ಈ ವಾರ ತೆರೆಗೆ ಬರ್ತಿವೆ ಮೂರು ಕನ್ನಡ ಸಿನಿಮಾಗಳು; ಇದರಲ್ಲಿ ನಿಮ್ಮ ಆಯ್ಕೆ ಯಾವುದು?

Published : Jul 19, 2024, 11:50 AM ISTUpdated : Jul 19, 2024, 12:22 PM IST
ಈ ವಾರ ತೆರೆಗೆ ಬರ್ತಿವೆ ಮೂರು ಕನ್ನಡ ಸಿನಿಮಾಗಳು; ಇದರಲ್ಲಿ ನಿಮ್ಮ ಆಯ್ಕೆ ಯಾವುದು?

ಸಾರಾಂಶ

ಚಂದನ್‌ ಶೆಟ್ಟಿ ನಟನೆ, ಅರುಣ್‌ ಅಮುಕ್ತ್‌ ನಿರ್ದೇಶನ ವಿದ್ಯಾರ್ಥಿ ವಿದ್ಯಾರ್ಥಿನಿಯರೇ, ರಾಜವರ್ಧನ್‌ ನಾಯಕನಾಗಿರುವ ಹಿರಣ್ಯ, ಹಾಗೂ ಪೃಥ್ವಿ ಅಜಯ್‌ ಆ್ಯಂಬ್ಯುಲೆನ್ಸ್‌ ಡ್ರೈವರ್‌ ಪಾತ್ರದಲ್ಲಿ ಕಾಣಿಸಕೊಂಡಿರುವ ನಾಟ್‌ ಔಟ್‌ ಚಿತ್ರ ಈ ವಾರ ತೆರೆ ಕಾಣುತ್ತಿದೆ.

ವಿದ್ಯಾರ್ಥಿ ವಿದ್ಯಾರ್ಥಿನಿಯರೇ: ಚಂದನ್‌ ಶೆಟ್ಟಿ ನಟನೆ, ಅರುಣ್‌ ಅಮುಕ್ತ್‌ ನಿರ್ದೇಶನದ ಸಿನಿಮಾವಿದು. ಸುಬ್ರಹ್ಮಣ್ಯ ಕುಕ್ಕೆ ಹಾಗೂ ಎ ಸಿ ಶಿವಲಿಂಗೇಗೌಡ ನಿರ್ಮಾಪಕರು. ಸುನೀಲ್‌ ಪುರಾಣಿಕ್‌, ಅರವಿಂದ ರಾವ್‌, ಪ್ರಶಾಂತ್‌ ಸಂಬರ್ಗಿ, ಅಮರ್‌, ಮನೋಜ್‌, ಮನಸ್ವಿ ನಟಿಸಿದ್ದಾರೆ. ‘ಮಕ್ಕಳು ಪೋಷಕರು ಜೊತೆಯಾಗಿ ಕೂತು ನೋಡುವ ಚಿತ್ರವಿದು’ ಎಂದು ಸಿನಿಮಾ ಬಗ್ಗೆ ಚಂದನ್‌ ಶೆಟ್ಟಿ ಹೇಳಿದ್ದಾರೆ.  ಸಿನಿಮಾ ಜು. 19ರಂದು ತೆರೆಕಾಣುತ್ತಿದೆ. ಇದು ಕಾಲೇಜು ಕತೆಯ ಜೊತೆಗೆ ಸಸ್ಪೆನ್ಸ್ ಕೈಂ ಅಂಶಗಳನ್ನೂ ಹೊಂದಿರುವ ಸಿನಿಮಾ ಎಂದು ಚಿತ್ರತಂಡ ತಿಳಿಸಿದೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ನಿರ್ಮಾಣದ ಈ ಸಿನಿಮಾದಲ್ಲಿ ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಕುಮಾರ್ ಗೌಡ ಛಾಯಾಗ್ರಹಣ, ಶ್ರೀಕಾಂತ್ ಜಿ ಕಶ್ಯಪ್ ಕಾರ್ಯಕಾರಿ ನಿರ್ಮಾಪಕ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶವಿದೆ.

