ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಶೂಟಿಂಗ್ ಸೆಟ್‌ಗೆ ರಾಕಿಂಗ್ ಸ್ಟಾರ್ ಯಶ್ ಸರ್‌ಪ್ರೈಸ್ ಭೇಟಿ..!

By Shriram Bhat  |  First Published Aug 19, 2024, 6:07 PM IST

ಬೆಂಗಳೂರಿನ ಹೆಚ್‌ಎಂಟಿ ಗ್ರೌಂಡ್‌ನಲ್ಲಿ ಯಶ್ ನಟನೆಯ 'ಟಾಕ್ಸಿಕ್' ಹಾಗೂ ಶಿವರಾಜ್‌ಕುಮಾರ್ ನಟನೆಯ '131'ನೆಯ ಸಿನಿಮಾದ ಶೂಟಿಂಗ್ ಸೆಟ್ ಹಾಕಲಾಗಿದೆ. ಕಾರ್ತಿಕ್ ಅದ್ವೈತ್ ನಿರ್ದೇಶನದ ಹೊಸ (131) ಚಿತ್ರದಲ್ಲಿ ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್ ಅವರು ನಾಯಕರಾಗಿ ನಟಿಸುತ್ತಿದ್ದಾರೆ...


ಹೆಚ್‌ಎಂಟಿ ಗ್ರೌಂಡ್‌ನಲ್ಲಿ ಕನ್ನಡದ ಇಬ್ಬರು ದಿಗ್ಗಜ ಸ್ಟಾರ್ ನಟರ ಸಮಾಗಮ ಆಗಿದೆ. ಇಂದು ರಾಕಿ ಭಾಯ್ ಖ್ಯಾತಿಯ ನಟ ಯಶ್ (Rocking Star Yash) ಅವರು ಕನ್ನಡದ ಹಿರಿಯ ನಟ, ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ (Shiva Rajkumar) ಅವರನ್ನು ಭೇಟಿಯಾಗಿದ್ದಾರೆ. ಬೆಂಗಳೂರಿನ ವಿದ್ಯಾರಣ್ಯಪುರ ಸಮೀಪದ ಹೆಚ್‌ಎಂಟಿ ಗ್ರೌಂಡ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಹ್ಯಾಟ್ರಿಕ್ ಹೀರೋ ಶಿವಣ್ಣ ಅವರನ್ನು ಅನಿರೀಕ್ಷಿತವಾಗಿ ಭೇಟಿ ಮಾಡಿದ್ದಾರೆ. 

Tap to resize

Latest Videos

ಬೆಂಗಳೂರಿನ ಹೆಚ್‌ಎಂಟಿ ಗ್ರೌಂಡ್‌ನಲ್ಲಿ ಯಶ್ ನಟನೆಯ 'ಟಾಕ್ಸಿಕ್' ಹಾಗೂ ಶಿವರಾಜ್‌ಕುಮಾರ್ ನಟನೆಯ '131'ನೆಯ ಸಿನಿಮಾದ ಶೂಟಿಂಗ್ ಸೆಟ್ ಹಾಕಲಾಗಿದೆ. ಕಾರ್ತಿಕ್ ಅದ್ವೈತ್ ನಿರ್ದೇಶನದ ಹೊಸ (131) ಚಿತ್ರದಲ್ಲಿ ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್ ಅವರು ನಾಯಕರಾಗಿ ನಟಿಸುತ್ತಿದ್ದಾರೆ. ಕೆಜಿಎಫ್ ಸಿನಿಮಾ ಮೂಲಕ ಕನ್ನಡದ ನಟ ಯಶ್ ಅವರು ಪ್ಯಾನ್ ಇಂಡಿಯಾ ನಟರಾಗಿ ಬೆಳೆದಿರುವುದು ಗೊತ್ತೇ ಇದೆ. ಈಗ ಶಿವಣ್ಣ ಕೂಡ ಹಲವು ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ಸಮರಕ್ಕೆ ಸೈ ಅಂತಿದೆ ಸ್ಟಾರ್ ಸುವರ್ಣ ವಾಹಿನಿ, ರಿಯಾಲಿಟಿ ಶೋಗೆ ಜೈ ಅಂತಾರಾ ವೀಕ್ಷಕರು..!?

