು. ಈ ವೇಳೆ ಇಬ್ಬರೂ ಅದ್ಭುತ ಸ್ನೇಹ ಹೊಂದಿದ್ದ ಕಾರಣ ಒಟ್ಟಿಗೆ ಸಿನಿಮಾ ಮಾಡಬೇಕು ಎಂದು ನಿರ್ಧಾರ ಮಾಡಿಕೊಳ್ಳುತ್ತಾರೆ ಆದರೆ ಹೊರ ಬಂದ ಮೇಲೆ ಸುದ್ದಿನೇ ಇಲ್ಲ. ಕೆಲವು ದಿನಗಳ ಹಿಂದೆ ನಡೆದ ಖಾಸಗಿ ವಾಹಿನಿ ಸಂದರ್ಶನದಲ್ಲಿ ಓಂ ಪ್ರಕಾಶ್ ಯಾಕೆ 'ಕಿರಿಕ್ ಕೀರ್ತಿ' ಹೆಸರಿನ ಸಿನಿಮಾವನ್ನು ಬಿಡುಗಡೆಗೆ ತಡ ಮಾಡುತ್ತಿದ್ದಾರೆ? ಏನಾಯ್ತು ಎಂದು ಹಂಚಿಕೊಂಡಿದ್ದಾರೆ. ಈ ವೇಳೆ ಕೀರ್ತಿ ವಿರುದ್ಧ ಅರೋಪ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಕೀರ್ತಿ ರಿಯಾಕ್ಟ್‌ ಮಾಡಿದ್ದಾರೆ. 

'ಓಂ ಪ್ರಕಾಶ್ ರಾವ್ ಸರ್..ನಾನು ಡಿಸ್ಕಶನ್‌ಗೆ ರೆಡಿ ಇದ್ದೀನಿ ನನ್ನ Attitudeನಿಂದ ಸಿನಿಮಾ ನಿಲ್ತಾ? ಅಥವಾ ಅದಕ್ಕೆ ಬೇರೆ ಕಾರಣನೇ ಇತ್ತಾ ಅಂತ ಜನರಿಗೆ ಗೊತ್ತಾಗಲ್ಲಿ. ನಾನು ನಿಮ್ಮ ಹೆಸರು ಎಲ್ಲೂ ತೆಗೆದುಕೊಂಡಿಲ್ಲ ನೀವು ಹೇಳಿದ ಮೇಲೆ ನಾನು ಹೇಳಿಲ್ಲ ಅಂದ್ರೆ ತಪ್ಪಾಗುತ್ತಲ್ವಾ ಸರ್? ಕೆಲವು ಕೋತಿಗಳು ನನ್ನ ವಿರುದ್ಧ ಯಾರ್ ಏನ್ ಮಾತಾಡ್ತಾರೆ ಅಂತ ಕಾಯ್ಕಂಡ್‌ ಕೂತವೆ. ಅವುಗಳೂ ಮೈ ಪರಚಿಕೊಳ್ಳೋ ಹಾಗೆ ಯಾಕ್ ಮಾಡ್ತೀರಿ' ಎಂದು ಬರೆದುಕೊಂಡಿರುವ ಕಿರಿಕ್ ಕೀರ್ತಿ 2 ನಿಮಿಷಗಳ ಕಾಲ ಸಿಟ್ಟಿನಿಂದ ಮಾತನಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.

ಸತ್ತು ಹೋಗಿದ್ದೀನಿ ಅಂತ ತಮಟೆ ಹೊಡೀತಾರೆ, ನನ್ನ ಹೆಣಕ್ಕೆ ನಾನೇ ತಮಟೆ ಹೊಡೀಬಾರ್ದು: ಕಿರಿಕ್ ಕೀರ್ತಿ

