ಉಪೇಂದ್ರ ಚಿತ್ರದ ಆಡಿಯೋ ಬಿಡುಗಡೆ ಆದಾಗ ಅಥವಾ ಸಿನಿಮಾ ಬಿಡುಗಡೆ ಬಳಿಕ ಈ 'ಕರಿಮಣಿ ಮಾಲೀಕ ನೀನಲ್ಲ..'ಹಾಡನ್ನು ಜನರು ಕೇಳಿ ಬಿಟ್ಟಿದ್ದರು ಅಷ್ಟೇ. ಆದರೆ ಹಾಡಿನ ನಸೀಬು ಚೆನ್ನಾಗಿತ್ತು ಎನಿಸುತ್ತದೆ...
ಅಂದು, 22 ಅಕ್ಟೋಬರ್ 1999ರಲ್ಲಿ (22 October 1999) ಬಿಡುಗಡೆಯಾಗಿದ್ದ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ನಟನೆಯ 'ಉಪೇಂದ್ರ' ಚಿತ್ರದ 'ಕರಿಮಣಿ ಮಾಲೀಕ ನೀನಲ್ಲ..' ಹಾಡು ಇಂದು ಭಾರೀ ವೈರಲ್ ಆಗಿ ಟ್ರೆಂಡ್ ಆಗಿದೆ. ಆದರೆ, ಅಂದು ಆ ಹಾಡು ಅದೇ ಚಿತ್ರದ ಬೇರೆ ಎಲ್ಲಾ ಹಾಡುಗಳಿಗೆ ಹೋಲಿಸಿದರೆ ಕಡಿಮೆ ಜನಪ್ರಿಯತೆ ಪಡೆದುಕೊಂಡಿತ್ತು. ಉಪೇಂದ್ರ (Upendra) ಸಿನಿಮಾದಲ್ಲಿ ಆ ಹಾಡನ್ನು ಪ್ರೇಕ್ಷಕರು ಹೀಗೆ ಕೇಳಿ ಹಾಗೆ ಬಿಟ್ಟಿದ್ದರು, ಕೆಲವೊಬ್ಬರು ಅದನ್ನು ಇಷ್ಟಪಟ್ಟು ಗುನಿಗಿದ್ದಿರಬಹುದು ಎನ್ನಬಹುದು. ಆದರೆ ಇಂದು ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿಬಿಟ್ಟಿದೆ.
ಹೌದು, ರಿಯಲ್ ಸ್ಟಾರ್ ಉಪೇಂದ್ರ ಬರೆದು ಗುರುಕಿರಣ್ ಸಂಗೀತ ಸಂಯೋಜಿಸಿದ್ದ 'ಕರಿಮಣಿ ಮಾಲೀಕ ನೀನಲ್ಲ..(Karimani Malika Neenalla)' ಹಾಡು ಇಂದು ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ. ಅದನ್ನು ರೀಲ್ಸ್ ಮಾಡಿದ ರಾಹುಲ್ಲಾ, ನಂದಿನಿ ಎಲ್ಲರೂ ಇಂದು ಟಾಕ್ ಆಫ್ ದಿ ಸ್ಟೇಟ್ ಎಂಬಂತಾಗಿದ್ದಾರೆ. ಂದು ಕರಿಮಣಿ ಮಾಲೀಕ ನೀನಲ್ಲ ಎಂದು ಯಾರಾದರೂ ಹಾಡಿದರೆ ತಕ್ಷಣ ಎದುರಿಗಿದ್ದರವರ ಮುಖದಲ್ಲಿ ಮುಗುಳ್ನಗು ಮೂಡುತ್ತದೆ. ಆದರೆ, ಇದೇ ಹಾಡು ಅಂದು ನಿಜವಾಗಿಯೂ ಜಾದು ಮಾಡಿತ್ತೇ? ಇಲ್ಲ, ಖಂಡಿತ ಇಲ್ಲ. ಈ ಮಾತನ್ನು ಸ್ವತಃ ಈ ಹಾಡಿನ ಸೃಷ್ಟಿಕರ್ತರಲ್ಲೊಬ್ಬರಾದ ಗುರುಕಿರಣ್ ಹೇಳಿದ್ದಾರೆ.
