ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್‌ಗೂ (Amir khan) ಕನ್ನಡದ ಹುಡುಗ ಯಶ್ (Yash) ಮೇಲೆ ಅಭಿಮಾನವಂತೆ. ಹಾಗಂತ ಸ್ವತಃ ಖಾನ್ ಸಾಹೇಬರೇ ಇಂಟರ್‌ವ್ಯೂನಲ್ಲಿ ಹೇಳಿಕೊಂಡಿದ್ದಾರೆ. ಅಮೀರ್‌ಗೆ ಯಶ್ ಮೇಲೆ ಏಕಾಏಕಿ ಅಭಿಮಾನ ಬರಲು ಏನು ಕಾರಣ ಇರಬಹುದು..?
ಅಮೀರ್ ಖಾನ್ (Amir khan) ಸಿನಿಮಾ ಅಂದರೆ ಅದಕ್ಕೆ ಭಾರತದ ಮಾತ್ರವಲ್ಲ, ವಿಶ್ವಾದ್ಯಂತ ಪ್ರೇಕ್ಷಕರು ಇದ್ದಾರೆ. ಬಾಲಿವುಡ್‌ನ ಪರ್ಫೆಕ್ಷನಿಸ್ಟ್ ಅಂತಲೇ ಹೆಸರಾದ ಅಮೀರ್ ಮಾಡುವ ಸಿನಿಮಾಗಳು ಕೋಟಿ ಬಾಚುವ ಮಿನಿಮಮ್ ಗ್ಯಾರಂಟಿಯೊಂದಿಗೇ ಸ್ಕ್ರೀನ್‌ಗೆ ಎಂಟ್ರಿ ಕೊಡುತ್ತವೆ. ಅಂಥಾ ಅಮೀರ್ ಖಾನ್ ಇದೀಗ ನಮ್ಮ ರಾಕಿಂಗ್ ಬಾಯ್‌ಗೆ (Rocking star) ಸಲಾಂ ಅಂದಿದ್ದಾರೆ. ನಾನೂ ಯಶ್ (Yash) ಅವರ ಅಭಿಮಾನಿ. ಅವರ ಕೆಜಿಎಫ್ 2 (KGF 2) ಸಿನಿಮಾವನ್ನು ಮೊದಲ ದಿನವೇ ನೋಡ್ತೀನಿ, ಅದೇ ಥರ ಸಿನಿಮಾಕ್ಕೆ ಪ್ರಚಾರವನ್ನೂ ಕೊಡ್ತೀನಿ ಅಂತ ಅಮೀರ್ ಹೇಳಿದ್ದಾರೆ. ಇಷ್ಟು ಮಾತ್ರ ಅಲ್ಲ, ಅಮೀರ್‌ಖಾನ್ ಈ ವಿಚಾರವನ್ನು ಯಶ್ ಅವರ ಬಳಿಯೂ ಹೇಳಿದ್ದಾರೆ. ಸುಮಾರು ಹೊತ್ತು ಯಶ್ ಜೊತೆಗೆ ಈ ಬಗ್ಗೆ ಮಾತಾಡಿದ್ದಾರಂತೆ.
ಅವರು ಮಾತ್ರ ಅಲ್ಲ, ಕೆಜಿಎಫ್ 2 ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು ಅವರ ಜೊತೆಗೂ ಮಾತನಾಡಿದ್ದಾರಂತೆ. ಅಮೀರ್ ಖಾನ್ ಹಿಂದೆಂದೂ ಯಶ್ ಬಗ್ಗೆ ಚಕಾರ ಎತ್ತಿದವರಲ್ಲ, ಕನ್ನಡ ಸಿನಿಮಾ ಕಡೆ ಕಣ್ಣೆತ್ತಿಯೂ ನೋಡಿದವರಲ್ಲ. ಇದೀಗ ಸಡನ್ನಾಗಿ ಅವರಿಗೆ ಯಶ್ ಮೇಲೆ ಅಭಿಮಾನ ಉಕ್ಕುಕ್ಕಿ ಹರಿದದ್ದು ಹೇಗೆ.. ನಮ್ಮ ಕನ್ನಡದ ಹುಡುಗ ಯಶ್ ಬಾಲಿವುಡ್ ದೈತ್ಯನಿಗೇ ಬೆವರಿಳಿಸಿ ಬಿಟ್ರಾ.. ಅಂಥದ್ದೇನಾಯ್ತು..
