
ಬೆಂಗಳೂರು (ನ.25) ಕನ್ನಡ ಸಿನಿಮಾ ರಂಗ 70, 80, 90ರ ದಶಕದಲ್ಲಿ ಭಾರತವೇ ತಿರುಗು ನೋಡುವಂತೆ ಮಾಡಿತ್ತು. ಕನ್ನಡ ಸಿನಿಮಾಗಳಿಗೆ ಅದ್ಭುತ ಹಾಡುಗಳ ನೀಡಿದ ಸಾಹಿತಿ ಚಿ.ಉದಶಂಕರ್. ಡಾ.ರಾಜ್ ಕುಮಾರ್ ಸೇರಿದಂತೆ ಹಲವು ನಟರ ಸೂಪರ್ ಹಿಟ್ ಹಾಡಿನ ಹಿಂದಿನ ರಚನಕಾರ ಚಿ.ಉದಶಂಕರ್. 3000ಕ್ಕೂ ಹೆಚ್ಚು ಹಾಡು ಬರೆದಿರುವ ಚಿ.ಉದಯಶಂಕರ್ ನಿಮಿಷದಲ್ಲೇ ಹಾಡು ಬರೆಯುವ ಸಾಮರ್ಥ್ಯವಿತ್ತು. ಆದರೆ ಅನಂತ್ ನಾಗ್- ಲಕ್ಷ್ಮಿ ಅಭಿನಯದ ಬೆಂಕಿಯ ಬಲೆ ಸಿನಿಮಾದ ಒಂದು ನೋವಿನ ಹಾಡಿನ ಒಂದು ಸಾಲು ಬರೆಯಲು ಚಿ.ಉದಶಂಕರ್ ಬರೋಬ್ಬರಿ 3 ದಿನ ತೆಗೆದುಕೊಂಡಿದ್ದರು. ಇದೇ ಬಿಸಿಲಾದರೇನು, ಮಳೆಯಾದರೇನು ಹಾಡು. ಈ ಹಾಡಿನ ಹಿಂದೆ ರೋಚಕ ಕತೆ ಇದೆ.
ಬೆಂಕಿಯ ಬಲೆ 1983ರಲ್ಲಿ ಬಿಡುಗಡೆಯಾಗ ಸಿನಿಮಾ. ದೊರೈ ಭಗವಾನ್ ನಿರ್ದೇಶನದ ಈ ಸಿನಿಮಾದ ಹಿಂತೆ ಹಲವು ರೋಚಕ ಘಟನೆಗಳಿವೆ. ಈ ಪೈಕಿ ಬಿಸಿಲಾದರೇನು ಹಾಡು ಮನಸ್ಸು ಭಾರವಾಗುವ ಹಾಡು. ದೊರೈ ಭಗವಾನ್, ಸಂಗೀತ ನಿರ್ದೇಶಕ ರಾಜನ್ ನಾಗೇಂದ್ರ ಹಾಗೂ ಸಾಹಿತಿ ಚಿ.ಉದಯಶಂಕರ್ ಮೈಸೂರಿನ ಹೊಟೆಲ್‌ನಲ್ಲಿ ಕುಳಿತು ಹಾಡು ರಚಿಸಲು ಮುಂದಾಗಿದ್ದರು.
