
ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಸಾರಥ್ಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ‘ಸಿನಿಮಿನಿ’ ಕಿರುಚಿತ್ರೋತ್ಸವದ ಎರಡನೇ ಆವೃತ್ತಿ ಯಶಸ್ವಿಯಾಗಿ ನಡೆಯಿತು. ಟೆಂಟ್ ಸಿನಿಮಾ ಹಾಗೂ ಸತ್ಯ ಹೆಗಡೆ ಸ್ಟುಡಿಯೋಸ್ ವತಿಯಿಂದ ನಡೆದ ಈ ‘ಸಿನಿಮಿನಿ’ ಚಿತ್ರೋತ್ಸವದ ಪ್ರಶಸ್ತಿ ಪ್ರಧಾನ ಸಮಾರಂಭ ಇತ್ತೀಚೆಗೆ ನಡೆಯಿತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಧ್ರುವ ಸರ್ಜಾ, ನಿರ್ದೇಶಕರಾದ ತರುಣ್ ಸುಧೀರ್, ಮನೋಜ್ ಕುಮಾರ್, ಮಂಡ್ಯ ರಮೇಶ್ ಭಾಗವಹಿಸಿ ವಿಜೇತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿಗಳ ಜೊತೆಗೆ ಕಥೆ, ನಿರ್ದೇಶನ, ಛಾಯಾಗ್ರಹಣ, ಸಂಕಲನ, ಸಂಗೀತ ನಿರ್ದೇಶನ, ನಟ, ನಟಿ ಹಾಗೂ ಬಾಲನಟ ವಿಭಾಗಗಳು ಹಾಗೂ ಮಹಿಳಾ ಚಿತ್ರನಿರ್ದೇಶಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅತ್ಯುತ್ತಮ ಮಹಿಳಾ ನಿರ್ದೇಶಕಿ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಯಿತು. ಅಲ್ಲದೆ 10 ವಿಶೇಷ ತೀರ್ಪುಗಾರರ ಪ್ರಶಸ್ತಿಗಳು, 14 ವಿಶೇಷ ಮೆಚ್ಚುಗೆ ಪ್ರಶಸ್ತಿಗಳನ್ನು ನೀಡಲಾಯಿತು.
ಈ ಬಾರಿ ಈ ಕಿರುಚಿತ್ರೋತ್ಸವಕ್ಕೆ 280 ಚಿತ್ರಗಳ ಪ್ರವೇಶಗಳು ಬಂದಿದ್ದು, ಈ ಪೈಕಿ 241 ಕಿರುಚಿತ್ರಗಳು, 26 ಎಐ ಚಿತ್ರಗಳು, 11 ವರ್ಟಿಕಲ್ ಚಿತ್ರಗಳು ಹಾಗೂ 2 ಮಿನಿ ಸರಣಿಗಳು ಸೇರಿದ್ದವು. ಆಯ್ಕೆಯಾದ 35 ಕಿರುಚಿತ್ರಗಳು ಹಾಗೂ ವರ್ಟಿಕಲ್ ಮತ್ತು ಎಐ ವಿಭಾಗಗಳಿಂದ ಕಿರುಪಟ್ಟಿಗೆ ಆಯ್ಕೆಯಾದ 4 ಚಿತ್ರಗಳನ್ನು ಪ್ರದರ್ಶಿಸಲಾಯಿತು. ಮನ್ಸೋರೆ, ಅನಿರುದ್ಧ್ ಮಹೇಶ್, ರಂಜನಿ ರಾಘವನ್, ಶ್ರೀನಿಧಿ ಬೆಂಗಳೂರು, ಆದರ್ಶ ಈಶ್ವರಪ್ಪ, ಅದ್ವೈತ ಗುರುಮೂರ್ತಿ, ಸುನಯನಾ ಸುರೇಶ್, ಶ್ರೀ ಕ್ರೇಜಿ ಮೈಂಡ್ಸ್ ಹಾಗೂ ನಿಂಗರಾಜ್ ಸಿಂಗಾಡಿ ತೀರ್ಪುಗಾರರಾಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.