ಲವ್‌ ಮಾಕ್‌ಟೇಲ್‌ 2 ಹಾಡಿಗೆ ಮಿಲನಾ ಡ್ಯಾನ್ಸ್‌; ವಿಡಿಯೋ ವೈರಲ್!

Published : May 06, 2021, 09:01 AM IST
ಲವ್‌ ಮಾಕ್‌ಟೇಲ್‌ 2 ಹಾಡಿಗೆ ಮಿಲನಾ ಡ್ಯಾನ್ಸ್‌; ವಿಡಿಯೋ ವೈರಲ್!

ಸಾರಾಂಶ

ಲವ್‌ ಮಾಕ್‌ಟೇಲ್‌ 2 ಚಿತ್ರದ ‘ಈ ಪ್ರೇಮ ನಿನ್ನ ಕೊಡುಗೆ ನನಗೆ’ ಹಾಡಿಗೆ ಮಿಲನಾ ನಾಗರಾಜ್‌ ಸೇರಿದಂತೆ ಲವ್‌ ಮಾಕ್‌ಟೇಲ್‌ 1 ಹಾಗೂ ಲವ್‌ ಮಾಕ್‌ಟೇಲ್‌ 2 ಚಿತ್ರದ ನಟಿಯರೆಲ್ಲ ಹೆಜ್ಜೆ ಹಾಕಿದ್ದಾರೆ. 

ಅಮೃತಾ ಅಯ್ಯಂಗಾರ್‌, ರಾಚೆಲ್‌ ಡೇವಿಡ್‌, ರಚನಾ ಇಂದರ್‌ ಮತ್ತಿತರ ನಟಿಯರು ಮೈ ಬಳುಕಿಸಿದ್ದಾರೆ. ಲಾಕ್‌ಡೌನ್‌ ಡೈರೀಸ್‌ ಅನ್ನೋ ಹ್ಯಾಶ್‌ಟ್ಯಾಗ್‌ನಲ್ಲಿ ಈ ಡ್ಯಾನ್ಸ್‌ನ ವೀಡಿಯೋವನ್ನು ಮಿಲನಾ ನಾಗರಾಜ್‌ ಅಪ್‌ಲೋಡ್‌ ಮಾಡಿದ್ದಾರೆ. ಕಳೆದ ಲಾಕ್‌ಡೌನ್‌ನಲ್ಲಿ ಸಾಕಷ್ಟುಮಂದಿ ಸಿನಿಮಾ ತಾರೆಯರು ಮನೆಯಲ್ಲಿ ಮೊಬೈಲ್‌ನಲ್ಲೇ ಹಾಡು, ವೀಡಿಯೋಗಳನ್ನು ಚಿತ್ರೀಕರಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಯಬಿಟ್ಟಿದ್ದರು. ಇದೂ ಆ ಥರದ ಪ್ರಯತ್ನ. ಈ ಬಗ್ಗೆ ಮಾತನಾಡಿದ ನಟಿ ಮಿಲನಾ ನಾಗರಾಜ್‌, ‘ಎಲ್ಲರೂ ಮನೆಯಲ್ಲಿದ್ದುಕೊಂಡೇ ಮೊಬೈಲ್‌ ಮೂಲಕ ಈ ಹಾಡಿಗೆ ಡ್ಯಾನ್ಸ್‌ ಮಾಡಿದೆವು. ಡಾರ್ಲಿಂಗ್‌ ಕೃಷ್ಣ ಅವರು ಎಡಿಟಿಂಗ್‌ ಮಾಡಿದರು. ಸ್ವಲ್ಪ ದಿನಗಳ ಹಿಂದೆ ರಿಲೀಸ್‌ ಆಗಿರುವ ಹಾಡಿಗೆ ಇನ್ನಷ್ಟುಪ್ರಚಾರ ಕೊಡೋಣ ಎನ್ನುವ ನಿಟ್ಟಿನಲ್ಲಿ ಈ ಹಾಡು’ ಎಂದರು.

ಮಿಲನಾ ನಾಗರಾಜ್‌ ರಿಯಲ್ ಲೈಫ್‌ ಸ್ಟೋರಿ ತೆರೆ ಮೇಲೆ; 'ಮಿಲಿ'ಗೆ ಕೃಷ್ಣ ನಿರ್ದೇಶನ! 

ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ನಿರ್ಮಾಣದ ಲವ್‌ ಮಾಕ್‌ಟೇಲ್‌ 2 ಚಿತ್ರದಲ್ಲಿ ಡಾರ್ಲಿಂಗ್‌ ಕೃಷ್ಣ ಜೊತೆಗೆ ರಾಚೆಲ್‌ ನಾಯಕಿಯಾಗಿದ್ದಾರೆ. ಕಳೆದ ವಾರ ರಿಲೀಸ್‌ ಆಗಿರುವ ‘ಈ ಪ್ರೇಮ’ ಹಾಡನ್ನು ರಾಘವೇಂದ್ರ ಕಾಮತ್‌ ಬರೆದಿದ್ದು ರಮ್ಯಾ ಗಾಯಕಿಯಾಗಿದ್ದಾರೆ. ನಕುಲ್‌ ಅಭಯಂಕರ್‌ ಸಂಗೀತವಿದೆ. ಈ ಚಿತ್ರದ ಕೊನೆಯ ಹಂತದ ಚಿತ್ರೀಕರಣವಷ್ಟೇ ಬಾಕಿ ಇದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