ನಾವೂ ಕೂಡ ಕಷ್ಟಪಟ್ಟು ಕೆಲಸ ಮಾಡ್ತೀವಿ, ವರ್ಕ್‌ಔಟ್ ಮಾಡ್ತೀವಿ, ಡಾನ್ಸ್ ಕಲಿತು ಮಾಡ್ತೀವಿ, ಕೊಟ್ಟ ಬಟ್ಟೆ ಹಾಕ್ಕೋಬೇಕು, ಮೋರಿನಲ್ಲಿ ಇಳಿಬೇಕು ಅಂದ್ರೂ ಇಳಿತೀವಿ. ಆದ್ರೆ ನಮಗೆ ಹೀರೋಗಳು..
ಸ್ಯಾಂಡಲ್‌ವುಡ್ 'ದಿಯಾ' ಸಿನಿಮಾದ ನಟಿ ಖುಷಿ ಕನ್ನಡ ಸಿನಿಮಾರಂಗದ ಬಗ್ಗೆ ಕೆಲವು ಸಂಗತಿಗಳನ್ನು ಹೇಳಿದ್ದಾರೆ. ಅದನ್ನು ಸೆನ್ಸೇಷನಲ್ ಎಂದೂ ಹೇಳಬಹುದು. ಹಾಗಿದ್ದರೆ ದಿಯಾ ನಟಿ ಖುಷಿ ಅದೇನು ಹೇಳಿದ್ದಾರೆ? ನಮಗೆ ಬೇರೆ ಭಾಷೆಗಳಲ್ಲಿ ಹೆಚ್ಚು ಸಂಭಾವನೆ ಸಿಗುತ್ತೆ. ಆದರೆ, ಕನ್ನಡದಲ್ಲಿ ಸಂಭಾವನೆ ಕಮ್ಮಿ. ನಮಗೆ ಚಿಕ್ಕ ಬ್ಯಾನರ್‌ನಲ್ಲೇ ಕೇಳಿದಷ್ಟು ರೆಮ್ಯುನರೇಷನ್ ಕೊಡುತ್ತಾರೆ, ಆದರೆ, ದೊಡ್ಡ ಬ್ಯಾನರ್‌ನಲ್ಲಿ ಹೆಚ್ಚು ಸಂಭಾವನೆ ಸಿಗೋದಿಲ್ಲ. ಈ ಎಲ್ಲ ಕಾರಣಗಳೂ ಮುಖ್ಯವಾಗಿವೆ.
ಜೊತೆಗೆ, ನಾವೂ ಕೂಡ ಕಷ್ಟಪಟ್ಟು ಕೆಲಸ ಮಾಡ್ತೀವಿ, ಡಾನ್ಸ್ ಕಲಿತು ಮಾಡ್ತೀವಿ, ವರ್ಕ್‌ಔಟ್ ಮಾಡ್ತೀವಿ, ಕೊಟ್ಟ ಬಟ್ಟೆ ಹಾಕ್ಕೋಬೇಕು, ವರ್ಕ್‌ಔಟ್ ಮಾಡ್ತೀವಿ, ಮೋರಿನಲ್ಲಿ ಇಳಿಬೇಕು ಅಂದ್ರೂ ಇಳಿತೀವಿ. ಆದ್ರೆ ನಮಗೆ ಹೀರೋಗಳು ಅಥವಾ ಪುರುಷ ಕಲಾವಿದರಿಗಿಂತ ಸಂಬಳ ಕಮ್ಮಿ. ಈ ಮಾತನ್ನು ನಟಿ ಖುಷಿ ಮಾತ್ರವಲ್ಲ, ಹಲವು ನಾಯಕಿಯರು ಹಾಗೂ ಮಹಿಳಾ ಕಲಾವಿದರು ಕೂಡ ಹೇಳಿದ್ದಾರೆ.
ಸೀತಾ ಟಾರ್ಚರ್: ರಾಮ್, ನಿಂಗಿದು ಬೇಕಿತ್ತಾ ಮಗನೇ..ವಾಪಸ್ ಹೊಂಟೋಗು ಶಿವನೇ..!
ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ದಶಕಗಳ ಕಾಲ ಮಿಂಚಿರುವ ನಟಿಯರು ಕಡಿಮೆಯೆಂದೇ ಹೇಳಬೇಕು. ಮಾಲಾಶ್ರೀ, ಸುಧಾರಾಣಿ, ಶ್ರುತಿ, ಅದಕ್ಕೂ ಮೊದಲು ಆರತಿ, ಭಾರತಿ, ಕಲ್ಪನಾ ಹೀಗೆ ಕೆಲವು ಕೆಲವು ನಟಿಯರು ಸ್ಯಾಂಡಲ್‌ವುಡ್ ಸಿನಿರಂಗದಲ್ಲಿ ದಶಕಗಳಿಗೂ ಹೆಚ್ಚು ಕಾಲ ಮಿಂಚಿದ್ದಾರೆ. ಆದರೆ ಇತ್ತೀಚೆಗೆ ರಮ್ಯಾ, ರಕ್ಷಿತಾ ಹಾಗು ರಾಧಿಕಾ ಬಿಟ್ಟರೆ ರಚಿತಾ ರಾಮ್ ಹೆಸರನ್ನು ಮಾತ್ರ ಹೇಳಬಹುದಷ್ಟೇ.
ಕರಾಳ ಸತ್ಯ ಹೇಳುತ್ತೇನೆ, ಹಲವರು ಸ್ವಇಚ್ಛೆಯಿಂದ್ಲೇ ಹಾಸಿಗೆ ಹಂಚಿಕೊಳ್ತಾರೆ; ಗಾಯತ್ರಿ ಗುಪ್ತಾ!
ಮಿಕ್ಕವರೆಲ್ಲಾ ಒಂದೋ ಎರಡೋ ಸಿನಿಮಾಗಳನ್ನು ಮಾಡಿ ಮೂಲೆಗುಂಪು ಆಗಿಬಿಡುತ್ತಾರೆ. ಅಥವಾ, ಕನ್ನಡ ಬಿಟ್ಟು ಪರಭಾಷೆ ಚಿತ್ರರಂಗಕ್ಕೆ ವಲಸೆ ಹೋಗುತ್ತಾರೆ. ಅದೇನೇ ಆಗಿರಲಿ, ದಿಯಾ ಚತ್ರದ ನಟಿ ಖುಷಿ ಹೇಳಿರುವುದರಲ್ಲಿ ಸತ್ಯವಂತೂ ಇದೆ ಎನ್ನಬಹುದು. ಸಂಭಾವನೆ ವಿಷಯದಲ್ಲಿ ಕನ್ನಡ ಚಿತ್ರೋದ್ಯಮ ಇನ್ನೂ ವೀಕ್ ಎನ್ನಬಹುದು. ಜೊತೆಗೆ, ಕಿರುತೆರೆ ಅಂದರೆ ಸೀರಿಯಲ್ ಇಂಡಸ್ಟ್ರಿ ವಿಷಯದಲ್ಲೂ ಅಷ್ಟೇ.
ದೇವಸ್ಥಾನದ ಪ್ರಸಾದಕ್ಕಾಗಿ ಕಾಯುತ್ತಿದ್ದ ರವಿ ಬಸ್ರೂರ್ ಲೈಫ್ ಟರ್ನಿಂಗ್ ಪಾಯಿಂಟ್ ಏನು?
ಕನ್ನಡ ಸೀರಿಯಲ್ ಲೋಕದಲ್ಲಿ ಸಂಭಾವನೆ ಕಮ್ಮಿ ಎಂಬ ಕಾರಣಕ್ಕೇ ನೆರೆಯ ತೆಲುಗು ಹಾಗು ತಮಿಳು ಕಿರುತೆರೆಗೆ ಜಂಪ್ ಆಗಿ ಅಲ್ಲಿಯೇ ಖಾಯಂ ಆಗಿ ನಟನೆ ಮಾಡುತ್ತಿರುವ ಬಹಳಷ್ಟು ಕನ್ನಡದ ಕಿರುತೆರೆ ಕಲಾವಿದರೂ ಇದ್ದಾರೆ. ಒಟ್ಟಿನಲ್ಲಿ, ದಿಯಾ ಬಳಿಕ ಖುಷಿ ಕನ್ನಡದಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿಲ್ಲ ಎನ್ನಬಹುದು.