ಪುನೀತ್, ಶಿವಣ್ಣ, ರಾಘವೇಂದ್ರ ರಾಜ್‌ಕುಮಾರ್ ಒಂದೇ ಸಿನಿಮಾದಲ್ಲಿ?

Published : Apr 13, 2019, 01:19 PM IST
ಪುನೀತ್, ಶಿವಣ್ಣ, ರಾಘವೇಂದ್ರ ರಾಜ್‌ಕುಮಾರ್ ಒಂದೇ ಸಿನಿಮಾದಲ್ಲಿ?

ಸಾರಾಂಶ

ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಶಿವರಾಜ್ ಕುಮಾರ್ ಒಟ್ಟಿಗೆ ಒಂದೇ ಸಿನಿಮಾದಲ್ಲಿ | ಪಿಆರ್‌ಕೆ ನಿರ್ಮಾಣದಲ್ಲಿ ಬರಲಿದೆ ಚಿತ್ರ 

ಬೆಂಗಳೂರು (ಏ. 13): ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಹಾಗೂ  ರಾಘವೇಂದ್ರ ರಾಜ್ ಕುಮಾರ್ ಒಟ್ಟಿಗೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಅಭಿಮಾನಿಗಳ ಆಸೆ ಈಡೇರುವ ಕಾಲ ಹತ್ತಿರವಾಗಿದೆ. 

ಸ್ಯಾಂಟೋರಿನಿಯಲ್ಲಿ ಸುಧಾರಾಣಿ ಹಾಲಿಡೇ ಮಜಾ; ಇಲ್ಲಿವೆ ಫೋಟೋಗಳು!

ಈ ಮೂವರು ಸೇರಿ ಒಟ್ಟಿಗೆ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಶಿವಣ್ಣ ಹಾಗೂ ರಾಘವೇಂದ್ರ ರಾಜ್ ಕುಮಾರ್ ’ಆಸೆಗೊಬ್ಬ-ಮೀಸೆಗೊಬ್ಬ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಆದರೆ ಮೂರು ಜನ ಇದುವರೆಗೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ. 

ಮೋದಿ ಪರ ಪ್ರಚಾರ ಶುರು ಮಾಡಿದ್ರಾ ದೀಪಿಕಾ-ರಣವೀರ್?

ಪುನೀತ್ ರಾಜ್ ಕುಮಾರ್ ಒಡೆತನದ ಪಿ ಆರ್ ಕೆ ಸಂಸ್ಥೆಯ ನಿರ್ಮಾಣದಡಿ ಮೂವರು ಒಂದಾಗುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಮೂವರಿಗೂ ಇಷ್ಟವಾಗುವ ಕಥೆಗಾಗಿ ಹುಡುಕಾಟ ನಡೆಸಲಾಗಿದ್ದು, ಸೂಕ್ತ ಕಥೆ ಸಿಕ್ಕ ಕೂಡಲೇ ಅನೌನ್ಸ್ ಮಾಡಲಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?