ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಡುವೆ ಇತ್ತೀಚೆಗೆ ನಡೆದ ಘಟನೆ, ಅದರ ವಿಡಿಯೋ ಬಗ್ಗೆ ಏನೇನೂ ಗೊತ್ತಿಲ್ಲದೇ ಕಾಮೆಂಟ್ಸ್ ಹಾಕಿ ಸೋಷಿಯಲ್ ಮೀಡಿಯಾ ತುಂಬಿಸಿರೋರ ಸಂಖ್ಯೆಯೇ ಜಾಸ್ತಿ. ಆದರೆ, ನಿಜವಾಗಿ ಈ ವಿಡಿಯೋದಲ್ಲಿ ಏನಿದೆ? ಚಂದನ್-ನಿವೇದಿತಾ ನಡುವೆ..
ಚಂದನ್ ಶೆಟ್ಟಿಯವರು (Chandan Shetty) ಮತ್ತೆ ಸುದ್ದಿಯಲ್ಲಿದ್ದಾರೆ. ಕಾರಣ, ತಮ್ಮ ಹಳೆಯ ಲವ್ವರ್ ಹಾಗೂ ಮಾಜಿ ಪತ್ನಿ ಎನಿಸಿಕೊಂಡಿರುವ ನಿವೇದಿತಾ ಗೌಡ (Niveditha Gowda) ಜೊತೆಗಿನ ವಿಡಿಯೋವೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿರೋದು.. ಹೌದು, ಚಂದನ್ ಶೆಟ್ಟಿಯವರಯ ಈ ವಿಡಿಯೋದಲ್ಲಿ ನಿವೇದಿತಾ ಗೌಡ ಸನಿಹ ಬಂದು ತಲೆ ಸವರಿ, ಹಗ ಮಾಡಿ ಕಣ್ಣೀರು ತಂದುಕೊಂಡು ಅದೇನೋ ಡೈಲಾಗ್ ಹೇಳ್ತಾರೆ.. ನಿವೇದಿತಾ ಕೂಡ ಕಣ್ಣೀರು ಆಗ್ತಾರೆ. ಈ ವಿಡಿಯೋ ಈಗ ಅದೆಷ್ಟು ವೈರಲ್ ಆಗಿದೆ ಎಂದ್ರೆ ಬಹಳಷ್ಟು ಜನರು ಅದ್ರ ಬಗ್ಗೆಯೇ ಮಾತನಾಡುವಷ್ಟು!
ಈ ವಿಡಿಯೋದಲ್ಲಿ ಚಂದನ್ ಶೆಟ್ಟಿಯವರು ನಿವೇದಿತಾ ಗೌಡ ಅವರಿಗೆ 'ಗುಡ್ ಬೈ' ಹೇಳಿ ಹೋಗ್ತಾರೆ. ಹೋಗುವ ಮೊದಲು ಅವರಿಬ್ಬರ ಮಧ್ಯೆ ಅಲ್ಪಸ್ವಲ್ಪ ಮಾತುಕತೆ ಆಗುತ್ತೆ.. ಅದೂ ಕೂಡ ಅಗಲಿಕೆ ಬೇಸರದಲ್ಲಿ.. ಈ ವಿಡಿಯೋ ನೋಡಿ ಹಲವರು 'ದೇವ್ರೇ ಇಂಥ ಪರಿಸ್ಥಿತಿ ಯಾರಿಗೂ ಬರಬಾರ್ದು..' ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ. ಕೆಲವರು, ಇದು ಅವರಬ್ಬರ 'ಡಿವೋರ್ವ್ ಸೀನ್' ಅಂತ ಸಮಜಾಯಿಸಿ ಕೊಟ್ಟಿದ್ದರೆ ಕೆಲವರು 'ಅವರಿಬ್ರೂ ಮತ್ತೆ ಒಂದಾದ್ರು' ಅಂತ ಶ್ಯೂರಿಟಿ ಕೊಟ್ಟುಬಿಟ್ಟಿದ್ದಾರೆ. ಆದರೆ, ನಿಜವಾಗಿ ಆ ವಿಡಿಯೋದಲ್ಲಿ ಅದೇನಿದೆ?
