ಟ್ರೋಲ್‌ ಆದ್ರು ರಾಮ-ಸೀತೆ; ನಿಂಗಿದು ಬೇಕಿತ್ತಾ ಮಗನೇ, ವಾಪಸ್ ಹೊಂಟೋಗು ಶಿವನೇ..!

By Shriram Bhat  |  First Published May 30, 2024, 3:05 PM IST

ಗಿಡ ಬೆಳಿದೇ ಇರೋ ಕಾಡು ಯಾವುದು? ಎಂದು ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಗೌಡ ರಾಮ್ ಅವರಿಗೆ ಪ್ರಶ್ನೆ ಕೇಳಿದ್ದಾರೆ. ಅವರು ತಮ್ಮ ಪಕ್ಕದಲ್ಲಿದ್ದವರಿಗೆ ಹೇಳಲು ಸನ್ನೆ ಮಾಡುತ್ತಾರೆ. ಅದನ್ನು ನೋಡಿದ ವೈಷ್ಣವಿ 'ಕಾಪಿ ಮಾಡ್ಬೇಡಿ ರಾಮ್' ಎಂದು ಹೇಳೀ ಅವರನ್ನು ಮಾತಿನಲ್ಲೇ ಕಟ್ಟಿ ಹಾಕುತ್ತಾರೆ.


ರಾಮ್, ನಿಮ್ಗೊಂದು ಪ್ರಶ್ನೆ.. ಗಿಡ ಬೆಳಿದೇ ಇರೋ ಕಾಡು ಯಾವುದು? ಎಂದು ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಗೌಡ ರಾಮ್ ಅವರಿಗೆ ಪ್ರಶ್ನೆ ಕೇಳಿದ್ದಾರೆ. ಅವರು ತಮ್ಮ ಪಕ್ಕದಲ್ಲಿದ್ದವರಿಗೆ ಹೇಳಲು ಸನ್ನೆ ಮಾಡುತ್ತಾರೆ. ಅದನ್ನು ನೋಡಿದ ವೈಷ್ಣವಿ 'ಕಾಪಿ ಮಾಡ್ಬೇಡಿ ರಾಮ್' ಎಂದು ಹೇಳೀ ಅವರನ್ನು ಮಾತಿನಲ್ಲೇ ಕಟ್ಟಿ ಹಾಕುತ್ತಾರೆ. ಆದರೆ, ಸತ್ಯವಾಗಿಯೂ ರಾಮ್‌ಗೆ ಉತ್ತರ ಹೊಳೆಯುವುದಿಲ್ಲ . ವೈಷ್ಣವಿ ಅಲ್ಲೇ ಪಕ್ಕದಲ್ಲಿದ್ದ ಇನ್ನೊಬ್ಬರಿಗೆ ಕೇಳಲು ಅವರು 'ಟೂಥ್‌ಬ್ರೆಶಾ' ಎನ್ನುತ್ತಾರೆ. ಅದಕ್ಕೆ ವೈಷ್ಣವಿ ಗೌಡ 'ಅಲ್ಲ ಅಲ್ಲ' ಎಂದು ರಾಮ್ ಉತ್ತರ ಹೇಳುತ್ತಾರೆ ನಿರೀಕ್ಷಿಸುತ್ತಾರೆ. 

ಪಕ್ಕದಲ್ಲಿದ್ದ ನಟಿಯೊಬ್ಬರು ರಾಮ್‌ಗೆ 'ನೀವು ದಿನಾ ತಗೊಂಡು ಹೋಗ್ತೀರಾ' ಎಂದು ಹಿಂಟ್ ಕೊಡುತ್ತಾರೆ. ಅದು ಇಲ್ದೇ ಜೀವನಾನೇ ನಡ್ಯಲ್ಲ ಅಂತ ಇನ್ನೂ ಒಂದು ಹಿಂಟ್ ಕೊಡುತ್ತಾರೆ. ಆದರೂ ರಾಮ್ ತಲೆ ಕೆರೆದುಕೊಳ್ಳುತ್ತಾರೆ. 'ನಮ್ ಮನೆ ಟೆರೆಸ್ಸಾ?' ಎಂದ ರಾಮ್‌ಗೆ 'ಅಲ್ಲ ಅಲ್ಲಾ' ಎನ್ನುವ ವೈಷ್ಣವಿಗೆ ರಾಮ್‌ ಕಡೆಯಿಂದ ಉತ್ತರ ಸಿಗುವುದಿಲ್ಲ. ನೋಡಿ, ನೀವೇನಾದ್ರೂ ನಟಿ ವೈಷ್ಣವಿ ಗೌಡ ಒಗಟಿಗೆ ಉತ್ತರ ಕೊಡ್ತೀರಾ ಅಂತ? ನಾವು ಉತ್ತರ ಕೊಟ್ರೆ ಅವ್ರು ನಮಗೇನು ಕೊಡ್ತಾರೆ ಅಂತ ಮಾತ್ರ ಕೇಳ್ಬೇಡಿ. ನೀವುಂಟು, ಅವರುಂಟು, ಪ್ರಶ್ನೆ ಅವರದ್ದು, ಉತ್ತರ ನಿಮ್ಮದು!

