ಬನಾರಸ್ ನಿಂದ `ಬೆಳಕಿನ ಕವಿತೆ'; ಹೊರಬರಲು ಮುಹೂರ್ತ ಫಿಕ್ಸ್..!

Published : Oct 21, 2022, 01:04 PM IST
ಬನಾರಸ್ ನಿಂದ `ಬೆಳಕಿನ ಕವಿತೆ'; ಹೊರಬರಲು ಮುಹೂರ್ತ ಫಿಕ್ಸ್..!

ಸಾರಾಂಶ

ಜಯತೀರ್ಥ ನಿರ್ದೇಶನದ ಬನಾರಸ್ ಚಿತ್ರ ಸಾಕಷ್ಟು ವಿಚಾರಗಳಿಂದ ನಿರೀಕ್ಷೆಗಳ ಮೂಡಿಸುತ್ತಿದೆ... ಆದ್ರೆ ಚಿತ್ರಕ್ಕಿಂತ ಮೊದಲು ಸಿನೆಮಾ ಹೇಗಿರಬಹುದು ಅನ್ನೋ ಚಿತ್ರಣವನ್ನ ಕೊಡೋದೇ ಹಾಡುಗಳು.

ಒಂದು ಸಿನೆಮಾ ಗೆಲ್ಲಬೇಕು ಅಂದ್ರೆ ಕೇವಲ ಕಥೆ, ತಾರಾಗಣ ಮಾತ್ರವಲ್ಲದೇ, ಆ ಚಿತ್ರದಲ್ಲಿನ ಹಾಡುಗಳು, ಸಂಕಲನ, ಮೇಕಿಂಗ್ ಎಲ್ಲವೂ ಮುಖ್ಯವಾಗುತ್ತೆ. ಇಲ್ಲಿ ಒಂದು ಮೈನಸ್ ಅನ್ಸಿದ್ರೂ ನೋಡುಗರಿಗೆ ಏನೋ ಕೊರತೆ ಎದುರಾದಂತೆ ಅನಿಸುತ್ತದೆ. ಆದ್ರೆ ಚಿತ್ರಕ್ಕಿಂತ ಮೊದಲು ಸಿನೆಮಾ ಹೇಗಿರಬಹುದು ಅನ್ನೋ ಚಿತ್ರಣವನ್ನ ಕೊಡೋದೇ ಹಾಡುಗಳು. ಹಾಗಾಗಿ ಸಿನ್ಮಾದ ಹಾಡಿಗಾಗಿ ಕಾಯುವ ಸಾಕಷ್ಟು ಅಭಿಮಾನಿಗಳಿದ್ದಾರೆ. ರಿಲೀಸ್ ಆದ ಹಾಡುಗಳು ಗೆದ್ದರೆ ಅರ್ಧ ಸಿನೆಮಾವೇ ಗೆದ್ದಂತೆ ಎಂಬ ಬಲವಾದ ನಂಬಿಕೆ ಚಿತ್ರರಂಗದಲ್ಲಿದೆ. ಹೀಗಿರುವಾಗ ಪಂಚ ಭಾಷೆಯಲ್ಲೂ ಸದ್ದು ಮಾಡಿ ನಿರೀಕ್ಷೆಗಳ ಹೊಳೆಯನ್ನೇ ಹರಿಸುತ್ತಿರುವ ಬನಾರಸ್ ಚಿತ್ರದ ಹಾಡುಗಳ ಬಗ್ಗೆ ಹೇಳೋಕೆ ಏನಿದೆ? ಯಾಕಂದ್ರೆ ಈಗಾಗಲೇ ರಿಲೀಸ್ ಆಗಿರುವ ಬನಾರಸ್ ನ ಹಾಡುಗಳೆಲ್ಲವೂ ಪಂಚ ಭಾಷೆಯಲ್ಲೂ ದಾಖಲೆ ಸೃಷ್ಟಿಸಿದ್ದಾಗಿದೆ. ಈಗ ಬನಾರಸ್ ನಿಂದ ಮತ್ತೊಂದು ಮನಮೋಹಕ ಹಾಡೊಂದು ರಿಲೀಸ್ ಆಗುವ ಕುರಿತು ಮಾಹಿತಿ ಹೊರಬಿದ್ದಿದೆ.

