
ಕನ್ನಡ ಚಿತ್ರರಂಗದ ಫಿಟ್ ಮ್ಯಾನ್ ಅರ್ಜುನ್ ಸರ್ಜಾ ಅಂದ್ರೆ ಧ್ರುವ ಮತ್ತು ಚಿರಂಜೀವಿಗೆ ಗಾಡ್‌ಫಾದರ್ ಇದ್ದಂತೆ. ಮಾಮನ ಆಜ್ಞೆ ಮೀರದೆ ಯಾವ ಕೆಲಸವನ್ನು ಕೈಗೆತ್ತುಕೊಂಡವರಲ್ಲ. ಈ ಕಲಾವಿದರ ಕುಟುಂಬ ಚಿರು ಅಗಲಿಕಯ ನೋವಿನಿಂದ ಇನ್ನೂ ಹೊರಬಂದಿಲ್ಲ.
ಚಿರಂಜೀವಿ ಸರ್ಜಾ ಖಾತೆಗೆ Instagram ಕಂಬನಿ ಮಿಡಿದಿದ್ದು ಹೀಗೆ
ಹೃದಯಘಾತದಿಂದ ಚಿರಂಜೀವಿ ಸಾವನಪ್ಪಿ ಒಂದು ತಿಂಗಳು ಕಳೆದಿದೆ. ಕನಕಪುರದ ನೆಲಗಳಹಳ್ಳಿಯಲ್ಲಿ ಒಂದು ತಿಂಗಳ ಪುಣ್ಯಸ್ಮರಣೆಯನ್ನೂ ಮಾಡಲಾಗಿತ್ತು. ಇದರ ಬೆನ್ನಲ್ಲೇ ಅರ್ಜುನ್ ಸರ್ಜಾ ತಮ್ಮ ಕೋರಮಂಗಲದ ನಿವಾಸದಲ್ಲಿ ಚಂಡಿಕಾ ಹೋಮ ಮಾಡಿಸಿದ್ದಾರೆ. ಅನಂತ ಶಾಸ್ತ್ರಿಗಳ ನೇತೃತ್ವದಲ್ಲಿ ಚಂಡಿಕಾ ಪಾರಾಯಣ ಹೋಮ ಮಾಡಲಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಪೂಜೆಯಲ್ಲಿ ಅರ್ಜುನ್ ಕುಟುಂಬದವರು ಮತ್ತು ಚಿರು ತಾಯಿ, ಅಜ್ಜಿ ಮತ್ತು ಅಣ್ಣನ ಮಗ ಭಾಗಿಯಾಗಿದ್ದರು.
ಇನ್ನು ಇನ್‌ಸ್ಟಾಗ್ರಾಂನಲ್ಲಿ ಚಿರಂಜೀವಿ ಹೆಸರಿನಲ್ಲಿ ಅತಿ ಹೆಚ್ಚು # ಹ್ಯಾಷ್ ಟ್ಯಾಗ್ ಬಳಸಿರುವ ಕಾರಣ ಇನ್‌ಸ್ಟಾಗ್ರಾಂ ಕಂಪನಿ ಚಿರು ಖಾತೆಗೆ Remembering ಎಂದು ಸೇರಿಸುವ ಮೂಲಕ ನಮನ ಸಲ್ಲಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.