ದೇವಸ್ಥಾನದ ಪ್ರಸಾದಕ್ಕಾಗಿ ಕಾಯುತ್ತಿದ್ದ ರವಿ ಬಸ್ರೂರ್ ಲೈಫ್ ಟರ್ನಿಂಗ್ ಪಾಯಿಂಟ್ ಏನು?

Published : May 30, 2024, 03:24 PM IST
ದೇವಸ್ಥಾನದ ಪ್ರಸಾದಕ್ಕಾಗಿ ಕಾಯುತ್ತಿದ್ದ ರವಿ ಬಸ್ರೂರ್ ಲೈಫ್ ಟರ್ನಿಂಗ್ ಪಾಯಿಂಟ್ ಏನು?

ಸಾರಾಂಶ

ಕಾಮತ್ ಎನ್ನುವ ವ್ಯಕ್ತಿಯೊಬ್ಬರು ರವಿ ಅವರನ್ನು ಅವೆನ್ಯೂ ರೋಡಿನಲ್ಲಿರುವ ಅಂಗಡಿಯೊಂದಕ್ಕೆ ಕರೆದುಕೊಂಡು ಹೋಗಿ, ಇವರು ಬೆಳ್ಳಿ ಬಂಗಾರದ ಕೆಲಸಗಳನ್ನೆಲ್ಲ ಮಾಡುತ್ತಾರೆ. ಆದರೆ, ಇವರಿಗೆ ಸಂಗೀತದ ಹುಚ್ಚು ಹಿಡಿದಿದೆ. ಅದೇನು ಮಾಡುತ್ತೀರೋ ನೋಡಿ..

ಕೆಜಿಎಫ್ ನಿರ್ದೇಶಕರಾದ ರವಿ ಬಸ್ರೂರ್ (Ravi Basrur) ಈಗ ಯಾರಿಗೆ ಗೊತ್ತಿಲ್ಲ? ರಾಕಿಂಗ್ ಸ್ಟಾರ್ ಯಶ್ ನಾಯಕತ್ವ, ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್ ಪಾರ್ಟ್ 1' ಹಾಗು 'ಕೆಜಿಎಫ್ ಪಾರ್ಟ್ 2' ಸಿನಿಮಾ ಸಂಗೀತ ನಿರ್ದೇಶಕರು ಯಾರೆಂದು ಕೇಳಿದರೆ ಥಟ್ಟನೇ 'ಅಯ್ಯೋ, ನಂಗೇನ್ ಗೊತ್ತಿಲ್ವಾ? ರವಿ ಬಸ್ರೂರ್' ಎಂಬ ಉತ್ತರ ಬರುತ್ತದೆ. ಅಷ್ಟರಮಟ್ಟಿಗೆ ಇಂದು ಕನ್ನಡದ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರ್ ಅವರು ಫೇಮಸ್. ಆದರೆ, ಮೊದಲೊಂದು ಕಾಲದಲ್ಲಿ ಇವರ ಲೈಫ್‌ ಜರ್ನಿ ನೋಡಿದರೆ 'ಅಯ್ಯೋ, ದೇವ್ರೇ, ಇಂಥಾ ಪರಿಸ್ಥಿತಿ ಇತ್ತಾ ಇವ್ರಿಗೆ' ಎಂದು ಮನಸ್ಸು ಕರಗಿ ಮರುಗತೊಡಗುತ್ತದೆ.  

ಹೌದು, ರವಿ ಬಸ್ರೂರ್ ಅವರು ಸಂಗೀತ ನಿರ್ದೇಶಕರಾಗಿ ಈ ಮಟ್ಟಿಗೆ ಹೆಸರು ಮಾಡುವ ಮೊದಲು ಬಹಳಷ್ಟು ಕಷ್ಟ ಪಟ್ಟಿದ್ದಾರೆ. ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡ್‌ನಲ್ಲಿ ಮೂರು-ನಾಲ್ಕು ದಿನಗಳು ಊಟ-ತಿಂಡಿ ಇಲ್ಲದೇ ಇದ್ದರಂತೆ. ಹಾಗೇ ಹತ್ತಿರದ ದೇವಸ್ಥಾನಗಳಲ್ಲಿ ಯಾವತ್ತು ಪ್ರಸಾದ ಸಿಗುತ್ತದೆ ಎಂಬುದನ್ನು ತಿಳಿದುಕೊಂಡಿದ್ದರಂತೆ. ಅಷ್ಟೇ ಅಲ್ಲ, ಯಾವ ದೇವಸ್ಥಾನದಲ್ಲಿ ಯಾವತ್ತು ಯಾವ ಥರದ ಪ್ರಸಾದ ಸಿಗುತ್ತದೆ ಎಂದು ಒಂದು ಡೈರಿಯಲ್ಲಿ ಬರೆದು ಇಟ್ಟುಕೊಂಡಿದ್ದರಂತೆ. 

ಸೀತಾ ಟಾರ್ಚರ್: ರಾಮ್, ನಿಂಗಿದು ಬೇಕಿತ್ತಾ ಮಗನೇ..ವಾಪಸ್ ಹೊಂಟೋಗು ಶಿವನೇ..!