'ಕರ್ನಾಟಕ ಕಂಡ ಖ್ಯಾತ ಸಿನಿಮಾ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಇವತ್ತು ಯಾವುದೋ ಇಂಟರ್‌ವ್ಯೂನಲ್ಲಿ ನನ್ನ ಬಗ್ಗೆ ಮಾತನಾಡಿದ್ದಾರೆ. ಕಿರಿಕ್ ಕೀರ್ತಿ ಕ್ಯಾರೆಕ್ಟರ್‌ ನನಗೆ ಇಷ್ಟ ಆಗಿಲ್ಲ ಅವರ Attitude ಇಷ್ಟ ಅಗಿಲ್ಲ ಅದಿಕ್ಕೆ ಕಿರಿಕ್ ಕೀರ್ತಿ ಸಿನಿಮಾದಿಂದ ಅತನನ್ನು ಹೊರಗಿಟ್ಟೆ ಅಂತ ಹೇಳಿಕೆ ನೀಡಿದ್ದಾರೆ. ಕೆಲವರು ಈ ವಿಡಿಯೋವನ್ನು ಹಂಚಿಕೊಂಡು ಏನ್ ಕೀರ್ತಿ ನಿನ್ನ ಬಾಳು ಬದುಕು ಅಂತ ಬರೆದುಕೊಂಡು ಅವರ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಗೌರವಾನ್ವಿತ ಓಂ ಪ್ರಕಾಶ್ ಸರ್ ಅವರೇ ಸಿನಿಮಾ ಯಾಕೆ ನಿಂತ್ತು ಹೋಯ್ತು? ನಾನು ಯಾಕೆ ಸಿನಿಮಾದಿಂದ ಹೊರ ಬಂದೆ? ಮೊದಲ ಹೀರೋಯಿನ್‌ ಸಿನಿಮಾದಿಂದ ಯಾಕೆ ಹೊರ ಹೋದಳು? ಫೋಟೋಶೂಟ್‌ ದಿನ ಏನಾಯ್ತು? ಬಿಗ್ ಬಾಸ್ ಮೈಸೂರು ಈವೆಂಟ್ ದಿನ ಏನು ಗಲಾಟೆ ಆಯ್ತು? ಅಲ್ಲಿಂದ ಫಸ್ಟ್‌ ಹೀರೋಯಿನ್ ಯಾಕೆ ಬಿಟ್ಟು ಹೋದಳು? ಆಮೇಲೆ ಸೆಂಕೆಂಡ್ ಹೀರೋಯಿನ್ ಹೆಂಗ್ ಸೆಲೆಕ್ಟ್‌ ಆದಳು? ಸ್ಕ್ರಿಪ್ಟ್‌ಗೆಂದು ಮೈಸೂರಿನಲ್ಲಿ ರೂಮ್ ಹಾಕಿದ್ರಿ ಅಲ್ವಾ ಅದಾದ ಮೇಲೆ ಸೆಕೆಂಡ್ ಹೀರೋಯಿನ್‌ ಸಿನಿಮಾದಿಂದ ಯಾಕೆ ಬಿಟ್ಟು ಹೋದಳು? ಆಮೇಲೆ ನಾನು ನಿಮಗೆ ಏನು ಹೇಳಿ ಹೊರ ಬಂದೆ? ಸಿನಿಮಾದಿಂದ ಕಿರಿಕ್ ಕೀರ್ತಿ ಯಾಕೆ ಹೊರ ಬಂದಾ? ಇದೆಲ್ಲಾ ಚರ್ಚೆ ಮಾಡಬೇಕು ಅಂದ್ರೆ ಒಂದು ಸಲ ಕುಳಿತುಕೊಳ್ಳೋಣ ನೇರಾ ನೇರಾ ಲೈವ್‌ನಲ್ಲಿ...ಸಿನಿಮಾದಿಂದ ಯಾರು ಹೊರ ಬಂದರು ಸಿನಿಮಾದಿಂದ ಯಾರನ್ನು ತೆಗೆದು ಹಾಕಿದರು ಅಂತ ಮಾತನಾಡಬಹುದು. ಸಿನಿಮಾ ಯಾಕೆ ಅರ್ಧಕ್ಕೆ ನಿಂತು ಹೋಯಿತ್ತು? ಪದೇ ಪದೇ ನಾಯಕಿಯರು ಯಾಕೆ ಬದಲಾಗುತ್ತಾರೆ? ಇದರ ಬಗ್ಗೆ ದಯವಿಟ್ಟು ಮಾತಾಡೋಣ. ಮುಂಚೆ ಯಾರು ಏನೇ ಮಾತನಾಡಿದ್ದರೂ ನಾನು ರಿಪ್ಲೈ ಕೊಡುತ್ತಿರಲಿಲ್ಲ ಅಂದ್ರೆ ಕೀರ್ತಿ ಇನ್ನು ಕುಗ್ಗಿ ಹೋಗಿದ್ದಾನೆ ಅಂತ ಮಾತನಾಡಿಕೊಳ್ಳುತ್ತಾರೆ. ಸತ್ಯ ಹೇಳುವುದಕ್ಕೆ ನಾನು ರೆಡಿಯಾಗಿರುವೆ....ಇಲ್ಲಿ ತನಕ ಓಂ ಪ್ರಶಾಕ್ ಸರ್  ಇದುವರೆಗೂ ನಾನು ಎಲ್ಲೂ ಚರ್ಚೆ ಮಾಡಿಲ್ಲ ನೀವು ನಿಲ್ಲಿಸಿದಕ್ಕೆ ನಾನು ಸುಮ್ಮನಿದ್ದೆ. ನಿಜ ಹೇಳಬೇಕು ಅಂದ್ರೆ ನಾನೇ ನಿಮಗೆ ಕರೆ ಮಾಡಿ ಹೇಗಿದ್ದೀರಾ? ಆರಾಮ್‌ ಆಗಿದ್ದೀರಾ ನಾನೇ ಮಾತನಾಡಿದ್ದೆ. ನಿಮಗೆ ನೆನಪಿದ್ಯಾ? ಕಿರಿಕ್ ಕೀರ್ತಿ ಅನ್ನೋ ಹೆಸರನ್ನು ಬಳಸಿಕೊಂಡು ಸಿನಿಮಾ ಮಾಡುತ್ತಿದ್ದೀರಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದೀರಾ ಓಕೆ ಮಾಡಿ ಆದರೆ ಮತ್ತೊಬ್ಬರ ಬಗ್ಗೆ ಮಾತನಾಡಿ ಬೆಟ್ಟು ಮಾಡಿ ತೋರಿಸುವ ಮೊದಲು ನೀವು ಏನು ಮಾಡಿದ್ದೀರಿ ಅಂತ ನೋಡಿಕೊಳ್ಳಿ' ಎಂದು ವಿಡಿಯೋದಲ್ಲಿ ಮಾತನಾಡಿದ್ದಾರೆ. 

 

click me!