ಚಂದನ್ ಶೆಟ್ಟಿ ಎದೆಗೆ ಕಾಲಿನಿಂದ ಒದ್ದ ಪ್ರಶಾಂತ್ ಸಂಬರ್ಗಿ: ಇಲ್ಲಿದೆ ಕಾರಣ!

Published : Jul 15, 2024, 06:31 PM ISTUpdated : Jul 15, 2024, 06:56 PM IST
ಚಂದನ್ ಶೆಟ್ಟಿ ಎದೆಗೆ ಕಾಲಿನಿಂದ ಒದ್ದ ಪ್ರಶಾಂತ್ ಸಂಬರ್ಗಿ: ಇಲ್ಲಿದೆ ಕಾರಣ!

ಸಾರಾಂಶ

ಅರುಣ್ ಅಮುಕ್ತ ನಿರ್ದೇಶನದ, ಚಂದನ್ ಶೆಟ್ಟಿ ನಟನೆಯ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಸೈಡ್ ಬಿ ಟ್ರೇಲರ್ ಬಿಡುಗಡೆ ಆಗಿದೆ. ಈ ಹಿಂದೆ ಸೈಡ್ ಎ ಟೇಲರ್‌ಬಿಡುಗಡೆ ಆಗಿತ್ತು. ಸೈಡ್ ಬಿ ಟೇಲರ್‌ ಮೂಲಕ ಚಿತ್ರತಂಡ ವಿಶೇಷ ರೀತಿಯಲ್ಲಿ ಪ್ರೇಕ್ಷಕರಿಗೆ ಹತ್ತಿರಾಗುವ ಪ್ರಯತ್ನ ಮಾಡಿದ್ದು, ಸೈಡ್ ಬಿ ಟೇಲರ್‌ಗೆ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ.

ಅರುಣ್ ಅಮುಕ್ತ ನಿರ್ದೇಶನದ, ಚಂದನ್ ಶೆಟ್ಟಿ ನಟನೆಯ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಸೈಡ್ ಬಿ ಟ್ರೇಲರ್ ಬಿಡುಗಡೆ ಆಗಿದೆ. ಈ ಹಿಂದೆ ಸೈಡ್ ಎ ಟೇಲರ್‌ಬಿಡುಗಡೆ ಆಗಿತ್ತು. ಸೈಡ್ ಬಿ ಟೇಲರ್‌ ಮೂಲಕ ಚಿತ್ರತಂಡ ವಿಶೇಷ ರೀತಿಯಲ್ಲಿ ಪ್ರೇಕ್ಷಕರಿಗೆ ಹತ್ತಿರಾಗುವ ಪ್ರಯತ್ನ ಮಾಡಿದ್ದು, ಸೈಡ್ ಬಿ ಟೇಲರ್‌ಗೆ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ. 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಸಿನಿಮಾ ಜು. 19ರಂದು ತೆರೆಕಾಣುತ್ತಿದೆ. ಇದು ಕಾಲೇಜು ಕತೆಯ ಜೊತೆಗೆ ಸಸ್ಪೆನ್ಸ್ ಕೈಂ ಅಂಶಗಳನ್ನೂ ಹೊಂದಿರುವ ಸಿನಿಮಾ ಎಂದು ಚಿತ್ರತಂಡ ತಿಳಿಸಿದೆ. 

ಜಬರ್ದಸ್ತ್ ಶೈಲಿಯಲ್ಲಿ ಮೂಡಿ ಬಂದಿರುವ ಈ ಟ್ರೈಲರ್ ನೋಡಿದವರೆಲ್ಲ ಸಖತ್ ಥ್ರಿಲ್ ಆಗಿದ್ದಾರೆ. ಶೀರ್ಷಿಕೆ ನೋಡಿದವರು ತಮ್ಮದೇ ಆದಂತಹ ಕಲ್ಪನೆ ಮೂಡಿಸಿಕೊಂಡಿದ್ದಾರೆ. ಆದರೆ, ಈ ಸಿನಿಮಾ ಅದೆಲ್ಲವನ್ನೂ ಮೀರಿದ ರಗಡ್ ಕಥೆಯನ್ನೊಳಗೊಂಡಿದೆ ಎಂಬುದನ್ನು ಚಿತ್ರದ ಸೈಡ್ ಬಿ ಟ್ರೈಲರ್ ಸಾಕ್ಷೀಕರಿಸಿದೆ. ಜೊತೆಗೆ ಟ್ರೈಲರ್​ನಲ್ಲಿ ಕಾಣಿಸಿರುವ ಬಿಗುವಿನಲ್ಲಿಯೇ ಒಂದಿಡೀ ಸಿನಿಮಾ ಮೂಡಿ ಬಂದಿದ್ದರೆ ಗೆಲುವು ಗ್ಯಾರಂಟಿ ಎಂಬಂಥಹ ವಿಮರ್ಶೆಗಳೂ ಕೇಳಿ ಬರುತ್ತಿವೆ. ರ್ಯಾಪರ್ ಚಂದನ್ ಶೆಟ್ಟಿಯ ಪಾತ್ರವೂ ನೋಡುಗರ ಗಮನ ಸೆಳೆದಿದೆ. 
 


