ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ಗಂಧದ ಗುಡಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಣೆ
ಬೆಂಗಳೂರು(ಅ.21) ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ಗಂಧದ ಗುಡಿ ಚಿತ್ರದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮ ಪುನೀತ್ ಪರ್ವ ಹೆಸರಿನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಈ ವಿಶೇಷ ಪುನೀತ್ ಪರ್ವ ಕಾರ್ಯಕ್ರಮಕ್ಕೆ ದೇಶದ ಎಲ್ಲಾ ಚಿತ್ರರಂಗದ ಗಣ್ಯರು ಆಗಮಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ ಬಸವರಾಜ್ ಬೊಮ್ಮಾಯಿ ಭರ್ಜರಿ ಘೋಷಣೆ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅಭಿಯನಯದ ಗಂಧದ ಗುಡಿ ಚಿತ್ರಕ್ಕೆ ಕರ್ನಾಟಕದಲ್ಲಿ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.
ನಿಸರ್ಗ, ಕಾಡು , ಪ್ರಾಣಿಗಳೊಂದಿಗೆ ತೆಗೆದಿರುವ ಸಿನಿಮಾ ಇದು.ಇದು ಕರ್ನಾಟಕ ಸಸ್ಯ ಸಂಪತನ್ನು ತೋರಿಸಿರುವ ಚಿತ್ರ. ಈ ಚಿತ್ರಕ್ಕೆ ಸರ್ಕಾರ ಖಂಡಿತ ತೆರಿಗೆ ವಿನಾಯಿತಿ ಘೋಷಿಸುತ್ತದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಅಪ್ಪು ಅವರಿಂದ ಸ್ಪೂರ್ತಿಗೆ ಒಳಗಾದ ಯುವ ಸಮುದಾಯದ ನೋಡಿದಾಗ ಸಂತಸವಾಗುತ್ತಿದೆ. ಆದ್ರೇ ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಅಪ್ಪು ಬಹಳಷ್ಟು ವರ್ಷ ಬದುಕಿ ಬಾಳ ಬೇಕಿತ್ತು ಈ ನೋವು ಈಗಲೂ ಕಾಡುತ್ತಿದೆ. ಇದೀಗ ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವು ಸಂತಸ ಹಾಗೂ ಹೆಮ್ಮೆ ತಂದಿದೆ. ನವೆಂಬರ್ ಒಂದರಂದು ಅಪ್ಪುಗೆ ಕರ್ನಾಟಕ ರತ್ನ ನೀಡಲಿದ್ದೆವೆ . ಅದು ಎಲ್ಲ ಯುವಕರಿಗೆ ಪ್ರೇರಣೆ ಎಂದು ಭಾವಿಸುತ್ತೇನೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಧೂಳೆಬ್ಬಿಸಿದ ಗಂಧದ ಗುಡಿ ಟ್ರೈಲರ್: ಕೋಟಿ ಜನರ ಮನ ಗೆದ್ದ ಅಪ್ಪು..!
ಅ.29 ರಂದು ಪುನೀತ್ ರಾಜ್‌ಕುಮಾರ್ ಅವರ ಮೊದಲ ವರ್ಷದ ಪುಣ್ಯಸ್ಮರಣೆ. ಒಂದು ದಿನ ಮುಂಚಿತವಾಗಿ ಅ.28 ರಂದು ಅವರ ಕೊನೆಯ ಸಿನಿಮಾ ‘ಗಂಧದಗುಡಿ’ ಬಿಡುಗಡೆ ಆಗುತ್ತಿದೆ. ಇದಕ್ಕೂ ಪುನ್ನ ಗಂಧದ ಗುಡಿ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮವನ್ನು ಅದ್ಧೂರಿಯಾ ಆಯೋಜಿಸಲಾಗಿದೆ. ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. ಇವರಿಗೆ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಇಡೀ ರಾಜ್ ಕುಟುಂಬ ಹಾಗೂ ಕನ್ನಡ ಚಿತ್ರರಂಗ ಬೆನ್ನಲುಬಾಗಿ ನಿಂತಿದೆ.
ಪರಿಸರ, ಪ್ರಾಣಿ-ಪಕ್ಷಿ, ಪ್ರಕೃತಿಯ ಮಹತ್ವ, ಮನುಷ್ಯನ ಪಯಣ.. ಹೀಗೆ ಎಲ್ಲವನ್ನು ಹೇಳಬೇಕು ಅಂತಾನೇ ಈ ಸಿನಿಮಾ ಮಾಡಿದ್ದಾರೆ. ಇಂಥದ್ದೊಂದು ಸಿನಿಮಾ ಮಾಡುವ ತನಕ ಆ ದೇವರು ಅಪ್ಪುನನ್ನು ಉಳಿಸಿದ್ದರು ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದಾರೆ. ಅಮೋಘವರ್ಷ ನಿರ್ದೇಶನದ ಈ ಚಿತ್ರವು ನಾಡಿನ ವನ್ಯ-ಜೀವಿ ಸಂಪತ್ತಿನ ಸೌಂದರ್ಯವನ್ನು ತೆರೆ ಮೇಲೆ ತೆರೆದಿಡಲಿದೆ. ಚಿತ್ರದ ಟ್ರೇಲರ್‌ಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಕ್ಕಿದ್ದು, ಅ.28ರಂದು ಸಿನಿಮಾ ಬಿಡುಗಡೆ ಆಗಲಿದೆ. ಕೆಆರ್‌ಜಿ ಸ್ಟುಡಿಯೋ ವತಿಯಿಂದ ಚಿತ್ರವನ್ನು ಎಲ್ಲಾ ಭಾಷೆಗಳಲ್ಲೂ ಬಿಡುಗಡೆ ಮಾಡಲಾಗುತ್ತಿದೆ.
ಪ್ರಕೃತಿಯ 'ಅಪ್ಪು'ಗೆಯಲಿ ಪವರ್ ಸ್ಟಾರ್: ಇದು ಗಂಧದ ಗುಡಿ..!