Tap to resize

Latest Videos

ಕರಾಳ ಸತ್ಯ ಹೇಳುತ್ತೇನೆ, ಹಲವರು ಸ್ವಇಚ್ಛೆಯಿಂದ್ಲೇ ಹಾಸಿಗೆ ಹಂಚಿಕೊಳ್ತಾರೆ; ಗಾಯತ್ರಿ ಗುಪ್ತಾ!

ಸೀತಾರಾಮ ಜನಪ್ರಿಯ ಧಾರಾವಾಹಿಯಲ್ಲಿ ನಟಿ ವೈಷ್ಣವಿ ಗೌಡ (Vaishnavi Gowda) ಹಾಗೂ ಗಗನ್ ಚಿನ್ನಪ್ಪ (Gagan Chinnappa) ಜೋಡಿಯಾಗಿ ನಟಿಸುತ್ತಿದ್ದಾರೆ. ರಾಮ್ ಪಾತ್ರದಲ್ಲಿ ಗಗನ್ ಅಮೋಘ ಎನಿಸುವ ನಟನೆ ಕೊಡುತ್ತಿದ್ದರೆ ವೈಷ್ಣವಿ ಗೌಡ ಅವನ ಜೋಡಿ ಸೀತೆಯಾಗಿ ಎಲ್ಲರ ಮನಗೆದ್ದಿದ್ದಾರೆ. ಈಗಂತೂ ಸೀತಾರಾಮ ಸೀರಿಯಲ್‌ ಸೆಟ್‌ನಲ್ಲಿ ನಡೆಯುವ ಪ್ರತಿಯೊಂದು ಮಾತುಕತೆ, ಆಟಪಾಠಗಳು ರೀಲ್ಸ್ ಆಗಿ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಹವಾ ಸೃಷ್ಟಿಸುತ್ತಿವೆ. 

ರವಿಚಂದ್ರನ್ 'ರಾಮಾಚಾರಿ'ಗೆ ಡೇಟ್ಸ್ ಕೊಡದೇ ಸತಾಯಿಸಿದ್ದರೇ ಮಾಲಾಶ್ರೀ?

ಗಗನ್ ಚಿನ್ನಪ್ಪ ಹಾಗೂ ವೈಷ್ಣವಿ ಗೌಡ ಸೀರಿಯಲ್‌ ಜೋಡಿ ಅದೆಷ್ಟು ಜನಪ್ರಿಯ ಆಗಿದ್ದಾರೆ ಎಂದರೆ, 'ನೀವಿಬ್ಬರೇ ರಿಯಲ್ ಲೈಫ್‌ನಲ್ಲೂ ಮದುವೆಯಾಗಿ' ಎಂದು ಅವರ ಬಹಳಷ್ಟು ಫ್ಯಾನ್ಸ್ ಗಳು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡತೊಡಗಿದ್ದಾರೆ. ಅದಕ್ಕೆ ವಾಪಸ್ ವೈಷ್ಣವಿ ಅಥವಾ ಗಗನ್ ಉತ್ತರ ನೀಡಿಲ್ಲ. ಆದರೆ, ಸೀತಾ ರಾಮ ಸೀರಿಯಲ್ ದಿನದನಕ್ಕೂ ವೀಕ್ಷಕರನ್ನು ಸೆಳೆಯುತ್ತ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. 

ಹಿಮಾಲಯಕ್ಕೆ ಹೊರಟ ರಜನಿಕಾಂತ್ ಮಾಧ್ಯಮಕ್ಕೆ ಹೇಳಿದ್ದೇನು? ಅಚ್ಚರಿ ಹೇಳಿಕೆ ವೈರಲ್!

ಸದ್ಯ ಸೀರಿಯಲ್ ಕಥೆ ಸಾಕಷ್ಟು ಟ್ವಿಸ್ಟ್ ಹಾಗು ಟರ್ನಿಂಗ್ ಪಾಯಿಂಟ್ ತೆಗೆದುಕೊಂಡು ವೀಕ್ಷಕರು ತಮ್ಮ ಮನೆಯ ಸೋಫಾದ ತುಟ್ಟತುದಿಗೆ ಜಾರುವಂತೆ ಮಾಡುವಲ್ಲಿ ಸಫಲವಾಗಿದೆ. ನಟಿ ವೈಷ್ಣವಿ ಗೌಡ ಅವರ ಪ್ರತಿಯೊಂದು ನಡೆ-ನುಡಿಯನ್ನೂ ಕಿರುತೆರೆ ವೀಕ್ಷಕರು ಗಮನಿಸಿ ಕಾಮೆಂಟ್ ಮೂಲಕ ಅವರಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದರೆ. ಅದೇನೇ ಇರಲಿ, ಈಗ ವೈಷ್ಣವಿ ಗೌಡ ಅವರ ಈ ಒಗಟಿಗೆ ಉತ್ತರ ಗೊತ್ತಿದ್ದರೆ ಕಾಮೆಂಟ್ ಮಾಡಿ, ವೈಷ್ಣವಿಯ ಮೆಚ್ಚುಗೆ ಗಳಿಸಿಕೊಳ್ಳಿ!

ಭೂಗತಲೋಕದ ಜತೆ ನಟಿ ನಗ್ಮಾಗೆ ಲಿಂಕ್; ಅಸಲಿಗೆ ಏನಾಗ್ತಿದೆ ಈ ಒಂಟಿ ನಟಿಯ ಕಥೆ?

click me!