ಇಲ್ಲಿ ಅವರಿಗೆ ಅಪರೂಪದ ಪಾತ್ರವೊಂದು ಸಿಕ್ಕಿರುವ ಸುಳಿವೂ ಕೂಡಾ ನೋಡುಗರಿಗೆ ಸಿಕ್ಕಿದೆ. ಮತ್ತೊಂದು ದೃಶ್ಯದಲ್ಲಿ ಪ್ರಶಾಂತ್ ಸಂಬರ್ಗಿ ಅವರು ಚಂದನ್ ಶೆಟ್ಟಿ ಎದೆಗೆ ಕಾಲಿನಿಂದ ಒದೆಯುವುದು ಕೂಡಾ ಸಖತ್ ಇಂಟರೆಸ್ಟಿಂಗ್ ಆಗಿದೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ನಿರ್ಮಾಣದ ಈ ಸಿನಿಮಾದಲ್ಲಿ ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಕುಮಾರ್ ಗೌಡ ಛಾಯಾಗ್ರಹಣ, ಶ್ರೀಕಾಂತ್ ಜಿ ಕಶ್ಯಪ್ ಕಾರ್ಯಕಾರಿ ನಿರ್ಮಾಪಕ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶವಿದೆ. ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಕಾಕ್ರೋಚ್ ಸುಧಿ, ಪ್ರಶಾಂತ್ ಸಂಬರ್ಗಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಸ್ಟೈಲಿಷ್ ರೆಡ್ ಗೌನ್​ನಲ್ಲಿ ರೋಸ್​​ನಂತೆ ಕಂಡ ನಭಾ ನಟೇಶ್‌: ಸ್ಟ್ರಾಂಗ್ ಇತ್ತು ನನ್ನ ಬಾಡಿ ವೀಕ್ ಆಯ್ತು ನಿನ್ನೋಡಿ ಅಂತನ್ನೋದಾ!

ಚಿತ್ರದ ಪಾರ್ಟಿ ಹಾಡು ಬಿಡುಗಡೆ: ಚಂದನ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಸ್ಟೂಡೆಂಟ್‌ ಪಾರ್ಟಿ ಹಾಡು ಬಿಡುಗಡೆ ಆಗಿದೆ. ಬಹದ್ದೂರ್‌ ಚೇತನ್‌ ಬರೆದಿರುವ ಹಾಡು ಇದಾಗಿದೆ. ಹಾಡಿಗೆ ಚಂದನ್‌ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ವಿಜೇತ್ ಕೃಷ್ಣ ಧ್ವನಿಯಾಗಿದ್ದಾರೆ. ಮನೋಜ್‌ ವಿವಾನ್‌, ಮನಸ್ವಿ, ಭಾವನಾ ಅಪ್ಪು, ಅಮರ್‌ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ನಿರ್ದೇಶಕ ಅರುಣ್‌ ಅಮುಕ್ತ, ‘ಚಂದನ್‌ ಶೆಟ್ಟಿ ಅವರ ಎಲ್ಲಾ ಹಾಡುಗಳಂತೆಯೇ ಈ ಹಾಡು ಕೂಡ ಹಿಟ್‌ ಆಗಲಿದೆ. ವಿದ್ಯಾರ್ಥಿಗಳು ಯಾವ ಯಾವ ಕಾರಣಗಳಿಗೆ ಪಾರ್ಟಿ ಮಾಡುತ್ತಾರೆ ಎಂಬುದರ ಮೇಲೆ ಮೂಡಿ ಬಂದಿರುವ ಹಾಡು ಇದು’ ಎಂದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವಿಲನ್ ಶೇಡ್​​ನಲ್ಲೂ ಪ್ಲೇ ಬಾಯ್ ಲುಕ್.. ಡೆವಿಲ್ ದರ್ಶನ್‌ರನ್ನ ಕಣ್ತುಂಬಿಕೊಂಡ 3 ಮಿಲಿಯನ್‌ ಮಂದಿ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!