ಸಂಗೀತ ನಿರ್ದೇಶಕ ರಾಜನ್ ನಾಗಂದ್ರ ಹಾಗೂ ಸಾಹಿತಿ ಚಿ.ಉದಯಶಂಕರ್‌ಗೆ ಇಡೀ ಸಿನಿಮಾ ಕತೆ ವಿವರಿಸಿದ್ದರು. ಅತ್ಯಂತ ನೋವಿನ, ಸ್ಯಾಡ್ ಸಾಂಗ್ ಬೇಕು ಎಂದು ದೊರೈ ಭಗವಾನ್ ಹೇಳಿದ್ದರು. ಆದರೆ ಎಲ್ಲಾ ಸ್ಯಾಡ್ ಸಾಂಗ್ ರೀತಿ ಅಲ್ಲ, ಈ ಹಾಡು ಕಾಡಬೇಕು ಎಂದಿದ್ದರು.ಇತ್ತ ರಾಜನ್ ನಾಗೇಂದ್ರ ಟ್ಯೂನ್ ಕೂಡ ರಚಿಸಿದ್ದರು. ಎಲ್ಲವೂ ಸಿದ್ದವಾಗಿತ್ತು. ಆದರೆ ಹಾಡಿನ ಸಾಲುಗಳು ಬರೆದಿರಲಿಲ್ಲ. ಚಿ.ಉದಶಂಕರ್ ಕೆಲವೇ ನಿಮಿಷದಲ್ಲಿ ಸಂದರ್ಭಕ್ಕೆ ತಕ್ಕಂತೆ ಹಾಡುವ ಬರೆಯುವ ಸಾಮರ್ಥ್ಯ ಹೊಂದಿದ್ದರು. ಆದರೆ ಮೈಸೂರಿನ ಹೊಟೆಲ್‌ನಲ್ಲಿ ಒಂದಲ್ಲ, ಎರಡಲ್ಲ, ಮೂರು ದಿನ ಕುಳಿತರೂ ಚಿ.ಉದಶಂಕರ್ ಒಂದೇ ಒಂದು ಸಾಲು ಬರೆಯಲಿಲ್ಲ.
ಪ್ರತಿ ದಿನ ದೊರೈ ಭಗವಾನ್, ರಾಜನ್ ನಾಗೇಂದ್ರ ಹೊಟೆಲ್‌ಗೆ ಆಗಮಿಸಿ ಹಾಡು ಫೈನಲ್ ಮಾಡಲು ಪ್ರಯತ್ನಿಸಿದ್ದರು. ಆದರೆ ಚಿ.ಉದಯಶಂಕರ್ ಮಾತ್ರ ಹಾಡು ರಚಿಸಲೇ ಇಲ್ಲ. ಮನಸ್ಸು ಭಾರವಾಗಿರುವ ಹಾಡು ಇದು. ಹೀಗಾಗಿ 3 ದಿನ ತೆಗೆದುಕೊಂಡರೂ ಸಾಹಿತ್ಯ ರಚನೆಯಾಗಲಿಲ್ಲ. ಹೊಟೆಲ್ ಬಾಲ್ಕನಿಯಲ್ಲಿದ್ದಾಗ ದೊರೆೈ ಭಗವಾನ್ ಹಾಗೂ ರಾಜನ್ ನಾಗೇಂದ್ರ ಕಾರಿನಲ್ಲಿ ಆಗಮಿಸಿದ್ದರು. ತಕ್ಷಣವೇ ಒಳ ನಡೆದು ಹಾಡಿನ ಮೊದಲ ಸಾಲು ಬರೆದಿದ್ದರು. ಅಂದು ಸಣ್ಣದಾಗಿ ಮಳೆಯಾಗಿತ್ತು. ಅದೇ ವೇಳೆ ಬಿಸಿಲು ಬಂದಿತ್ತು. ಇದೇ ವಾತಾವರಣವನ್ನೇ ಸ್ಯಾಡ್ ಹಾಡಾಗಿ ಬರೆದಿದ್ದರು.
ಚಿ.ಉದಯಶಂಕರ್ ತಮ್ಮ ಇಡೀ ಹಾಡಿನಲ್ಲಿ ಬಿಸಿಲು ಹಾಗೂ ಮಳೆ ಎರಡನ್ನು ಪ್ರಮುಖ ವಸ್ತುವಾಗಿಟ್ಟುಕೊಂಡು ಸ್ಯಾಡ್ ಸಾಂಗ್ ಬಿಸಿಲಾರದೇನು, ಮಳೆಯಾದರೇನು, ಜೊತೆಯಾಗಿ ಎಂದೂ ನಾನಿನಲ್ಲವೇನು, ನಿನ್ನಾ ಜೀವಾ ಎಂದಿಗೂ ಅನ್ನೋ ಹಾಡು ರಚಿಸಿದರು. ಈ ಹಾಡು ಕನ್ನಡ ಚಿತ್ರರಂಗದಲ್ಲಿ ಹೊತ ಇತಿಹಾಸ ರಚಿಸಿತ್ತು. 1983ರಲ್ಲಿ ಈ ಹಾಡು ಹಲವರ ಶೋಕಗೀತೆಯಾಗಿದ್ದರೆ, ಹಲವರಿಗೆ ಆ್ಯಥಮ್ ಆಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.