'ಅಮೃತಮತಿ'ಗೆ ಪ್ರಶಸ್ತಿ: ಭಾವುಕರಾದ ಹರಿಪ್ರಿಯಾ!

Suvarna News   | Asianet News
Published : Jul 19, 2021, 05:28 PM IST
'ಅಮೃತಮತಿ'ಗೆ ಪ್ರಶಸ್ತಿ: ಭಾವುಕರಾದ ಹರಿಪ್ರಿಯಾ!

ಸಾರಾಂಶ

'ಅಮೃತಮತಿ' ಚಿತ್ರಕ್ಕೆ ನಟಿ ಹರಿಪ್ರಿಯಾ ಅವರಿಗೆ ಪ್ರಶಸ್ತಿ, ಫಲಕ ನೀಡಿ ಗೌರವಿಸಿದ ಬರಗೂರು ಮತ್ತು ಚಿತ್ರತಂಡದವರು.  

ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಚಿತ್ರದ ಅಭಿನಯಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಬಂದಿರುವುದಕ್ಕೆ ನಾಯಕಿ ಹರಿಪ್ರಿಯಾ ಭಾವುಕ ಪ್ರತಿಕ್ರಿಯೆ ನೀಡಿದ್ದಾರೆ. 

‘ಒಬ್ಬ ನಟಿಯಾಗಿದ್ದಕ್ಕೂ ಸಾರ್ಥಕ ಅನಿಸೋ ಹೆಮ್ಮೆಯ ಕ್ಷಣವಿದು. ಈ ಕ್ಷಣಗಳು ಜೀವನಪರ್ಯಂತ ನೆನಪಿರುತ್ತವೆ. ಅಮೃತಮತಿ ಚಿತ್ರದ ಪ್ರಧಾನ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಬರಗೂರು ರಾಮಚಂದ್ರಪ್ಪ ಅವರಿಗೆ ಕೃತಜ್ಞಳು,’ ಎಂದು ಹರಿಪ್ರಿಯಾ ಟ್ವೀಟ್ ಮಾಡಿದ್ದಾರೆ. 

ಅಮೃತಮತಿ ಚಿತ್ರಕ್ಕೆ ಲಾಸ್ ಏಂಜಲೀಸ್ ಚಿತ್ರೋತ್ಸವ ಪ್ರಶಸ್ತಿ

    ಇದಕ್ಕೂ ಮುನ್ನ ಹರಿಪ್ರಿಯಾ ಅವರನ್ನು ಬರಗೂರು ಪ್ರತಿಷ್ಠಾನದ ವತಿಯಿಂದ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಹಾಗೂ ಕೆಲವು ತಿಂಗಳ ಹಿಂದೆ ಅಮೆರಿಕದ ಲಾಸ್ ಏಂಜಲೀಸ್‌ ಸನ್‌ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ ಹಾಗೂ ಬರಗೂರು ರಾಮಚಂದ್ರಪ್ಪ ಅವರಿಗೂ ಅತ್ಯುತ್ತಮ ಸ್ಕ್ರೀನ್ ಪ್ಲೇನ್ ಪ್ರಶಸ್ತಿ ಬಂದಿದೆ.

     

    PREV

    ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

    click me!

    Recommended Stories

    ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
    ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?