ಮುದ್ದಿನ ಶ್ವಾನಗಳ ಬಗ್ಗೆ ಮಾತನಾಡಿದ ನಿಶ್ವಿಕಾ ನಾಯ್ತು. ಮನೆಯಲ್ಲಿ ಯಾವುದೇ ವಸ್ತುಗಳನ್ನು ಬಿಡದೆ ನಾಶ ಮಾಡಿದ ತುಂಟರು.....
ಚಂದನವನದ ಸುಂದರ ನಟಿ ನಿಶ್ವಿಕಾ ನಾಯ್ತು ಮನೆಯಲ್ಲಿ ಎರಡು ಮೂರು ನಾಯಿಗಳು ಇರುವ ವಿಚಾರ ಬಹುತೇಕರಿಗೆ ಗೊತ್ತಿದೆ. International Dog Day ಪ್ರಯುಕ್ತ ನಿಶ್ವಿಕಾ ನಾಯ್ಡು ತಮ್ಮ ಪ್ರೀತಿಯ ಶ್ವಾನಗಳ ಬಗ್ಗೆ ಹಂಚಿಕೊಂಡಿದ್ದಾರೆ.
'ನನಗೆ ಮನೆಯಲ್ಲಿ ನಾಯಿಗಳನ್ನು ಸಾಕಬೇಕು ಅನ್ನೋ ಆಸೆ ತುಂಬಾನೇ ಇತ್ತು ಆದರೆ ಮೇನ್ಟೈನ್ ಮಾಡೋದು ಕಷ್ಟ ಅಂತ ಅಮ್ಮ ಬಿಡುತ್ತಿರಲಿಲ್ಲ. ಹೀಗಾಗಿ ನನ್ನ ಹುಟ್ಟುಹಬ್ಬದಂದು ಒಂದು ಪಪ್ಪಿಯನ್ನು ತೆಗೆದುಕೊಂಡು ಬಂದು ಲಿಯೋ ಎಂದು ನಾಮಕರಣ ಮಾಡಿದೆ. ಅದು ನಮ್ಮ ಮೊದಲ ನಾಯಿ ಆಗಿತ್ತು ನನಗೆ ತಾಯಿ ತುಂಬಾನೇ ಇಷ್ಟ ಪಟ್ಟರು. ನಮ್ಮ ಮನೆಗೆ ಕಾಲಿಟ್ಟ ದಿನದಿಂದ ಆತ ದೊಡ್ಡ ಸ್ಟಾರ್ ಆಗಿದ್ದ, ಆದರೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಮ್ಮ ಬಿಟ್ಟು ಹೋದ' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಕಿರುತೆರೆ ನಟಿ ಭವ್ಯಾ ಗೌಡ ಕೈಯಲ್ಲಿ ಕೇಸರಿ ದಾರ; ಮಾಂಸ ತಿನ್ನೋದು ಬಿಟ್ರಾ ಎಂದ ನೆಟ್ಟಿಗರು!
ಎರಡು ವರ್ಷಗಳ ಹಿಂದೆ ನಮ್ಮ ಅಪಾರ್ಟ್ಮೆಂಟ್ ಬಳಿ ಇದ್ದ ಬೀದಿ ನಾಯಿವೊಂದನ್ನು ನನ್ನ ತಾಯಿ ರಕ್ಷಣೆ ಮಾಡಿದ್ದರು. ಕೆಲವು ದಿನಗಳ ಕಾಲ ಆಕೆಯನ್ನು ನೋಡಿಕೊಂಡು ಆಮೇಲೆ ಮತ್ತೊಬ್ಬರಿಗೆ ನೀಡಬೇಕಿತ್ತು ಆದರೆ ಕೊನೆಯಲ್ಲಿ ನಾವೇ ಸಾಕುವಂತೆ ಆಯ್ತು. ಆಕೆ ನಮ್ಮ ಮನೆಯಲ್ಲಿ ಇದ್ದದ್ದು ತುಂಬಾ ಖುಷಿ ಅಯ್ತು ಅವಳಿಗೆ ನಾವು ಲೂಲು ಎಂದು ನಾಮಕರಣ ಮಾಡಿದ್ದೆವು ಅಲ್ಲದೆ ನಮ್ಮ ಮೊದಲ ನಾಯಿ ಲಿಯೋ ಜೊತೆ ಚೆನ್ನಾಗಿ ಹೊಂದಿಕೊಂಡಳು' ಎಂದು ನಿಶ್ವಿಕಾ ನಾಯ್ಡು ಮಾತನಾಡಿದ್ದಾರೆ.
