Akatakata Movie: ವಿಭಿನ್ನ ಶೀರ್ಷಿಕೆಯ ಹೊಸ ಚಿತ್ರಕ್ಕೆ ಚೈತ್ರಾ ಆಚಾರ್‌ ನಾಯಕಿ

Published : Apr 04, 2022, 03:30 AM IST
Akatakata Movie: ವಿಭಿನ್ನ ಶೀರ್ಷಿಕೆಯ ಹೊಸ ಚಿತ್ರಕ್ಕೆ ಚೈತ್ರಾ ಆಚಾರ್‌ ನಾಯಕಿ

ಸಾರಾಂಶ

ತುಂಬಾ ಹಿಂದೆಯೇ ನಾಗರಾಜ್‌ ಸೋಮಯಾಜಿ ನಿರ್ದೇಶನದ ‘ಅಕಟಕಟ’ ಚಿತ್ರ ಟೈಟಲ್‌ ಘೋಷಣೆ ಆಗಿತ್ತು. ಈಗ ಚಿತ್ರಕ್ಕೆ ನಾಯಕಿ ಯಾರೆಂದು ಹೇಳಿಕೊಂಡಿದ್ದಾರೆ.

ತುಂಬಾ ಹಿಂದೆಯೇ ನಾಗರಾಜ್‌ ಸೋಮಯಾಜಿ (Nagaraja Somayaji) ನಿರ್ದೇಶನದ ‘ಅಕಟಕಟ’ (Akatakata) ಚಿತ್ರ ಟೈಟಲ್‌ ಘೋಷಣೆ ಆಗಿತ್ತು. ಈಗ ಚಿತ್ರಕ್ಕೆ ನಾಯಕಿ ಯಾರೆಂದು ಹೇಳಿಕೊಂಡಿದ್ದಾರೆ. ‘ಗಿಲ್ಕಿ’ ಹಾಗೂ ‘ತಲೆದಂಡ’ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಿರುವ ಚೈತ್ರಾ ಆಚಾರ್‌ (Chaitra Achar) ಅವರೇ ‘ಅಕಟಕಟ’ ಚಿತ್ರಕ್ಕೂ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಇತ್ತೀಚೆಗೆ ವಿಭಿನ್ನವಾದ ಪಾತ್ರಗಳ ಮೂಲಕ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವ ಚೈತ್ರಾ ಆಚಾರ್‌ ಅವರಿಗೆ ಮತ್ತೊಂದು ವಿಶೇಷವಾದ ಕತೆಯ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗಿದ್ದಾರೆ. 

ಈ ಚಿತ್ರದಲ್ಲಿ ಚೈತ್ರಾ ಅವರು ಜಾನಕಿ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದಾ ಖುಷಿಯಿಂದ ಇರುವ, ಸಂತೋಷವಾಗಿ ಜೀವನ ಅನುಭವಿಸುವ ಪಕ್ಕಾ ಪಾಸಿಟೀವ್‌ ಹುಡುಗಿಯ ಪಾತ್ರ ಅವರದ್ದು. ಸಂಚಾರಿ ವಿಜಯ್‌ (Sanchari Vijay) ನಟನೆಯ ‘ಪುಕ್ಸಟ್ಟೆ ಲೈಫು’ ಸಿನಿಮಾ ನಿರ್ಮಾಣ ಮಾಡಿದ್ದ ನಾಗರಾಜ್‌ ಸೋಮಯಾಜಿ ಮೂಲತಃ ಫೋಟೊಗ್ರಾಫರ್‌. ರಂಗಭೂಮಿಯಲ್ಲೂ ಸಕ್ರಿಯರಾಗಿರುವ ಅವರು ಕಿರುಚಿತ್ರವೊಂದನ್ನು ನಿರ್ದೇಶಿಸಿದ ನಂತರ ಈಗ ‘ಅಕಟಕಟ’ ಚಿತ್ರಕ್ಕೆ ತಾವೇ ಚಿತ್ರಕಥೆ ಬರೆದು ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಸದ್ಯದಲ್ಲೇ ನಾಯಕನ ಆಯ್ಕೆ ನಡೆಯಲಿದೆ.