ನಟ ದರ್ಶನ್ ಸುತ್ತಿಕೊಂಡ್ತು ಹೊಸ ವಿವಾದ; ನಿರ್ಮಾಪಕ ಉಮಾಪತಿ ವಿರುದ್ಧ ಬಳಸಿದ ಪದಕ್ಕೆ ಆಕ್ಷೇಪ
'ಕರಿಮಣಿ ಮಾಲೀಕ ನೀನಲ್ಲ..' ಹಾಡಿನ ಬಗ್ಗೆ ಮಾತನಾಡಿರುವ ಸಂಗೀತ ನಿರ್ದೇಶಕ ಗುರುಕಿರಣ್ 'ಉಪೇಂದ್ರ ಸಿನಿಮಾ ಅಂದು ಸೂಪರ್ ಹಿಟ್ ಆಗಿದ್ದ ಸಿನಿಮಾ. 10 ಕೋಟಿ ಸಮೀಪ ಗಳಿಕೆ ಮಾಡಿದ್ದ ಈ ಸಿನಿಮಾದ ಆಡಿಯೋ ಮಾತ್ರವೇ ಬರೋಬ್ಬರಿ 2 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಆದರೆ ಅದರಲ್ಲಿದ್ದ ಹಾಡುಗಳಲ್ಲಿ ಈ 'ಕರಿಮಣಿ ಮಾಲೀಕ ನೀನಲ್ಲ' ಹಾಡಿಗಿಂತ ಉಳಿದೆಲ್ಲ ಹಾಡುಗಳು ಜನಪ್ರಿಯತೆಯಲ್ಲಿ ಮೇಲಿದ್ದವು. 'ಮಸ್ತ್ ಮಸ್ತ್ ಹುಡುಗಿ ಬಂದ್ಲು..', 'ಓಳು ಬರಿ ಓಳು..', 'ಉಪ್ಪಿಗಿಂತ ರುಚಿ ಬೇರೆ ಇಲ್ಲ..', '2000 AD ಲೇಡಿಯೇ..' ಹಾಡುಗಳನ್ನು ಸಿನಿಪ್ರೇಮಿಗಳು ಹೆಚ್ಚು ಇಷ್ಟಪಟ್ಟಿದ್ದರು.
ಮಲಯಾಂಳ ನಿರ್ದೇಶಕಿ ಅಂಜಲಿ ಮೆನನ್ ಜೊತೆ ಕೈ ಜೋಡಿಸಿದ ಕೆಆರ್‌ಜಿ ಸ್ಟುಡಿಯೋಸ್
ಉಪೇಂದ್ರ ಚಿತ್ರದ ಆಡಿಯೋ ಬಿಡುಗಡೆ ಆದಾಗ ಅಥವಾ ಸಿನಿಮಾ ಬಿಡುಗಡೆ ಬಳಿಕ ಈ 'ಕರಿಮಣಿ ಮಾಲೀಕ ನೀನಲ್ಲ..'ಹಾಡನ್ನು ಜನರು ಕೇಳಿ ಬಿಟ್ಟಿದ್ದರು ಅಷ್ಟೇ. ಆದರೆ ಹಾಡಿನ ನಸೀಬು ಚೆನ್ನಾಗಿತ್ತು ಎನಿಸುತ್ತದೆ. ಈಗ ಅದು ಸೂಪರ್ ಹೀಟ್ ಆಗಿ ಎಲ್ಲರ ಬಾಯಲ್ಲಿ ಹರಿದಾಡುತ್ತಿದೆ. ನಾನು ಮತ್ತು ಉಪೇಂದ್ರ ಆ ಬಗ್ಗೆ ಹೀಗೆಯೇ ಮಾತನಾಡಿದ್ದೇವೆ' ಎಂದಿದ್ದಾರೆ. ಒಟ್ಟನಲ್ಲಿ 'ಅತ್ತೆಗೊಂದು ಕಾಲ ಸೊಸೆಗೊಂದು ಕಾಲ' ಎಂಬಂತೆ ಈಗ ಉಪೇಂದ್ರ ಸಿನಿಮಾದ 'ಕರಿಮಣಿ ಮಾಲೀಕ ನೀನಲ್ಲ..' ಹಾಡು ಮಾತ್ರವೇ ಉಳಿದೆಲ್ಲ ಹಾಡುಗಳನ್ನು ಬಿಟ್ಟು ಸಖತ್ ಟ್ರೆಂಡ್ ಸೃಷ್ಟಿಸಿದೆ.
'ಸಿಸಿಎಲ್'ಗೆ ದಿನಗಣನೆ, ಪ್ರಾಕ್ಟಿಸ್ ಶುರು; ಬಿಗ್ ಅಪ್ ಡೇಟ್ ಕೊಟ್ಟ ಕರ್ನಾಟಕ ಬುಲ್ಡೋಜರ್ಸ್ ತಂಡ