ಹಿರಣ್ಯ: ರಾಜವರ್ಧನ್‌ ನಾಯಕನಾಗಿರುವ ಈ ಸಿನಿಮಾಕ್ಕೆ ರಿಹಾನಾ ನಾಯಕಿ. ಈ ಆ್ಯಕ್ಷನ್‌ ಥ್ರಿಲ್ಲರ್‌ನಲ್ಲಿ ಗ್ಯಾಂಗ್‌ಸ್ಟರ್‌ ರಾಣಾ ಮತ್ತವನ ಆಟಾಟೋಪ ನೋಡಬಹುದು. ದಿವ್ಯಾ ಸುರೇಶ್‌ ಅತಿಥಿ ಪಾತ್ರದಲ್ಲಿದ್ದಾರೆ. ಹುಲಿ ಕಾರ್ತಿಕ್, ಅರವಿಂದ ರಾವ್, ದಿಲೀಪ್‌ ಶೆಟ್ಟಿ ಅಭಿನಯಿಸಿದ್ದಾರೆ. ಪ್ರವೀಣ್‌ ಅವ್ಯೂಕ್‌ ನಿರ್ದೇಶಕ. ವಿಘ್ನೇಶ್ವರ ಗೌಡ, ವಿಜಯ್‌ ಗೌಡ ನಿರ್ಮಾಪಕರು. ರಾಜ್‌ವರ್ಧನ್‌ ನಟನೆಯ ‘ಹಿರಣ್ಯ’ ಚಿತ್ರಕ್ಕೆ ಜುಲೈ 19ಕ್ಕೆ ಬಿಡುಗಡೆ ಆಗುತ್ತಿದೆ. ನಿರ್ದಯ ವ್ಯಕ್ತಿತ್ವದ ರಾಣಾ ಎಂಬ ಪಾತ್ರದ ಸುತ್ತ ಸಿನಿಮಾ ಕಥೆ ಇದೆ. ಸಿಂಹದ ವೀಡಿಯೋ ನೋಡುತ್ತಿದ್ದಾಗ ಕಥೆಯ ಸಾಲು ಹೊಳೆಯಿತು. ಚಿತ್ರ ಕೇವಲ ಆ್ಯಕ್ಷನ್ ಮೇಲೆ ನಿಂತಿಲ್ಲ. ಎಲ್ಲ ಬಗೆಯ ಎಮೋಶನ್‌ಗಳಿವೆ’ ಎಂದು ನಿರ್ದೇಶಕ ಪ್ರವೀಣ್ ಅವ್ಯುಕ್ತ ತಿಳಿಸಿದ್ದಾರೆ

ನಾನು ನಟಿಸಿರುವ ರಾಣಾ, ದೈಹಿಕವಾಗಿ ಸ್ಟ್ರಾಂಗ್ ಇದ್ದರೂ ಮಾನಸಿಕವಾಗಿ ದುರ್ಬಲವಾಗಿರುವ ಪಾತ್ರ. ಈ ಪಾತ್ರದ ಬಗ್ಗೆ ಅರಿತುಕೊಳ್ಳುವುದೆ ಚಾಲೆಂಜಿಂಗ್ ಆಗಿತ್ತು. ಉಳಿದಂತೆ ಈ ಸಿನಿಮಾದ ನಾಯಕಿಯಾಗಿ ದಿವ್ಯಾ ಸುರೇಶ್‌ ಉತ್ತಮ ನಟನೆ ತೋರಿದ್ದಾರೆ. ಆದರೆ ಅವರನ್ನು ನಾಯಕಿ ಎಂದು ಪರಿಗಣಿಸದೇ ವೇಶ್ಯೆಯ ಪಾತ್ರಧಾರಿಯಾಗಿ ಅಷ್ಟೇ ನೋಡಲಾಗುತ್ತದೆ, ರಿಹಾನಾ ಅವರನ್ನು ನಾಯಕಿಯಾಗಿ ಬಿಂಬಿಸಲಾಗಿದೆ ಎಂದು ದಿವ್ಯಾ ಸಿಟ್ಟಾಗಿದ್ದಾರೆ. ಆದರೆ ರಿಹಾನಾ ಕೆಲವು ದೃಶ್ಯಗಳಲ್ಲಷ್ಟೇ ಕಾಣಿಸಿಕೊಳ್ಳುತ್ತಾರೆ, ಅವರು ನಾಯಕಿಯಲ್ಲ’ ಎಂದು ಈ ಹಿಂದೆ ತಿಳಿಸಿದ್ದಾರೆ.

ಮಟನ್‌ ಬಿರಿಯಾನಿ ಬೇಕೆಂದಾಗ ಮೊಸರನ್ನ ಅಂಗಡಿ ತೆಗೆಯಬಾರದು: ನಟ ರಾಜ್‌ ಬಿ ಶೆಟ್ಟಿ

ನಾಟ್‌ ಔಟ್‌: ಈ ಡಾರ್ಕ್‌ ಹ್ಯೂಮರ್‌ ಸಿನಿಮಾದಲ್ಲಿ ನಾಯಕ ಪೃಥ್ವಿ ಅಜಯ್‌ ಆ್ಯಂಬ್ಯುಲೆನ್ಸ್‌ ಡ್ರೈವರ್‌ ಪಾತ್ರದಲ್ಲಿ ನಟಿಸಿದ್ದಾರೆ. ವಿಲನ್‌ ಪಾತ್ರದಲ್ಲಿ ಭಯ ಹುಟ್ಟಿಸುತ್ತಿದ್ದ ಕಾಕ್ರೋಚ್‌ ಸುಧಿ ಇದರಲ್ಲಿ ಸ್ನೇಕ್‌ ಸೀನನಾಗಿ ನಗಿಸುತ್ತಾರೆ. ರಚನಾ ಇಂದರ್‌ ನಾಯಕಿ. ಈ ಸಿನಿಮಾದ ದ್ವೀತಿಯಾರ್ಧಕ್ಕಷ್ಟೇ ಕಾಸು. ಮೊದಲಾರ್ಧವನ್ನು ಉಚಿತವಾಗಿ ನೋಡಬಹುದು. ಅಂಬರೀಶ್‌ ಎಂ ನಿರ್ದೇಶನ, ವಿ ರವಿಕುಮಾರ್‌, ಸಂಶುದ್ದೀನ್‌ ನಿರ್ಮಾಣವಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?