ಬಾಲಿವುಡ್ ಸುಲ್ತಾನ್ ಸಲ್ಮಾನ್ ಚಿತ್ರದಲ್ಲಿ ನಮ್ಮ 'ಕಾಮಿಡಿ ಕಿಲಾಡಿ'ಗಳು!

Published : Nov 22, 2019, 12:33 PM IST
ಬಾಲಿವುಡ್ ಸುಲ್ತಾನ್ ಸಲ್ಮಾನ್ ಚಿತ್ರದಲ್ಲಿ ನಮ್ಮ 'ಕಾಮಿಡಿ ಕಿಲಾಡಿ'ಗಳು!

ಸಾರಾಂಶ

ಸಲ್ಲು-ಕಿಚ್ಚ ಕಾಂಬಿನೇಷನ್‌ನ ಬಹು ನಿರೀಕ್ಷಿತ ಚಿತ್ರ 'ದಬಾಂಗ್-3' ಕನ್ನಡ ವರ್ಷನ್‌ಗೆ ಕಾಮಿಡಿ ಕಿಲಾಡಿಗಳು ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಯಾವ ರೀತಿ? ಬಾಲಿವುಡ್‌ನ ಈ ಚಿತ್ರಕ್ಕೆ ಇವರ ಕೊಡುಗೆ ಏನು?

 

ಬಾಲಿವುಡ್ ಬಾಕ್ಸ್‌ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಹಾಗೂ ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ದಬಾಂಗ್-3' ಚಿತ್ರದ ಕನ್ನಡ ವರ್ಷನ್‌ ಡಬ್ಬಿಂಗ್ ಪ್ರಾರಂಭವಾಗಿದೆ.

ಸಲ್ಮಾನ್ ಖಾನ್ ಬೇರ್ ಬಾಡಿಯಲ್ಲಿ ಫೈಟ್ ಮಾಡುವ ಸೀನ್ ರಿವೀಲ್?

 

ಜೀ ಕನ್ನಡದ ಟಾಪ್ ರೇಟೆಡ್ ರಿಯಾಲಿಟಿ ಶೋ 'ಕಾಮಿಡಿ ಕಿಲಾಡಿಗಳು' ಸ್ಪರ್ಧಿಗಳಾದ ಶಿವರಾಜ್‌.ಕೆ.ಆರ್.ಪೇಟೆ, ದಿವ್ಯಾ ಹಾಗೂ ಗೋವಿಂದೇ ಗೌಡ ದಬಾಂಗ್‌-3 ಚಿತ್ರದಲ್ಲಿರುವ ಪ್ರಮುಖ ಪಾತ್ರಗಳಿಗೆ ಧ್ವನಿ ನೀಡಿದ್ದಾರೆ.

 

ಕನ್ನಡ ವರ್ಷನ್‌ಗೆ ಯಾರ ಧ್ವನಿ ಸೂಕ್ತವಾಗುತ್ತದೆ ಎಂದು ಚಿತ್ರತಂಡ ಯೋಚಿಸಿ ಇವರನ್ನು ಆಯ್ಕೆ ಮಾಡಿದೆ. ಅಷ್ಟೇ ಅಲ್ಲದೇ ವೀಣಾ ಸುಂದರ್, ಚಂದ್ರಕಲಾ ಹಾಗೂ ರವಿಶಂಕರ್ ಗೌಡ ಸೇರಿ ಹಲವರು ಕಲಾವಿದರು ಈ ಚಿತ್ರಕ್ಕೆ ದನಿಯಾಗಿದ್ದಾರೆ. 

ಖ್ಯಾತ ನಟನ ಪತ್ನಿಗೆ ಕಿಚ್ಚ ಸುದೀಪ್ ಫಿದಾ!

 

ಈ ಹಿಂದೆ ಟ್ರೇಲರ್ ಲಾಂಚ್ ಕಾರ್ಯಕ್ರಮ ಮುಂಬೈನ ಖಾಸಗಿ ಹೊಟೇಲ್‌ನಲ್ಲಿ ನಡೆಸಲಾಗಿದ್ದು ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹಾ ಹಾಗೂ ಇನ್ನಿತರ ಪ್ರಮುಖ ಪಾತ್ರಧಾರಿಗಳು ಭಾಗಿಯಾಗಿದ್ದರು.

 

ಹಿಂದಿ ಹಾಗೂ ಕನ್ನಡದ ಜತೆಗೆ ಡಬಾಂಗ್-3 ಬಹು ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ಚಿತ್ರ. ಆ ಕಾರಣಕ್ಕಾಗಿಯೇ ಅದರ ಎಲ್ಲ ಅವತರಣಿಕೆಯ ಟ್ರೇಲರ್ ಸಹ ಲಾಂಚ್ ಆಗಿದೆ.

ಸಲ್ಲು ಭಾಯ್ ವಿರುದ್ಧ ತೊಡೆ ತಟ್ಟಿದ ಸುದೀಪ್; ಅರೇ ಏನಾಯ್ತು ಕಿಚ್ಚನಿಗೆ?

 

ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು, ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಹಾಗೂ ಸ್ನೇಹಿತ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಜತೆ ಜತೆಯಾಗಿ ನಟಿಸುತ್ತಿರುವುದರಿಂದ ಮತ್ತಷ್ಟು ಕೂತೂಹಲ ಕೆರಳಿಸಿದೆ. ಈಗಾಗಲೇ ಈ ಚಿತ್ರ ತಂಡ ವಿಭಿನ್ನ ಶೈಲಿಯಲ್ಲಿ ಚಿತ್ರ ಪ್ರಚಾರ ಆರಂಭಿಸಿದೆ.

 

ಅಲ್ಲದೇ ಕನ್ನಡ ಚಿತ್ರದಲ್ಲಿಯೂ ನಟಿಸಬೇಕೆಂಬ ಆಸೆ ಇದೆ ಎಂದು ಸಲ್ಮಾನ್ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Sankeerthana Movie: ಈ ವಯಸ್ಸಿನಲ್ಲೂ ಸಿನಿಮಾ ಮಾಡಿ ಯಶಸ್ವಿಯಾದ ಸೀತಾರಾಮ ಧಾರಾವಾಹಿ ಅಜ್ಜಿ
ಸದುದ್ದೇಶದಿಂದ ಗಂಡ ತೀರಿಕೊಂಡ ಮಹಿಳೆಯನ್ನು ಮದುವೆಯಾಗಿರೋ Su From So Movie ಬಾವ; ಇದು ಅರೇಂಜ್‌ ಮ್ಯಾರೇಜ್