ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ 'ಕನ್ನಡತಿ' ರಂಜನಿ ರಾಘವನ್‌; ಫೋಟೋ ನೋಡಿ!

By Suvarna News  |  First Published Dec 23, 2020, 12:22 PM IST

ಕಿರುತೆರೆಯಲ್ಲಿ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲೂ ಬ್ಯುಸಿಯಾಗಿರುವ ರಂಜನಿ ರಾಘವನ್‌ PDO ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸ್ವತಃ ರಂಜನಿ ಶೇರ್ ಮಾಡಿಕೊಂಡಿರುವ ಈ ಫೋಟೋ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.


ಕಲರ್ಸ್‌ ಕನ್ನಡ 'ಕನ್ನಡತಿ' ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಭೂವಿ ಅಲಿಯಾಸ್‌ ರಂಜನಿ ರಾಘವನ್‌ ಈಗ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ದೂದ್‌ ಪೇಡಾ ದಿಗಂತ್‌ ಜೊತೆ 'ನಿಮ್ಮ ಖಾತೆಯಲ್ಲಿ ಹಣವಿಲ್ಲ' ಚಿತ್ರದಲ್ಲಿ ಅಭಿನಯಿಸುವ ಜತೆಗೆ ಮತ್ತೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲದೇ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿ ಪರ ಬಾಗಲಕೋಟೆಯಲ್ಲಿ ಪ್ರಚಾರ ಮಾಡಿಯೂ ಸದ್ದು ಮಾಡಿದ್ದರು ರಂಜನಿ.

Tap to resize

Latest Videos

ಬೆಲ್ ಬಾಟಂ ನಿರ್ದೇಶಕ ಜಯತೀರ್ಥ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ 'ಆಪರೇಷನ್ ಅಲಮೇಲಮ್ಮ' ಚಿತ್ರ ಖ್ಯಾತಿಯ ರಿಷಿ ಜೊತೆ ಕನ್ನಡತಿ ರಂಜನಿ ನಟಿಸುತ್ತಿದ್ದಾರೆ. ಚಿತ್ರದ ಮೇಕಿಂಗ್ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 

ರಂಜನಿ ಪೋಸ್ಟ್‌:
ಸಿನಿಮಾ,ಧಾರಾವಾಹಿ ಹಾಗೂ ಫೋಟೋಶೂಟ್‌ ಬಗ್ಗೆ ಅಪ್ಡೇಟ್‌ ನೀಡುವ ರಂಜನಿ ಇನ್‌ಸ್ಟಾಗ್ರಾಂನಲ್ಲಿ ಪಿಡಿಓ ಅಧಿಕಾರಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.  'ತುಂಬಾ Exciting ನ್ಯೂಸ್‌ ಶೀಘ್ರದಲ್ಲೇ ರಿವೀಲ್ ಮಾಡುತ್ತೇನೆ. ಹೊಸ ಪ್ರಾಜೆಕ್ಟ್‌' ಎಂದು ಬರೆದುಕೊಂಡಿದ್ದಾರೆ.

ಧಾರಾವಾಹಿಯಲ್ಲಿ ರಂಜನಿಯನ್ನು ಸಾಂಪ್ರದಾಯಿಕ ಉಡುಗೆಯಲ್ಲಿ ಕಂಡು ವೀಕ್ಷಕರಿಗೆ ಆಕೆಯನ್ನು ಅದೇ ಲುಕ್‌ನಲ್ಲಿ ಆನ್‌ಸ್ಕ್ರೀನ್ ನೋಡಿದರೂ ತುಂಬಾನೇ ಕನೆಕ್ಟ್‌ ಆಗುತ್ತಾರೆ. ಬಿಳಿ ಹಾಗೂ ಕೆಂಪು ಬಣ್ಣದ ಸೀರೆಗೆ ಕಪ್ಪು ಬಣ್ಣದ ಬ್ಲೌಸ್‌ ಧರಿಸಿರುವ ವಸ್ತ್ರ ಹೆಣ್ಣು ಮಕ್ಕಳ ಗಮನ ಸೆಳೆದಿದೆ. ಒಟ್ಟಿನಲ್ಲಿ ರಂಜನಿಗೆ 2020 ತುಂಬಾನೇ ಲಕ್ಕಿ ವರ್ಷ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ರಂಜನಿ ಅಡಕೆ ಸುಲಿದ ವೀಡಿಯೋವೊಂದನ್ನು ಶೇರ್ ಮಾಡಿ ಕೊಂಡಿದ್ದರು. ಅದು ಫುಲ್ ವೈರಲ್ ಆಗಿತ್ತು.

 

click me!