Raghavendra Rajkumar on Appu: ನಿನ್ನಿಂದಲೇ ನನಗೆ ಚೈತನ್ಯ ಸಿಕ್ಕಿದ್ದು!
ವಿಷ್ಯ ಮತ್ತೇನಲ್ಲ, ಯಶ್ ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಏ.14ರಂದು ಥಿಯೇಟರ್‌ನಲ್ಲಿ ಅಬ್ಬರಿಸಲಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ವಿಜಯ್ ಕಿರಗಂದೂರು ನಿರ್ಮಾಣದಲ್ಲಿ ಮೂಡಿ ಬಂದಿರುವ ಚಿತ್ರವಿದು. ಕೆಜಿಎಫ್‌ನ ಮೊದಲ ಭಾಗ 21 ಡಿಸೆಂಬರ್ 2018ರಲ್ಲಿ ತೆರೆಗೆ ಬಂದಿತ್ತು. ಆ ಸಿನಿಮಾ ಇಡೀ ದೇಶದಲ್ಲೇ ಪ್ರಚಂಡ ಗೆಲುವು ಕಂಡಿತ್ತು. ಇಡೀ ಭಾರತೀಯ ಸಿನಿಮಾ ಇಂಡಸ್ಟ್ರೀಯಲ್ಲಿ 250 ಕೋಟಿಗೂ ಅಧಿಕ ದಾಖಲೆಯ ಗಳಿಕೆ ಬಾಚಿಕೊಂಡಿತು. ಇಡೀ ಇಂಡಸ್ಟ್ರಿ ತಿರುಗಿ ನೋಡುವಂತೆ ಮಾಡಿದ್ದು ಈ ಚಿತ್ರದ ಹೆಗ್ಗಳಿಕೆ. ಜೊತೆಗೆ ಬಹುಕಾಲ ಕೆಜಿಎಫ್ ಹವಾ ಎಲ್ಲೆಡೆ ಮನೆ ಮಾಡಿತ್ತು. ಇದೀಗ ಈ ಸಿನಿಮಾದ ಸೀಕ್ವಲ್ ಕೆಜಿಎಫ್ 2 ಬರವಿಗೆ ಜನ ಎದುರು ನೋಡುತ್ತಿದ್ದಾರೆ. ಮೊದಲ ಭಾಗದಂತೆ ಈ ಭಾಗವೂ ಸೂಪರ್ ಡೂಪರ್ ಹಿಟ್ ಆಗಿ ರಾಷ್ಟ್ರವೇ ತಿರುಗಿ ನೋಡುವಂಥಾ ಗಳಿಕೆ ಮಾಡುತ್ತೆ ಅನ್ನುವುದು ಇಂಡಸ್ಟ್ರಿ ಲೆಕ್ಕಾಚಾರ.
ಇನ್ನೊಂದು ವಿಷಯ ಅಂದರೆ ಕೆಜಿಎಫ್ 2 ಬಿಡುಗಡೆಯಾಗುವ ದಿನವೇ ಅಮೀರ್ ಖಾನ್ ನಟನೆಯ 'ಲಾಲ್‌ಸಿಂಗ್ ಛಡ್ಡಾ' (Lalsingh chadda) ಚಿತ್ರವೂ ಬಿಡುಗಡೆಯಾಗಲಿದೆ. ಎರಡು ಬಿಗ್ ಬಜೆಟ್ ಸಿನಿಮಾಗಳಲ್ಲಿ ಪ್ರೇಕ್ಷಕ ಯಾವುದನ್ನು ಆರಿಸಿಕೊಳ್ಳಬಹುದು ಅನ್ನುವುದು ಸದ್ಯದ ಕುತೂಹಲ. ಆದರೆ ಅಮೀರ್ ಖಾನ್‌ನಂಥಾ ಅಮೀರ್ ಖಾನ್‌ಗೆ ಕೊಂಚ ಗೊಂದಲ ಶುರುವಾದಂತಿದೆ. ಕೆಜಿಎಫ್ 2ನ ಎದುರು ತನ್ನ ಸಿನಿಮಾ ನಿಲ್ಲಬಹುದಾ ಎಂಬ ಸಣ್ಣ ಅನುಮಾನ ಬಂದ ಹಾಗಿದೆ. ಹೀಗಾಗಿಯೇ ಅವರು ಕೆಜಿಎಫ್ 2 ಬಿಡುಗಡೆ ದಿನಾಂಕ ಮುಂದೂಡಲು ಸಾಧ್ಯವೇ ಎಂದು ಚಿತ್ರತಂಡದ ಜೊತೆಗೆ ಚರ್ಚೆ ಮಾಡಿದ್ದಾರೆ.
