ಕಿರುತೆರೆಯ 'ರಾಣಿ' ಈಗ ಬೆಳ್ಳಿತೆರೆಗೆ: ಅಮ್ಮ ಮಗಳ ಬಾಂಧವ್ಯಕ್ಕೆ ಜೀವ ತುಂಬಿದ್ದ ಧನ್ವಿಯ ಪಾತ್ರ ಯಾವುದು?

Published : Oct 21, 2026, 06:17 PM IST
Dhanvi acting Shabari movie met siddaganga swamiji

ಸಾರಾಂಶ

ಕಲರ್ಸ್ ಕನ್ನಡದ 'ರಾಣಿ' ಧಾರಾವಾಹಿ ಖ್ಯಾತಿಯ ಬಾಲನಟಿ ಧನ್ವಿ 'ಶಬರಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾಳೆ. ಅಪ್ಪ-ಮಗಳ ಬಾಂಧವ್ಯ ಸಾರುವ ಈ ಚಿತ್ರತಂಡವು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದೆ. ಈ ಸಿನಿಮಾ ಇದೇ ತಿಂಗಳ 23ರಂದು ಬಿಡುಗಡೆಯಾಗಲಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ರಾಣಿ' ಧಾರಾವಾಹಿಯ ಬಾಲನಟಿ ಧನ್ವಿ ಇದೀಗ ಸಿನಿಮಾಗೆ ಕಾಲಿಟ್ಟಿದ್ದಾಳೆ. ಕಿರುತೆರೆಯಲ್ಲಿ ರಾಣಿಯಾಗಿ ಧಾರಾವಾಹಿಯಲ್ಲಿ ಅದ್ಭುತವಾಗಿ ನಟಿಸುತ್ತಿರುವ ಧನ್ವಿಗೆ ಬೆಳ್ಳಿತೆರೆಯ ಬಾಗಿಲು ತೆರೆದಿದೆ. ಇಲ್ಲಿ ತಾಯಿ-ಮಗಳ ಬಾಂಧವ್ಯಕ್ಕೆ ಜೀವ ತುಂಬಿದ ರಾಣಿ, ಶಬರಿ ಸಿನಿಮಾದಲ್ಲಿ ಅಪ್ಪ-ಮಗಳ ಬಾಂಧವ್ಯಕ್ಕೆ ಸಾಕ್ಷಿಯಾಗಲಿದ್ದಾಳೆ. ಇದೀಗ ಶಬರಿ ಚಿತ್ರತಂಡವು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದಿದ್ದಾರೆ.

'ಒರಟ ಐ ಲವ್ ಯು' ಚಿತ್ರ ಖ್ಯಾತಿಯ ನಿರ್ದೇಶಕ ಒರಟ ಶ್ರೀ ನಿರ್ದೇಶಿಸಿರುವ ‘ಶಬರಿ’ ಚಲನಚಿತ್ರ ತಂಡದವರು ಸೋಮವಾರ ಬೆಳಗ್ಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಅಲ್ಲದೆ ಡಾ. ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಸಂಬಂಧಗಳ ಸೇತುವೆ ಕಟ್ಟುವ ಸಿನಿಮಾ ನಿರ್ಮಾಣವಾಗಲಿ

ಈ ವೇಳೆ ಶಬರಿ ಚಿತ್ರದ ಭಿತ್ತಿಪತ್ರ ಬಿಡುಗಡೆ ಮಾಡಿದ ಸ್ವಾಮೀಜಿ, ಇಂದು ಮನುಷ್ಯ ಸಂಬಂಧಗಳ ನಡುವೆ ಕಂದಕಗಳು ನಿರ್ಮಾಣವಾಗಿ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ತಂದೆ-ಮಗಳ ಬಾಂಧವ್ಯದ ಮಹತ್ವ ಹೊಂದಿರುವ ಕಥೆ ಒಳಗೊಂಡ ಶಬರಿ ಚಿತ್ರವು ಕೌಟುಂಬಿಕ ಸಾಮರಸ್ಯ ಸಾರುವ ಚಿತ್ರವಾಗಿದೆ. ಇವತ್ತಿನ ದಿನಮಾನದಲ್ಲಿ ಜನರಲ್ಲಿ, ಸಮಾಜದಲ್ಲಿ ಬಾಂಧವ್ಯ ಬೆಸೆಯುವ, ಭಾವೈಕ್ಯತೆಯ ಭಾವನೆ ಬಿತ್ತುವ ಕೆಲಸ ಆಗಬೇಕು. ತಂದೆ-ಮಗಳು, ಗಂಡ-ಹೆಂಡತಿ, ಬಂಧು ಬಳಗದ ನಡುವೆ ಬಿರುಕು ಹೆಚ್ಚಾಗುತ್ತಿದೆ. ಸಂಬಂಧಗಳ ನಡುವಿನ ಬಿರುಕು ಹೋಗಲಾಡಿಸಿ ಸೇತುವೆ ಕಟ್ಟುವ ಮೂಲಕ ಸಮಾಜದ ಪರಿವರ್ತನೆಗೆ ಈ ಚಿತ್ರಕಾರಣವಾಗಲಿ ಎಂದು ಸಿದ್ಧಲಿಂಗ ಸ್ವಾಮೀಜಿ ಹಾರೈಸಿದರು.

ಶಬರಿಚಿತ್ರ ನಿರ್ದೇಶಕ ಒರಟ ಶ್ರೀ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಡಾ.ಧನಿಯಾಕುಮಾರ್, ಶಬರಿ ಪಾತ್ರದಲ್ಲಿ ಅಭಿನಯಿಸಿರುವ ರಾಣಿ’ ಧಾರಾವಾಹಿಯ ರಾಣಿ ಪಾತ್ರಧಾರಿ ಧನ್ವಿ, ಚಿತ್ರದ ನಾಯಕ ಸಮರ್ಥ್, ಖಡಕ್ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿರುವ ಯೋಗೀಶ್ ವೀರ್ ಮೊದಲಾದವರು ಈ ವೇಳೆ ಹಾಜರಿದ್ದರು. ಬರವಿ ಫಿಲಂ ಬ್ಯಾನರ್‌ ಅಡಿಯಲ್ಲಿ ಶಬರಿಚಿತ್ರ ನಿರ್ಮಾಣವಾಗಿದ್ದು, ರಮೇಶ್, ಸುಧಾಕರ ರೆಡ್ಡಿ, ವಿಷ್ಣುಕಾಂತ್‌ ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ತಿಂಗಳ 23 ರಂದು ಶಬರಿ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ನಿರ್ದೇಶಕ ಒರಟ ಶ್ರೀ ಹೇಳಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಧ್ರುವ ಸರ್ಜಾ ಜೊತೆ ‘ಕೆಮಿಸ್ಟ್ರಿ’ ಮಾಡಿದ ‘ವಜ್ರಕಾಯ’ ನಭಾ: ಮುಂದಿನ ಚಿತ್ರದ ಬಗ್ಗೆ ಬಿಚ್ಚಿಟ್ಟ ಆಸೆ ಏನು?
ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದ ಬೇಲ್‌, ಸೋಶಿಯಲ್‌ ಮೀಡಿಯಾದಲ್ಲಿ ಕಳೆಗಟ್ಟಿದ ಸಂಭ್ರಮ