ಘೋಸ್ಟ್‌ ಸೇರಿದಂತೆ ಹಲವು ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ನಟ ಶಿವಣ್ಣ ಈಗಾಗಲೇ ಕಾಣಿಸಿಕೊಂಡು ಆಗಿದೆ. ಶಿವಣ್ಣರ ಮುಂಬರಲಿರುವ 131ನೇ ಚಿತ್ರವನ್ನು ತಮಿಳು ನಿರ್ದೇಶಕರಾಗಿರುವ ಕಾರ್ತಿಕ್ ಅದ್ವೈತ್ ಮಾಡಲಿದ್ದು, ಇದು ಕನ್ನಡ ಸೇರಿದಂತೆ ತಮಿಳು ಭಾಷೆಯಲ್ಲಿ ಕೂಡ ಮೂಡಿ ಬರಲಿದೆ. ಕೆಜಿಎಫ್ ಬಳಿಕ ಕನ್ನಡದಲ್ಲಿ ಬಹಳಷ್ಟು ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೇಕಿಂಗ್ ಹಾಗೂ ಬಿಡುಗಡೆ ಆಗುತ್ತಿರುವುದು ಟ್ರೆಂಡಿಂಗ್ ಸಂಗತಿ!

ಅಂದಹಾಗೆ, ರಾಕಿಂಗ್ ಸ್ಟಾರ್ ಯಶ್ ಅವರು ನಟ ಶಿವಣ್ಣ ಅವರ ಶೂಟಿಂಗ್ ಸೆಟ್‌ಗೆ ಸರ್‌ಪ್ರೈಸ್ ವಿಸಿಟ್ ಕೊಟ್ಟಿದ್ದಾರೆ. ಯಶ್ ಅವರನ್ನು ಕಂಡೊಡನೇ ಶಿವಣ್ಣ ಹತ್ತಿರ ಬಂದು ಹಗ್ ಮಾಡಿ, ಯಶ್ ಅವರನ್ನು ಬಿಗಿದಪ್ಪಿ ಆಲಂಗನ ಮಾಡಿದ್ದಾರೆ. ಕನ್ನಡದ ಈ ಎರಡು ಮಹಾನ್ ಕಲಾವಿದರ ಸಂಗಮಕ್ಕೆ ಅಲ್ಲಿದ್ದ ಎರಡೂ ಚಿತ್ರಗಳ ತಂಡದವರು ಸಾಕ್ಷಿಯಾಗಿ ಪುಳಕ ಅನುಭವಿಸಿದ್ದಾರೆ. ನಟರಾದ ಯಶ್ ಹಾಗೂ ಶಿವಣ್ಣ ಅಲ್ಲೇ ಸ್ವಲ್ಪ ಹೊತ್ತು ಕುಳಿತು ಪರಸ್ಪರ ಮಾತುಕತೆ ನಡೆಸಿದ್ದಾರೆ. 

ಡಾರ್ಲಿಂಗ್ ಪ್ರಭಾಸ್-ಹನು ರಾಘವಪುಡಿ ಹೊಸ ಸಿನಿಮಾ ಶುರುವಾಯ್ತು; ಶುಭ ಹಾರೈಸಿದ್ದು ಯಾರು ಗೊತ್ತಾ?

ಒಟ್ಟಿನಲ್ಲಿ, ಬೆಂಗಳೂರಿನಲ್ಲೇ ಈ ಎರಡೂ ಬಿಗ್ ಬಜೆಟ್ ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ. ಶೂಟಿಂಗ್ ಸೆಟ್ ಇಲ್ಲಿಯೇ ಹಾಕಿಸುವ ಮೂಲಕ ಕನ್ನಡದ ನಟರು, ನಿರ್ಮಾಪಕರು ಹಾಗು ತಂತ್ರಜ್ಞರು ಕನ್ನಡದ ಅಭಿಮಾನವನ್ನು ಮೆರೆದಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದ ಹಲವು ಕಾರ್ಮಿಕರಿಗೆ ಕೆಲಸ ಸಿಕ್ಕಿ ಅವರೆಲ್ಲರ ಜೀವನ ನಿರ್ವಹಣೆಗೂ ಆಧಾರ ಸಿಕ್ಕಂತಾಗಿದೆ ಎನ್ನಬಹುದು. ಯಶ್-ಶಿವಣ್ಣ ಭೇಟಿ ಸ್ಯಾಂಡಲ್‌ವುಡ್ ಸ್ಟಾರ್‌ಗಳ ಸಾಮರಸ್ಯವನ್ನು ಕೂಡ ಸಾರಿ ಹೇಳುತ್ತಿದೆ ಎನ್ನಬಹುದು. 

click me!