* ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ದ ದೂರು..
* ಫಿಲ್ಮಂ ಚೇಂಬರ್ ಗೆ ದೂರು ನೀಡಿದ ಮಾನವಹಕ್ಕುಗಳು ಮತ್ತು ಭ್ರಷ್ಟಚಾರ ನಿಗ್ರಹದಳ ಸಂಸ್ಥೆ
*ನಟ ದರ್ಶನ್ ಅವಾಚ್ಯ ಶಬ್ಧ ಬಳಕೆ ಹಿನ್ನಲೆ
* ದರ್ಶನ್ ಮಾತಾಡಿದ್ದಾರೆ ಎಂಬ ಆಡಿಯೋ ವೈರಲ್ ಹಿನ್ನಲೆ
ಬೆಂಗಳೂರು(ಜು. 20) ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ದ ದೂರು ದಾಖಲಾಗಿದೆ. ಫಿಲ್ಮಂ ಚೇಂಬರ್ ಗೆ ಮಾನವಹಕ್ಕುಗಳು ಮತ್ತು ಭ್ರಷ್ಟಚಾರ ನಿಗ್ರಹದಳ ಸಂಸ್ಥೆ ದೂರು ಸಲ್ಲಿಸಿದೆ.
ನಟ ದರ್ಶನ್ ಅವಾಚ್ಯ ಶಬ್ಧ ಬಳಕೆ ಮಾಡಿದ್ದಾರೆ ಎನ್ನುವ ಆರೋಪ ಬಂದಿದೆ ದರ್ಶನ್ ಮಾತಾಡಿದ್ದಾರೆ ಎಂಬ ಆಡಿಯೋ ವೈರಲ್ ಹಿನ್ನಲೆಯಲ್ಲಿ ದೂರು ದಾಖಲಿಸಲಾಗಿದೆ. ಮಾಧ್ಯಮದವರ ವಿರುದ್ದ ದರ್ಶನ್ ಅವಾಚ್ಯ ಪದಗಳ ಬಳಕೆ ಮಾಡಿದ್ದಾರೆ ಎನ್ನಲಾಗಿದೆ.
undefined
ಫಿಲ್ಮಂ ಚೇಂಬರ್ ಗೆ ಮಾನವಹಕ್ಕುಗಳು ಮತ್ತು ಭ್ರಷ್ಟಚಾರ ನಿಗ್ರಹದಳ ಸಂಸ್ಥೆ ಅಧ್ಯಕ್ಷ ಮೋಹನ್ ದೂರು ನೀಡಿದ್ದಾರೆ. ದರ್ಶನ್ ರನ್ನ 5 ವರ್ಷ ಬ್ಯಾನ್ ಮಾಡುವಂತೆ ಒತ್ತಾಯ ಮಾಡಿದ್ದಾರೆ. ದರ್ಶನ್ ಮಾತಿಗೆ ಕಡಿವಾಣ ಹಾಕಬೇಕು ಎಂದು ತಮ್ಮ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ನಟ ವರ್ಸಸ್ ನಿರ್ದೇಶಕ.. ಪುರುಷತ್ವ ಸವಾಲಿನ ಮಾತು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿ ವಿಚಾರವನ್ನು ನಟ ದೊಡ್ಡಣ್ಣ ಗಮನಕ್ಕೆ ತಂದಿದ್ದೇವೆ. ದೊಡ್ಡಣ್ಣ ಕಲಾವಿದರ ಸಂಘದ ಖಜಾಂಚಿ
ದೊಡ್ಡಣ್ಣ ಸಧ್ಯದಲ್ಲಿಯೇ ಮಾತಾನಾಡ್ತಾರೆ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ತಿಳಿಸಿದ್ದಾರೆ.
ದರ್ಶನ್ ಮಾತನಾಡಿರೋ ಬಗ್ಗೆ ಕಲಾವಿದರ ಸಂಘದಲ್ಲಿ ಚರ್ಚೆಯಾಗಬೇಕು. ಅಲ್ಲೇ ಇಥ್ಯರ್ಥ ಆಗಬೇಕು. ಹೀಗಾಗಿ ದರ್ಶನ್ ವಿಚಾರವನ್ನ ಕಲಾವಿದರ ಸಂಘದ ಗಮನಕ್ಕೆ ತಂದ ತರಲಾಗಿದೆ ಎಂದು ವಾಣಿಜ್ಯ ಮಂಡಳಿ ತಿಳಿಸಿದೆ.
ದರ್ಶನ್ ವಿಚಾರವಾಗಿ ಅವರ ಜೊತೆ ಮಾತನಾಡುತ್ತೇನೆ. ಸಾ. ರಾ ಗೋವೀಂದು ಅವರು ಈಗ ಕರೆ ಮಾಡಿದ್ದರು. ಹೀಗಾಹಿ ದರ್ಶನ್ ಜೊತೆ ಮಾತನಾಡುತ್ತೇನೆ ಎಂದು ಕಲಾವಿದರ ಸಂಘದ ಕಜಾಂಚಿ ದೊಡ್ಡಣ್ಣ ತಿಳಿಸಿದ್ದಾರೆ.