ಅಪ್ಪು ನಿಶ್ಚಲವಾಗಿ ಮಲಗಿದ್ದ, ಹಣೆಗೊಂದು ಮುತ್ತುಕೊಟ್ಟು ಬಂದೆ: ರವಿಚಂದ್ರನ್
ತಾನು ಯಶ್ ಅವರ ಅಭಿಮಾನಿ, ಮೊದಲ ದಿನವೇ ಕೆಜಿಎಫ್ 2 ಸಿನಿಮಾ ನೋಡ್ತೀನಿ ಅನ್ನುವ ಮೂಲಕ ಅಗಾಧ ಸಂಖ್ಯೆಯಲ್ಲಿರುವ ಯಶ್ ಫ್ಯಾನ್ಸ್ ವಿಶ್ವಾಸ ಗಳಿಸುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಅದೇ ದಿನ ತನ್ನ ಸಿನಿಮಾ ಯಾಕೆ ರಿಲೀಸ್ ಮಾಡಬೇಕು ಅನ್ನೋದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ. 'ಲಾಲ್ ಸಿಂಗ್ ಛಡ್ಡಾ'ದಲ್ಲಿ ಮೊದಲ ಬಾರಿ ಸಿಖ್ಖ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಬೈಸಾಕಿಯ ದಿನ ಸಿಖ್ಖರಿಗೆ ಬಹಳ ವಿಶೇಷ. ಹೀಗಾಗಿ ಆ ಒಳ್ಳೆಯ ದಿನವೇ ಚಿತ್ರ ಬಿಡುಗಡೆ ಮಾಡಬೇಕು ಅಂದುಕೊಂಡಿರುವೆ' ಎಂದಿದ್ದಾರೆ.
ಅಮೀರ್ ಖಾನ್ ಇಷ್ಟೆಲ್ಲ ಪ್ರಯತ್ನ ಮಾಡಿದರೂ ಕೆಜಿಎಫ್ ಟೀಮ್ ತನ್ನ ಬಿಡುಗಡೆ ದಿನಾಂಕ ಮುಂದೂಡಿದಂತಿಲ್ಲ. ಬದಲಿಗೆ ಕೆಜಿಎಫ್ ಆಕ್ಷನ್ ಚಿತ್ರ. ಅದಕ್ಕೆ ಅದರದೇ ಅಭಿಮಾನಿ ಬಳಗವಿದೆ. ಲಾಲ್‌ಸಿಂಗ್ ಛಡ್ಡಾ ಫ್ಯಾಮಿಲಿ ಡ್ರಾಮ. ಇದಕ್ಕಿರುವ ಆಡಿಯನ್ಸ್ ಬೇರೆ. ಹೀಗಾಗಿ ಎಲ್ಲೂ ಕ್ಲಾಶ್ ಆಗಲ್ಲ ಅಂತ ಅಮೀರ್ ಅವರಿಗೇ ಕನ್ವಿನ್ಸ್ ಮಾಡಿದಂತಿದೆ. ಬುದ್ಧಿವಂತ ನಟ ಇದರಿಂದ ಕನ್ವಿನ್ಸ್ ಆದಂತಿದೆ. ಜೊತೆಗೆ ಯಶ್ ಅಭಿಮಾನಿಗಳನ್ನು ಎದುರು ಹಾಕಿಕೊಳ್ಳದೇ ಅವರನ್ನೂ ಒಲಿಸಿಕೊಳ್ಳುವ ಪ್ರಯತ್ನ ಚಾಲ್ತಿಯಲ್ಲಿದೆ.