ಕಾಮತ್ ಎನ್ನುವ ವ್ಯಕ್ತಿಯೊಬ್ಬರು ರವಿ ಅವರನ್ನು ಅವೆನ್ಯೂ ರೋಡಿನಲ್ಲಿರುವ ಅಂಗಡಿಯೊಂದಕ್ಕೆ ಕರೆದುಕೊಂಡು ಹೋಗಿ, ಇವರು ಬೆಳ್ಳಿ ಬಂಗಾರದ ಕೆಲಸಗಳನ್ನೆಲ್ಲ ಮಾಡುತ್ತಾರೆ. ಆದರೆ, ಇವರಿಗೆ ಸಂಗೀತದ ಹುಚ್ಚು ಹಿಡಿದಿದೆ. ಅದೇನು ಮಾಡುತ್ತೀರೋ ನೋಡಿ ಎಂದು ಹೇಳಿ ಅಲ್ಲಿ ಅವರ ಜೊತೆ ಬಿಟ್ಟರಂತೆ. ಅಂಗಡಿಯವರು 5 ರೂಪಾಯಿ ರವಿಯವರ ಕೈಗಿಟ್ಟು, ಏನಾದ್ರೂ ತಿಂದುಕೊಂಡು ಬಾ. ನೀನು ಮುಂದೆ ತುಂಬಾ ದೊಡ್ಡ ವ್ಯಕ್ತಿ ಆಗ್ತೀಯಾ' ಎಂದರಂತೆ. ಅದಕ್ಕೆ ರವಿ ಬಸ್ರೂರ್ ಅವರು 'ನನಗೆ ಜಾತಕ ನೋಡಿ ಹೇಳೋದು ಬೇಡ, ನಂಗೆ ಮ್ಯೂಸಿಕ್ ಅಷ್ಟೇ ಬೇಕು' ಅಂದಿದ್ರಂತೆ. 

ಕರಾಳ ಸತ್ಯ ಹೇಳುತ್ತೇನೆ, ಹಲವರು ಸ್ವಇಚ್ಛೆಯಿಂದ್ಲೇ ಹಾಸಿಗೆ ಹಂಚಿಕೊಳ್ತಾರೆ; ಗಾಯತ್ರಿ ಗುಪ್ತಾ!

ಅದಕ್ಕೆ ಆ ಅಂಗಡಿಯವರು ಒಂದು ಸಾವಿರ ರೂಪಾಯಿ ಕೊಟ್ಟು 'ಇದರಲ್ಲಿ ಅದೇನು ತಗೋತಿಯೋ ತಗೋ. ಕೀ ಬೋರ್ಡ್ ಅಥವಾ ನಿನಗೇನು ಬೇಕೋ ಅದು' ಎಂದಿದ್ರಂತೆ. ಆವತ್ತು ಆ ವ್ಯಕ್ತಿಯ ಸಹಾಯ ಪಡೆದು ಸಂಗೀತ ಕಲಿತು, ತಮ್ಮ ಸಾಧನೆಯನ್ನು ಮಾಡುತ್ತಾ ಬಂದ ರವಿ ಬಸ್ರೂರು ಇಂದು ಜಗತ್ತೇ ಅವರ ಕಡೆ ನೋಡುವಂತೆ ಬೆಳೆದು ನಿಂತಿದ್ದಾರೆ. ಸಾಧನೆಯ ಹಸಿವು ಇದ್ದರೆ ಸಾಧಿಸುವ ಛಲವೊಂದಿದ್ದರೆ ಏನು ಬೇಕಾದ್ರೂ ಸಾಧಿಸಬಹುದು ಎಂದು ಇಡೀ ಪ್ರಪಂಚಕ್ಕೇ ತೋರಿಸಿಕೊಟ್ಟಿದ್ದಾರೆ ಸಂಗೀತ ಮಾಂತ್ರಿಕ ರವಿ ಬಸ್ರೂರು. 

ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ 'ಪುಷ್ಪ 2' ಕಪಲ್ ಸಾಂಗ್‌ ಬೊಂಬಾಟ್ ಅಂತಿದಾರೆ!

ಅಂದಹಾಗೆ, ಸಂಗೀತ ನಿರ್ದೇಶಕ ರವಿ ಬಸ್ರೂರು ಮೂಲ ಹೆಸರು ಕಿರಣ್ ಬಸ್ರೂರ್. ಆದರೆ, ತಮಗೆ ಅಂದು ಒಂದು ಸಾವಿರ ಹಣ ನೀಡಿ, ಕೀ-ಬೋಡ್‌ ತೆಗೆದುಕೊಂಡು ಇಂತಹ ಸಾಧನೆ ಮಾಡಲು ಕಾರಣರಾದ ವ್ಯಕ್ತಿಯ 'ರವಿ' ಎಂಬ ಹೆಸರನ್ನೇ ಕಿರಣ್ ಇಟ್ಟುಕೊಂಡರಂತೆ. ಅಭಿಮಾನ ಅಂದ್ರೆ ಈ ಮಟ್ಟಿಗೂ ಇರಬಹುದು ಎಂಬುದನ್ನು ರವಿ ಬಸ್ರೂರ್ ತಮ್ಮ ಹೆಸರನ್ನೇ ಬದಲಾಯಿಸಿಕೊಳ್ಳುವ ಮೂಲಕ ತೋರಿಸಿಕೊಟ್ಟರು ಎನ್ನಬಹುದೇ? 

ರವಿಚಂದ್ರನ್ 'ರಾಮಾಚಾರಿ'ಗೆ ಡೇಟ್ಸ್ ಕೊಡದೇ ಸತಾಯಿಸಿದ್ದರೇ ಮಾಲಾಶ್ರೀ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್