ಯೂಟ್ಯೂಬ್‌ನಲ್ಲಿ ಅಣ್ಣನ ಆ್ಯಕ್ಷನ್ನು, ತಮ್ಮನ ಡೈಲಾಗು ಫುಲ್ ವೈರಲ್!

Published : Nov 02, 2019, 10:05 AM IST
ಯೂಟ್ಯೂಬ್‌ನಲ್ಲಿ ಅಣ್ಣನ ಆ್ಯಕ್ಷನ್ನು, ತಮ್ಮನ ಡೈಲಾಗು ಫುಲ್ ವೈರಲ್!

ಸಾರಾಂಶ

ಒಂದು ಕಡೆ ತಮ್ಮನ ಡೈಲಾಗ್ ಟ್ರೇಲರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದರೆ, ಮತ್ತೊಂದು ಕಡೆ ಅಣ್ಣನ ಆ್ಯಕ್ಷನ್ ಟೀಸರ್ ಕೂಡ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಸಂಭ್ರಮ ಆಚರಿಸುತ್ತಿದೆ.  

ಈ ಅಣ್ತಮ್ಮ ಬೇರ‌್ಯಾರೂ ಅಲ್ಲ ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ. ಚಿರಂಜೀವಿ ಸರ್ಜಾ ಹಾಗೂ ತಾನ್ಯಾ ಕಾಂಬಿನೇಷನ್‌ನ ‘ಖಾಕಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದ್ದು, ಚಿರಂಜೀವಿ ಸರ್ಜಾ ಆ್ಯಕ್ಷನ್‌ಗೆ ನೋಡುಗರು ಭೇಷ್ ಎನ್ನುತ್ತಿದ್ದಾರೆ ಎಂಬುದು ಚಿತ್ರತಂಡದ ಖುಷಿಗೆ ಕಾರಣ.

ಖಾಕಿ ತೊಟ್ಟ ಚಿರುಗೆ ತಾನ್ಯಾ ಹೋಪ್ ಜೋಡಿ!

ಸದ್ಯ ಯೂಟ್ಯೂಬ್‌ನಲ್ಲಿ ಒಂದು ಲಕ್ಷದ ಹಿಟ್ಸ್ ಗಡಿ ದಾಟಿರುವ ‘ಖಾಕಿ’ ಚಿತ್ರವನ್ನು ತರುಣ್ ಶಿವಪ್ಪ ನಿರ್ಮಿಸಿದ್ದು, ನವೀನ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ‘ಚಿರಂಜೀವಿ ಸರ್ಜಾ ಹಾಗೂ ನಾಯಕಿ ತಾನ್ಯಾ ಹೋಪ್ ಜೋಡಿ ಈ ಚಿತ್ರಕ್ಕೆ ಸೂಕ್ತವಾಗಿದೆ. ಆ್ಯಕ್ಷನ್ ಸಿನಿಮಾ ಇದು. ಪವರ್ ಫುಲ್ ಟೈಟಲ್ ಜತೆಗೆ ಈಗ ಅಷ್ಟೇ ಜೋಶ್ ಆಗಿರುವ ಚಿತ್ರದ ಟೀಸರ್ ಬಿಡುಗಡೆ
ಮಾಡಿದ್ದೇವೆ.

 

ನಮ್ಮ ನಿರೀಕ್ಷೆಯಂತೆ ನೋಡುಗರಿಂದ ಚಿತ್ರದ ಟೀಸರ್‌ಗೆ ಒಳ್ಳೆಯ ಮಾರ್ಕ್ಸ್ ಸಿಗುತ್ತಿವೆ’ ಎನ್ನುತ್ತಾರೆ ನಿರ್ದೇಶಕ ನವೀನ್ ರೆಡ್ಡಿ. ಬಾಲ ಎಂಬುವವರು ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Kiccha Sudeep Bodyguard:‌ ಇಟಲಿಯಿಂದ ಬಂದ ಕಿಚ್ಚ ಸುದೀಪ್ ಬಾಡಿಗಾರ್ಡ್‌ ಸಾಧನೆ ಅಷ್ಟಿಷ್ಟಲ್ಲ; ಆ ಆಸೆ ಇದ್ಯಂತೆ
'ಜಾನ್ವಿ ಕಪೂರ್' ಬಿಟ್ಟು, ಚಿತ್ರರಂಗದ ಪರ ಬ್ಯಾಟಿಂಗ್ ಮಾಡಿದ ನಿತ್ಯಾ ಮೆನನ್! ಬಾಲಿವುಡ್‌ಗೆ ಕೆನ್ನೆಗೆ ಬಾರಿಸಿದ ನಟಿ