ನಾನು ಚಿತ್ರರಂಗದಲ್ಲಿಯೇ ಉಳಿಯುತ್ತೇನೆಂದು ಅಂದುಕೊಂಡಿರಲಿಲ್ಲ; ದುಲ್ಕರ್ ಸಲ್ಮಾನ್

ಅಕಟಕಟ ಚಿತ್ರಕ್ಕೆ ನಾಗರಾಜ ಸೋಮಯಾಜಿ ನಿರ್ದೇಶನ: ಈ ಹಿಂದೆ ‘ದಿ ಬೆಸ್ಟ್‌ ಆ್ಯಕ್ಟರ್‌’ (The Best Actor) ಎನ್ನುವ ಕಿರುಚಿತ್ರ ಮಾಡಿ ಗಮನ ಸೆಳೆದಿದ್ದ ರಂಗಭೂಮಿ ಪ್ರತಿಭೆ ನಾಗರಾಜ ಸೋಮಯಾಜಿ ಈಗ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಹೆಸರು ‘ಅಕಟಕಟ’. ಚಿತ್ರದ ಶೀರ್ಷಿಕೆ ಬಿಡುಗಡೆ ಆಗಿದ್ದು, ಪ್ರತಿಭಾವಂತ ಕಲಾವಿದರನ್ನು ಹಾಕಿಕೊಂಡು ಸಿನಿಮಾ ಮಾಡುವ ಪ್ಲಾನ್‌ನಲ್ಲಿದ್ದಾರೆ ಕುಂದಾಪುರದ ಮೂಲದ ಸೋಮಯಾಜಿ. ನಿರ್ಮಾಪಕರಾಗಿಯೂ ಪಳಗಿರುವ ಇವರು ಈ ಚಿತ್ರದಿಂದ ಪೂರ್ಣ ಪ್ರಮಾಣದ ಸಿನಿಮಾ ನಿರ್ದೇಶನದತ್ತ ತೊಡಗಿಕೊಂಡಿದ್ದಾರೆ.

‘ಅಕಟಕಟ’ ಟೈಟಲ್ ಕೇಳಿದಾಕ್ಷಣ ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಈ ಮೊದಲೇ ಕೇಳಿಬಂದಿತ್ತಲ್ವಾ? ಲೂಸ್ ಮಾದ ಯೋಗಿ (Yogi) ನಾಯಕ ನಟನಾಗಿ ಅಭಿನಯಿಸುತ್ತಿರುವ ಸಿನಿಮಾ ಇದಲ್ಲವೇ.? ಎಂಬ ಪ್ರಶ್ನೆಗಳು ಮೂಡಿಬರುತ್ತವೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ನಾಗರಾಜ್ ಸೋಮಯಾಜಿ ಲೂಸ್ ಮಾದ ಯೋಗಿಗೆ ಸಿನಿಮಾ ನಿರ್ದೇಶನ ಮಾಡಬೇಕಿತ್ತು. ಆದರೆ ಇದೆಲ್ಲ ಈಗ ಹಳೆಯ ಸುದ್ದಿ. ಹಾಗೆಂದು ಅಕಟಕಟ ಪ್ರಾಜೆಕ್ಟ್ ನಿಂತಿಲ್ಲ. ಇದೀಗ ಹೊರಬಿದ್ದಿರುವ ಹೊಸ ಸುದ್ದಿಯಂದ್ರೆ ನಾಗರಾಜ್ ಸೋಮಯಾಜಿ ಅಕಟಕಟ ಸಿನಿಮಾ ಮೂಲಕ ಹೊಸಮುಖವನ್ನು ನಾಯಕ ನಟನಾಗಿ ಪರಿಚಯಿಸುತ್ತಿದ್ದಾರೆ. ಆದರೆ ಆ ನಟ ಯಾರು ಅನ್ನೋದು ಇನ್ನು ಸಸ್ಪೆನ್ಸ್.

ಮುಗ್ಗರಿಸಿ ಬಿದ್ದ ನಿವೇದಿತಾ ಗೌಡ ಎರಡು ಹಲ್ಲು ಡಮಾರ್, ಗಂಡ ಅತ್ತೆ ಮಾವ ರಿಯಾಕ್ಷನ್ ಇದು!

‘ಅಕಟಕಟ’ ಸಿನಿಮಾ ಸಬ್ಜೆಕ್ಟ್ ನೊಂದಿಗೆ ಮತ್ತೆ ಬಂದಿರುವ ನಿರ್ದೇಶಕರು ಚಿತ್ರದ ನಾಯಕ ನಟ ಯಾರು, ಚಿತ್ರತಂಡದಲ್ಲಿ ಯಾರ‍್ಯಾರು ಇರ್ತಾರೆ, ನಿರ್ಮಾಪಕರು ಯಾರು ಇದೆಲ್ಲವನ್ನು ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ. ಜನವರಿ 14ಕ್ಕೆ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಿದ್ದು, ಅಂದೇ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಎಸ್. ಕೆ. ರಾವ್ (S.K.Rao) ಕ್ಯಾಮೆರಾ ವರ್ಕ್, ಮ್ಯಾಥ್ಯೂಸ್ ಮನು (Mathews Manu) ಸಂಗೀತ ನಿರ್ದೇಶನದಲ್ಲಿ ಚಿತ್ರ ಮೂಡಿ ಬರಲಿದ್ದು, ಜನವರಿ 14ರ ಸಂಕ್ರಾಂತಿ ಹಬ್ಬದಂದು ಅಕಟಕಟ ಚಿತ್ರಕ್ಕೆ ಹೊಸ ಆರಂಭ ಸಿಗಲಿದೆ. ಈ ಹಿಂದೆ ಸಂಚಾರಿ ವಿಜಯ್‌ ನಟನೆಯ ‘ಪುಕ್ಸಟ್ಟೆಲೈಫು’ ಚಿತ್ರಕ್ಕೆ ನಾಗರಾಜ್‌ ಸೋಮಯಾಜಿ ಬಂಡವಾಳ ಹಾಕಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?
ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!