ಕರಾವಳಿ ಬೆಚ್ಚಿಬೀಳಿಸಿದ ಅಶ್ಲೀಲ ವಿಡಿಯೋ, ಹಿಂದೂ ಮುಖಂಡನ ಮೊಬೈಲ್‌ನಲ್ಲಿ 50ಕ್ಕೂ ಅಧಿಕ ಅಶ್ಲೀಲ ವಿಡಿಯೋ ಪತ್ತೆ!

Published : Jul 05, 2025, 02:27 PM IST
Sumith Raj

ಸಾರಾಂಶ

ಕರಾವಳಿಯಲ್ಲಿ ಹಿಂದೂ ಮುಖಂಡನೊಬ್ಬನ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಈ ಪ್ರಕರಣವು ತನಿಖಾ ಹಂತದಲ್ಲಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿಡಿಯೋಗಳ ಮೂಲ ಮತ್ತು ಉದ್ದೇಶದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು (ಜು.5): ಕರಾವಳಿಯಲ್ಲಿ ಹಿಂದೂ ಮುಖಂಡನ ಅಶ್ಲೀಲ ವಿಡಿಯೋ ಕೇಸ್‌ ಬೆಚ್ಚಿ ಬೀಳಿಸಿದೆ. ಪ್ರಕರಣದ ವಿಚಾರಣೆಯ ವೇಳೆ ಹಿಂದೂ ಮುಖಂಡನೊಬ್ಬನ ಮೊಬೈಲ್‌ನಲ್ಲಿ ಈ ಅಶ್ಲೀಕ ವಿಡಿಯೋಗಳು ಪತ್ತೆಯಾಗಿದ್ದು, ಗಂಡು-ಹೆಣ್ಣಿನ ನಗ್ನ ದೃಶ್ಯಗಳು, ಲೈಂಗಿಕ ಸಂಪರ್ಕದ ವಿಡಿಯೋ ಕ್ಲಿಪ್‌ಗಳು ಪತ್ತೆಯಾಗಿದೆ.

ತನಿಖೆಗೆ ಇಳಿದ ಮೂಡಬಿದಿರೆ ಪೊಲೀಸರಿಗೇ ಈ ವಿಡಿಯೋ ಶಾಕ್ ನೀಡಿದೆ. ತನಿಖೆ ವೇಳೆ ಅಶ್ಲೀಲ ವಿಡಿಯೋ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಡಾಟಾ Extract ವೇಳೆ ಮೂಡಬಿದಿರೆ ಪೊಲೀಸರು ವಿಡಿಯೋ ಕಂಡು ಅಚ್ಚರಿ ಪಟ್ಟಿದ್ದಾರೆ.

ಹಿಂದೂ ಮುಖಂಡ ಸಮಿತ್​ ರಾಜ್​ ಮೊಬೈಲ್‌ನಲ್ಲಿ ಈ ವಿಡಿಯೋ ಪತ್ತೆಯಾಗಿದ್ದು, ಹಿಂದೂ ಜಾಗರಣಾ ವೇದಿಕೆ ದ.ಕ ಜಿಲ್ಲಾ ಸಹಸಂಯೋಜಕರಾಗಿ ಸಮಿತ್ ರಾಜ್‌ ಗುರುತಿಸಿಕೊಂಡಿದ್ದಾರೆ. ಖಾಸಗಿ ಬಸ್ ಗೆ ಕಲ್ಲು ತೂರಿದ್ದ ಪ್ರಕರಣದಲ್ಲಿ ಸಮಿತ್ ರಾಜ್‌ನನ್ನ ಮೂಡಬಿದಿರೆ ಪೊಲೀಸರು ಬಂಧಿಸಿದ್ದರು. ಹೆಚ್ಚಿನ ತನಿಖೆಗಾಗಿ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಈ ಹಂತದಲ್ಲಿ ಡೇಟಾ Extract ಮಾಡಿಸಲು ಕೋರ್ಟ್‌ ಹಾಗೂ ಮೇಲಾಧಿಕಾರಿಗಳ ಅನುಮತಿ ಕೋರಿದ್ದರು. ಅನುಮತಿ ಸಿಕ್ಕ ಬಳಿಕ ಸೆನ್ ಲ್ಯಾಬ್ ನಲ್ಲಿ ಡಾಟಾ Extract ಮಾಡಲಾಗಿತ್ತು. ಈ ವೇಳೆ 50ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಇರುವುದು ಪತ್ತೆಯಾಗಿದೆ.

ವಿಡಿಯೋಗಳು ಪತ್ತೆ ಹಿನ್ನೆಲೆ ಇನ್ಸ್​ಪೆಕ್ಟರ್​ ಸಂದೇಶ್​, ಮೂಡಬಿದಿರೆ ಠಾಣೆಯಲ್ಲಿ ಪ್ರತ್ಯೇಕ FIR ದಾಖಲು ಮಾಡಿದ್ದಾರೆ. ವಿಡಿಯೋ ತುಣುಕುಗಳನ್ನು ಪ್ರಸಾರ ಮಾಡುವ ಸಾಧ್ಯತೆ ಇದೆ. ಇನ್ಯಾರಿಗೋ ಕಳುಹಿಸುವ ಸಾಧ್ಯತೆ ಹಿನ್ನೆಲೆ ಎಫ್ಐಆರ್ ದಾಖಲಾಗಿದೆ. ಇದರಿಂದಾಗಿ ವಿಡಿಯೋದ ಮೂಲವನ್ನೂ ಹುಡುಕಲು ಪೊಲೀಸರು ಮುಂದಾಗಿದ್ದಾರೆ.

