
ಕನ್ನಡ ಚಿತ್ರರಂಗದ ಬೇಡಿಕೆಯ ಹಾಸ್ಯ ನಟ ಚಿಕ್ಕಣ್ಣ. 'ರಾಜಹುಲಿ' ಚಿತ್ರದ ನಂತರ ಚಿಕ್ಕಣ್ಣ ಮಾಡಿರುವ ಸಿನಿಮಾಗಳು ಸ್ಟಾರ್ ನಟರ ಜೊತೆಗೆ. ಇನ್ನೂ ಸರಿಯಾಗಿ ಹೇಳಬೇಕೆಂದರೆ ಚಿಕ್ಕಣ್ಣ ಇದ್ದರೆ ಸ್ಟಾರ್‌ಗಳ ಸಿನಿಮಾದ ಹಾಸ್ಯ ಭಾಗಕ್ಕೆ ಒಂದೊಳ್ಳೆ ಬೆಲೆ. ಜನತಾ ಕರ್ಫ್ಯೂನಿಂದ ಕನ್ನಡ ಚಿತ್ರರಂಗ ಸೆಲ್ಫ್ ಲಾಕ್‌ಡೌನ್ ವಿಧಿಸಿಕೊಂಡಿದೆ. ಹೀಗಾಗಿ ಚಿಕಣ್ಣ ತಮ್ಮ ತೋಟದ ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ.
ಚಿಕ್ಕಣ್ಣ ಹೀರೋ ಆಗಿರುವ ಸಿನಿಮಾ ಹೆಸರು 'ಉಪಾಧ್ಯಕ್ಷ'!
ಹಾಗಂತ ಅವರು ಚಿತ್ರರಂಗದಿಂದ ದೂರವಾಗಿಲ್ಲ. ಈ ಬಿಡುವಿನ ವೇಳೆಯಲ್ಲಿ ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್‌ನಲ್ಲಿ ವಾಸ್ತವ್ಯ ಹೂಡಿರುವ ಚಿಕ್ಕಣ್ಣ, ಅಲ್ಲಿ ತಾವೇ ಕಟ್ಟಿಸುತ್ತಿರುವ ಮನೆಯ ಶೌಚಾಲಯದ ಕೊಠಡಿಯ ಗಾರೆ ಕೆಲಸ ಮಾಡುತ್ತಿದ್ದಾರೆ. ಚಿತ್ರರಂಗಕ್ಕೆ ಬರುವ ಮುನ್ನ ನಟ ಚಿಕ್ಕಣ್ಣ ಗಾರೆ ಕೆಲಸ ಮಾಡುತ್ತಿದ್ದರು. ಈಗ ಮತ್ತೆ ಹಳೆಯ ವೃತ್ತಿಗೆ ಮರಳಿದ್ದಾರೆ. ತಮ್ಮ ಮನೆ ಶೌಚಾಲಯವನ್ನು ತಾವೇ ಕಟ್ಟುವ ಮೂಲಕ ಗಮನ ಸೆಳೆದಿದ್ದಾರೆ.
"
ತೋಟದ ಮನೆ ನೋಡಿಕೊಂಡು ಚಿಕ್ಕಣ್ಣ ಕಾಲ ಕಳೆಯುತ್ತಿದ್ದಾರೆ ಎಂದುಕೊಳ್ಳಬೇಡಿ. ಇದರ ಜೊತೆಗೆ ಕೊರೋನಾದಿಂದ ಹೋಮ್ ಐಸೋಲೇಶನ್ ಆಗಿ, ಊಟದ ಸಮಸ್ಯೆ ಎದುರಿಸುತ್ತಿರುವವರಿಗೆ ತಾವೇ ಅಡುಗೆ ಮಾಡಿ ವಿತರಣೆ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಣ್ಣಪುಟ್ಟ ಸೇವೆ ಆದರೂ ಚಿಂತೆ ಇಲ್ಲ ಜನರ ಕಷ್ಟಕಾಲದಲ್ಲಿ ಜೊತೆಯಾಗಿ ನಿಲ್ಲಬೇಕು ಎಂಬುದು ಚಿಕ್ಕಣ್ಣ ಮಾತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.