ನಮ್ಮ ಮೊದಲ ನಾಯಿ ಲಿಯೋ ಸತ್ತ ಮೇಲೆ ತಾಯಿ ತುಂಬಾ ಬೇಸರದಲ್ಲಿದ್ದರು. ಆ ನೋವಿನಿಂದ ಆಕೆಯನ್ನು ಹೊರ ತರಲು ನಾನು ಮತ್ತೊಂದು ನಾಯಿಯನ್ನು ಕರೆದುಕೊಂಡು ಬಂದೆ ಆಕೆಗೆ ಜ್ಯೂನಿಯರ್ ಲಿಯೋ ಎಂದು ಹೆಸರಿಟ್ಟಿದ್ದೀವಿ ಆದರೆ ನಾವು ತುಂಬಾ ಪ್ರೀತಿಯಿಂದ ಜೂನಿ ಎಂದು ಕರೆಯುತ್ತೀವಿ. ನಾನು ನಾಯಿಗಳನ್ನು ಖರೀದಿ ಮಾಡುವುದರ ಬಗ್ಗೆ ತುಂಬಾ ವಿರೋಧ ವ್ಯಕ್ತ ಪಡಿಸುತ್ತೀನಿ ಆದರೆ ಏಕೆಂದರೆ ದತ್ತು ತೆಗೆದುಕೊಳ್ಳುವುದು ಬೆಸ್ಟ್. ನಮ್ಮ ನಾಯಿಗಳನ್ನು ಬಿಟ್ಟು ಕೆಲ ಸಮಯಗಳ ಕಾಲ ಅಷ್ಟೇ ನಾವು ಹೊರ ಹೋಗಿರುತ್ತೀವಿ ಆದರೆ ನಾವು ಮನೆ ವಾಪಸ್ ಬರುವಾಗ ಅವರ ಮುಖದಲ್ಲಿ ಖುಷಿ ಆ ಎನರ್ಜಿ ನಮ್ಮ ಮನಸ್ಸು ಕರಗಿಸುತ್ತದೆ ಎಂದು ನಿಶ್ವಿಕಾ ನಾಯ್ಡು ಹೇಳಿದ್ದಾರೆ.
ನನಗೆ ತುಂಬಾ ಮೋಸ ಮಾಡಿದ್ದಾರೆ, ಎರಡು ವರ್ಷಕ್ಕೆ ಡಿವೋರ್ಸ್ ಬ್ರೇಕಪ್ ಆಗುತ್ತೆ: ರಾಗಿಣಿ ದ್ವಿವೇದಿ ಬೇಸರ
ಲೂಲು ಮತ್ತು ಜ್ಯೂನಿಯರ್ ಲಿಯೋ ಮನೆಯಲ್ಲಿ ದುಬಾರಿ ವಸ್ತುಗಳನ್ನು ನಾಶ ಮಾಡಿದೆ. ಒಮ್ಮೆ ಲೂಲು ನನ್ನ ಇಯರ್‌ಫೋನ್‌ಗಳನ್ನು ತಿಂದು ಬಿಟ್ಟಿದ್ದಳು ಜೂನಿ ಯಾವುದನ್ನು ಬಿಡದೆ ಪುಡಿಪುಡಿ ಮಾಡಿದ್ದ. ನಾನು ಎಷ್ಟೇ ಸಿಟ್ಟು ಮಾಡಿಕೊಂಡು ಕೋಪದಲ್ಲಿ ಬೈದರು ಅವುಗಳು ನಮಗೆ ಪ್ರೀತಿ ಮಾತ್ರ ಕೊಡುತ್ತದೆ ಎಂದಿದ್ದಾರೆ ನಿಶ್ವಿಕಾ.