ಬೇರೆ ಕೇಸ್‌ನಲ್ಲಿ ಅರೆಸ್ಟ್ ಆದವನ ಬಳಿ ಅಶ್ಲೀಲ ವಿಡಿಯೋ ಇದೆ. ನಿರಂತರ ಎಂಟು ಗಂಟೆಗಳ ಮೊಬೈಲ್ ಡಾಟಾ Extract ಮಾಡಲಾಗಿದೆ. ಬೆ.11.30ರಿಂದ ರಾತ್ರಿ 8 ಗಂಟೆಯವರೆಗೆ ಡಾಟಾ Extract ನಡೆದಿದೆ. ಕಮಿಷನರ್ ಕಚೇರಿಯ ಸೆನ್ ಲ್ಯಾಬ್ ನಲ್ಲಿ ಈ ಕಾರ್ಯ ನಡೆದಿದ್ದು, ಸಮಿತ್ ಡಿಲೀಟ್ ಮಾಡಿದ್ದ ಹಲವು ವಿಡಿಯೋಗಳೂ ಲಭ್ಯವಾಗಿದೆ.

ಬಸ್‌ಗೆ ಕಲ್ಲು ತೂರಿದ ಪ್ರಕರಣದಲ್ಲಿ ಅರೆಸ್ಟ್‌

ರಾಜಕಾರಣಿಯೊಬ್ಬರ ವಿಡಿಯೋ ಪತ್ತೆ ಬಗ್ಗೆ ಗುಸುಗುಸು ಇದೆ. ಈ ಬಗ್ಗೆ ಮಂಗಳೂರು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅದರೊಂದಿಗೆ ಮೊಬೈಲ್ ತನಿಖೆ ವೇಳೆ ಸಮಿತ್‌ ರಾಜ್‌ ತಗುಲುಹಾಕಿಕೊಂಡಿದ್ದಾರೆ. 2024ರ ನ.11 ರಂದು ಬಸ್ ಗೆ ಕಲ್ಲು ತೂರಿದ ಕೇಸ್‌ನಲ್ಲಿ ಸಮಿತ್ ಬಂಧಿತನಾಗಿದ್ದ. ಘಟನೆ ನಡೆದು ಆರು ತಿಂಗಳ ಬಳಿಕ ಸಮಿತ್ ರಾಜ್ ಬಂಧನವಾಗಿದೆ.

ಓವರ್ ಟೇಕ್ ಭರದಲ್ಲಿ ಮಹಿಳೆಗೆ ಖಾಸಗಿ ಬಸ್ ಡಿಕ್ಕಿಯಾಗಿತ್ತು. ಆಕ್ರೋಶಿತ ವಿದ್ಯಾರ್ಥಿಗಳು ಬಸ್ ಗಾಜು ಪುಡಿಗೈದು ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಮೂಡಬಿದಿರೆ ತಾಲೂಕಿನ ತೋಡಾರ್ ಬಳಿ ಘಟನೆ ನಡೆದಿತ್ತು. ಬಸ್ ಗಾಜು ಒಡೆದು ವಿದ್ಯಾರ್ಥಿಗಳು ಹಾನಿ ಮಾಡಿದ್ದರೆ, ಈ ಕೃತ್ಯದಲ್ಲಿ ಸಮಿತ್‌ ರಾಜ್‌ ಕೂಡ ಭಾಗಿಯಾಗಿದ್ದ. ಬಸ್ ಮಾಲೀಕ ರಫೀಕ್ ಠಾಣೆಗೆ ದೂರು ನೀಡಿದ್ದರು.

ನೋಟಿಸ್‌ ನೀಡಲು ಸಿದ್ಧತೆ: ಹಿಂದೂ ಮುಖಂಡನ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ನೋಟಿಸ್‌ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. BNS 2023ರ 294(2)(a) ಸೆಕ್ಷನ್ ನಡಿ ಎಫ್ಐಆರ್ ದಾಖಲಾಗಿದೆ.

ವಿಡಿಯೋ ಯಾರದ್ದು? ಯಾರು ಚಿತ್ರೀಕರಿಸಿದ್ದು? ಎಲ್ಲಿ ಚಿತ್ರೀಕರಿಸಿದ್ದು ಎಂಬ ಬಗ್ಗೆ ವಿಚಾರಣೆ ನಡೆಯಲಿದೆ. ಎಲ್ಲಿಂದಲೋ ಡೌನ್ ಲೋಡ್ ಮಾಡಿಕೊಂಡಿದ್ದಾ..? ಸ್ವತಃ ಚಿತ್ರೀಕರಿಸಿದ್ದಾ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ. ವಿಡಿಯೋ ಬೇರೆಯವರಿಗೆ ಕಳುಹಿಸಿದ ಬಗ್ಗೆಯೂ ತನಿಖೆ ಆಗಲಿದೆ. ಸದ್ಯ ಕಲ್ಲು ತೂರಿದ ಕೇಸ್ ನಲ್ಲಿ ಸಮಿತ್‌ ರಾಜ್‌ಗೆ ಜಾಮೀನು ಸಿಕ್ಕಿದ್ದು ಮತ್ತೆ ನೋಟಿಸ್‌ ಕೊಟ್ಟು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

New Parents of Sandalwood: 2025ರಲ್ಲಿ ಪೋಷಕರಾಗಿ ಬಡ್ತಿ ಪಡೆದ ಕನ್ನಡ ಹಿರಿತೆರೆ-ಕಿರುತೆರೆ ನಟರು
ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!