ಹೌದು ಜಯತೀರ್ಥ ನಿರ್ದೇಶನದ ಬನಾರಸ್ ಚಿತ್ರ ಸಾಕಷ್ಟು ವಿಚಾರಗಳಿಂದ ನಿರೀಕ್ಷೆಗಳ ಮೂಡಿಸುತ್ತಿದೆ. ಈ ಹಿಂದೆ ರಿಲೀಸ್ ಆಗಿದ್ದ ಮಾಯಗಂಗೆ ಹಾಡಂತೂ ಮಿಲಿಯನ್ನುಗಟ್ಟಲೆ ವೀಕ್ಷಣೆಯೊಂದಿಗೆ ನಟ ಝೈದ್ ಖಾನ್ ಹಾಗೂ ಸೋನಲ್ ಜೋಡಿ ಮೋಡಿ ಮಾಡಿತ್ತು. ಈಗ ಬೆಳಕಿನ ಕವಿತೆ ಎಂಬ ಶೀರ್ಷಿಕೆ ಹೊಂದಿರುವ ವೀಡಿಯೋ ಸಾಂಗ್, ಇದೇ 22ನೇ ತಾರೀಕು ಸಂಜೆ 6.30ಕ್ಕೆ ಬಿಡುಗಡೆಗೊಳ್ಳಲಿದೆ. ಈಗಾಗಲೇ ಬಿಡುಗಡೆಗೊಂಡಿರುವ ಹಾಡಿಗೆ ಅಜನೀಶ್ ಬಿ ಲೋಕನಾಥ್ ಯಾವ ಮಟ್ಟಿಗೆ ಸಂಗೀತ ಸಂಯೋಜಿಸಿ ಸಂಗೀತ ಪ್ರಿಯರ ಮನಗೆದ್ದಿದ್ದರು ಎಂಬುದು ತಿಳಿದಿದೆ. ಈಗ ಮತ್ತೆ ಹೊರಬರುತ್ತಿರುವ ಬೆಳಕಿನ ಕವಿತೆ ಎಂಬ ಶೀರ್ಷಿಕೆ ಕೇಳಿದ್ರೆ ಈ ಹಾಡು ಇನ್ನೆಷ್ಟು ಮತ್ತೇರಿಸಬಹುದೆಂಬ ಅಂದಾಜು ಸಿಗಬಲ್ಲದು.

ತಮಿಳುನಾಡಿನಾದ್ಯಂತ ಶಕ್ತಿ ಫಿಲ್ಮ್ ಪ್ಯಾಕ್ಟರಿ ಸಂಸ್ಥೆಯಿಂದ ಬನಾರಸ್ ಹಂಚಿಕೆ

ಮ್ಯೂಸಿಕ್ ನಲ್ಲೇ ಮಂತ್ರಮುಗ್ಧರಾಗಿಸುವ ಕಲೆ ಬಲ್ಲ ಅಜನೀಶ್ ಬಿ ಲೋಕನಾಥ್ ಸಂಗೀತ ನಿರ್ದೇಶನದ ಪಟ್ಟುಗಳನ್ನು ಬಲ್ಲವರು. ಜಯತೀರ್ಥ ನಿರ್ದೇಶನದ ಚಿತ್ರಗಳ ಹಾಡಿನ ಸವಿ ಬಲ್ಲವರು, ಹಾಗು ಈಗಾಗಲೇ ಬನಾರಸ್ ಚಿತ್ರದಿಂದ ಹೊರಬಂದ ಹಾಡುಗಳಿಗೆ ಕಿವಿಯಾದವರು, ಈಗ ರಿಲೀಸ್ ಆಗಲಿರುವ ಬೆಳಕಿನ ಕವಿತೆ ಎಲ್ಲರ ಮುಂದೆ ತೆರೆದುಕೊಳ್ಳುವ ಕ್ಷಣಗಳಿಗಾಗಿ ಕಾಯುವಂತಾಗಿದೆ. ಇನ್ನು ದೇಶದಾದ್ಯಂತ ೫ ಭಾಷೆಗಳಲ್ಲಿ ಇದೇ ನವೆಂಬರ್ ೪ ರಂದು ತೆರೆಗೆ ಬರಲು ಬನಾರಸ್ ರೆಡಿಯಾಗಿದೆ. ಈ ಬೆಳಕಿನ ಕವಿತೆ ಹೇಗೆ ಮೋಡಿ ಮಾಡತ್ತೆ ಹಾಗೂ ಈ ಹಾಡಿನಲ್ಲಿ ಸೋನಲ್ ಹಾಗು ಝೈದ್ ಜೋಡಿ ಇನ್ನೆಷ್ಟು ಸೆಳೆಯುತ್ತೋ ಕಾದುನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?