ಕಾಮೆಂಟ್ಸ್‌ನಿಂದ ಓವರ್‌ಕಮ್ ಹೇಗ್ ಮಾಡ್ತೀನಿ..? ನನ್ ಮೈಂಡ್ ಅಷ್ಟು ವೀಕ್ ಅಲ್ಲ: ನಿವೇದಿತಾ ಗೌಡ
ಹೌದು, ಅದೊಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಹಲ್‌ಚಲ್ ಸೃಷ್ಟಿಸಿದೆ. ಅದನ್ನು ಬೇಡಬೇಡವೆಂದರೂ ಬಹಳಷ್ಟು ಜನ ನೋಡಿ ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದಾರೆ. ಅವುಗಳನ್ನೆಲ್ಲಾ ಓದಲು ಸಾಧ್ಯವಿಲ್ಲ. ಆದರೆ, ಕೆಲವೊಂದು ಕಾಮೆಂಟ್ಸ್ ಬಗ್ಗೆ ಹೇಳೋದಾದ್ರೆ, 'ಈ ಜಗತ್ತಿನಲ್ಲಿ ಆಗಿದ್ದೆಲ್ಲಾ ನನಗೆ ಗೊತ್ತು, ಮುಂದೇನು ಆಗಲಿದೆ ಎನ್ನೋದು ಕೂಡ ನನಗೆ ಗೊತ್ತು..' ಎಂಬಂತೆ ಇದೆ.
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಡುವೆ ಇತ್ತೀಚೆಗೆ ನಡೆದ ಘಟನೆ, ಅದರ ವಿಡಿಯೋ ಬಗ್ಗೆ ಏನೇನೂ ಗೊತ್ತಿಲ್ಲದೇ ಕಾಮೆಂಟ್ಸ್ ಹಾಕಿ ಸೋಷಿಯಲ್ ಮೀಡಿಯಾ ತುಂಬಿಸಿರೋರ ಸಂಖ್ಯೆಯೇ ಜಾಸ್ತಿ. ಆದರೆ, ನಿಜವಾಗಿ ಈ ವಿಡಿಯೋದಲ್ಲಿ ಏನಿದೆ? ಚಂದನ್-ನಿವೇದಿತಾ ನಡುವೆ ನಡೆದಿದ್ದೇನು? ಯಾಕೆ ಅವರಿಬ್ಬರೂ ಆ ಔಟ್‌ಡೋರ್‌ನಲ್ಲಿ, ಪಬ್ಲಿಕ್ ಜಾಗದಲ್ಲಿ, ಓಪನ್ ಸ್ಪೇಸ್‌ನಲ್ಲಿ ಹಗ್ ಮಾಡಿಕೊಂಡು, ಕಣ್ಣೀರು ತುಂಬಿಕೊಂಡು 'ಗುಡ್ ಬೈ' ಹೇಳಿಕೊಂಡಿದ್ದಾರೆ? ಇಲ್ಲಿದೆ ಅದಕ್ಕೆ ಉತ್ತರ..
ಚಂದನ್ ಶೆಟ್ಟಿ & ನಿವೇದಿತಾ ಗೌಡ ಸಿನಿಮಾಗಿಂತ ಹೆಚ್ಚು ಪರ್ಸನಲ್ ಟಾರ್ಗೆಟ್ ಆಗ್ತಿರೋದು ಯಾಕೆ? ಇಲ್ಲಿದೆ....
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಇತ್ತೀಚೆಗಷ್ಟೇ ಶೂಟಿಂಗ್ ಮುಗಿಸಿರುವ 'ಮುದ್ದು ರಾಕ್ಷಸಿ' ವಿಡಿಯೋದ ಸೀನ್ ಅದು.. ಅದು ಪಬ್ಲಿಸಿಟಿಗಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಅದು ರೀಲ್ ವಿಡಿಯೋ, ರಿಯಲ್ ಅಲ್ಲ ಎಂದು ಗೊತ್ತಿಲ್ಲದ ಅದೆಷ್ಟೋ ಅಮಾಯಕರು 'ಅವರಿಬ್ಬರು ಮತ್ತೆ ಒಂದಾದ್ರು, ಒಂದಾಗ್ತಾರೆ, ಹಾಗೆ ಹೀಗೆ ಅಂತ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ಸ್ ಮಾಡುತ್ತಲೆ ಇದ್ದಾರೆ. ಈ ಸಂಗತಿಯೀಗ ಸಿಕ್ಕಾಪಟ್ಟೆ ಹಲ್‌ಚಲ್ ಸೃಷ್ಟಿಸಿ ಬಹಳಷ್ಟು ಸೆನ್ಸೇಷನ್ ಸೃಷ್ಟಿಯಾಗಿದೆ.